ರಾಜ್ಯದಲ್ಲಿಂದು 787 ಮಂದಿಗೆ ಕೋವಿಡ್.. ಗಣೇಶ್ ಹಬ್ಬದ ಬಳಿಕ ಕೇಸ್ ಏರಿಕೆಯ ಆತಂಕ..

author img

By

Published : Sep 25, 2021, 8:19 PM IST

COVID

ಮಾರ್ಕೆಟ್ ಹಾಗೂ ಜನಸಂದಣಿಯ ಪ್ರದೇಶದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಆಗಿದೆ. ಹೀಗಾಗಿ, ಹಬ್ಬದ ಬಳಿಕ ಸೋಂಕು ಹೆಚ್ಚುವ ಸಾಧ್ಯತೆ ಇದೆ‌. ಸಿಲಿಕಾನ್ ಸಿಟಿಯ ಪ್ರಮುಖ ಏರಿಯಾಗಳಲ್ಲಿ ಟೆಸ್ಟ್ ಶುರು ಮಾಡಲಾಗಿದೆ..

ಬೆಂಗಳೂರು : ರಾಜ್ಯದಲ್ಲಿಂದು 1,40,832 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 787 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,72,620ಕ್ಕೆ ಏರಿಕೆ ಆಗಿದೆ. ಇಂದು 775 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಗುಣಮುಖರ ಸಂಖ್ಯೆ 29,21,567ಕ್ಕೆ ಏರಿದೆ.

11 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,717ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 13,307ರಷ್ಟಿವೆ. ಸೋಂಕಿತರ ಪ್ರಮಾಣ ಶೇ.0.55ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.39ರಷ್ಟಿದೆ.

ಗೌರಿ ಗಣೇಶ ಹಬ್ಬದ ಬಳಿಕ ಕೊರೊನಾ ಏರಿಕೆ ಆತಂಕ : ಗೌರಿ-ಗಣೇಶ ಹಬ್ಬ ಮುಗಿದ ಎರಡು ವಾರದಲ್ಲಿ ಸೋಂಕು ಏರಿಕೆ ಸಾಧ್ಯತೆ ಹೆಚ್ಚಿದೆ. ಹಬ್ಬದ ಸಮಯದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ರ್ಯಾಂಡಮ್​ ಟೆಸ್ಟ್​ಗೆ ಬಿಬಿಎಂಪಿ ಮುಂದಾಗಿದೆ.

ಕೇರಳದಲ್ಲಿ ಮೋಹರಂ ಹಾಗೂ ಓಣಂ ಬಳಿಕ ಸೋಂಕು ಏರಿಕೆಯಾಗಿತ್ತು. ಹೀಗಾಗಿ, ಗೌರಿ ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಪಾಲಿಕೆ ಅಲರ್ಟ್ ಆಗಿದೆ. ಹಬ್ಬದ ಸಮದಯಲ್ಲಿ ಜನ್ರು ಕೋವಿಡ್ ನಿಯಮ ಮರೆತು ಓಡಾಡಿದ್ದಾರೆ.

ಮಾರ್ಕೆಟ್ ಹಾಗೂ ಜನಸಂದಣಿಯ ಪ್ರದೇಶದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಆಗಿದೆ. ಹೀಗಾಗಿ, ಹಬ್ಬದ ಬಳಿಕ ಸೋಂಕು ಹೆಚ್ಚುವ ಸಾಧ್ಯತೆ ಇದೆ‌. ಸಿಲಿಕಾನ್ ಸಿಟಿಯ ಪ್ರಮುಖ ಏರಿಯಾಗಳಲ್ಲಿ ಟೆಸ್ಟ್ ಶುರು ಮಾಡಲಾಗಿದೆ.

ಮಾರ್ಕೆಟ್ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಸೋಂಕು ಏರಿಕೆಯಾದ್ರೆ ಆರಂಭದಲ್ಲಿಯೇ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ. ಸಮುದಾಯಕ್ಕೆ ಸೋಂಕು ಹರಡದಂತೆ ಇದು ಸಹಕಾರಿಯಾಗಲಿದೆ. ಕೇರಳ ಹಾಗೂ ಮಹಾರಾಷ್ಟ್ರಗಳಿಂದ ಬರುವ ಬಸ್, ಟ್ರೈನ್‌ಗಳಲ್ಲಿನ ಪ್ರಯಾಣಿಕರಿಗೆ ಹೆಚ್ಚು ಹೆಚ್ಚು ಟೆಸ್ಟ್ ಮಾಡಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.