ರಾಜ್ಯದಲ್ಲಿಂದು 28,723 ಕೋವಿಡ್​ ಕೇಸ್​ ಪತ್ತೆ: ಬೆಂಗಳೂರಲ್ಲೇ 20 ಸಾವಿರ ಮಂದಿಗೆ ಸೋಂಕು

author img

By

Published : Jan 14, 2022, 5:59 PM IST

Updated : Jan 14, 2022, 7:48 PM IST

karnataka covid

ರಾಜ್ಯದಲ್ಲಿ ಇಂದು 28,723 ಕೋವಿಡ್ ಕೇಸ್​ಗಳು ವರದಿಯಾಗಿವೆ. ಈ ಪೈಕಿ ಬೆಂಗಳೂರಿನಲ್ಲಿ 20,121 ಮಂದಿಗೆ ವೈರಸ್ ಬಾಧಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿದೆ. ನಿನ್ನೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿತ್ತು. ಆದರೆ ಇಂದು ಹೊಸದಾಗಿ 28,723 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.

ರಾಜಧಾನಿಯದ್ದೇ ಸಿಂಹಪಾಲು:

ಇಂದು ವರದಿಯಾದ 28,723 ಕೇಸ್​ಗಳು ಹಾಗೂ 14 ಸಾವಿನ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 20,121 ಮಂದಿಗೆ ವೈರಸ್​ ಅಂಟಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 3,105 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೆ, 7 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 16,443ಕ್ಕೆ ಏರಿದೆ. ಸದ್ಯ 1,09,312 ಸಕ್ರಿಯ ಪ್ರಕರಣಗಳಿವೆ.

  • Highest testing since the beginning of pandemic with 2.21 lakh tests today.
    ◾New cases in State:28,723
    ◾New cases in B'lore: 20,121
    ◾Positivity rate in State: 12.98%
    ◾Discharges: 3,105
    ◾Active cases State: 1,41,337 (B'lore- 101k)
    ◾Deaths:14 (B'lore- 07)
    ◾Tests: 2,21,205

    — Dr Sudhakar K (@mla_sudhakar) January 14, 2022 " class="align-text-top noRightClick twitterSection" data=" ">

ಬೆಂಗಳೂರು ವಿಮಾನ ನಿಲ್ದಾಣಕ್ಕೆ 825 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶದಿಂದ 176 ಪ್ರಯಾಣಿಕರು ಬಂದಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್​​ ಶೇ.12.98ರಷ್ಟಿದೆ. ಇಂದು ಒಂದೇ ದಿನ 2,21,205 ಜನರಿಗೆ ಕೋವಿಡ್​ ಟೆಸ್ಟ್ ಮಾಡಲಾಗಿದೆ. ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ತಿಳಿಸಿದ್ದಾರೆ.

ರೂಪಾಂತರಿ ಮಾಹಿತಿ:

ಅಲ್ಪಾ - 156

ಬೇಟಾ - 08

ಡೆಲ್ಟಾ - 2,937

ಡೆಲ್ಟಾ ಸಬ್ ಲೈನ್ ಏಜ್ - 1,350

ಕಪ್ಪಾ - 160

ಈಟಾ - 01

ಒಮಿಕ್ರಾನ್ - 479

ಇದನ್ನೂ ಓದಿ: ಕೊರೊನಾ ಸ್ಫೋಟ: ರಾಜ್ಯದಲ್ಲಿ ಲಾಕ್​​ಡೌನ್ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು?

Last Updated :Jan 14, 2022, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.