ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೇ ಅಧಿಕಾರವೇ ಬೇಕು.. 'ಕೈ'ಹಿಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಕಿಡಿ..

author img

By

Published : Sep 18, 2021, 4:11 PM IST

Updated : Sep 18, 2021, 5:45 PM IST

i will joining to congress: kolar jds mla srinivas gowda

ಕೆ ಸಿ ವ್ಯಾಲಿ ಯೋಜನೆಯನ್ನ ಕೊಚ್ಚೆ ನೀರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅದೇ ಕೊಚ್ಚೆ ನೀರನ್ನ ನಾನು ಕುಡಿದಿಲ್ವಾ? ಸತ್ತೋಗಿದಿನಾ ನಾನು ಎಂದು ಪ್ರಶ್ನಿಸಿದರು. ಜೊತೆಗೆ ದೇವೇಗೌಡರದ್ದೂ ರೈತರ ಕುಟುಂಬವಾಗಿ, ಕೆ ಸಿ ವ್ಯಾಲಿ ಯೋಜನೆ ಕುರಿತು ಏಕೆ ಲಘುವಾಗಿ ಮಾತನಾಡಬೇಕೆಂದರು. ನಾನು ಒಬ್ಬ ಶಾಸಕ ಅನ್ನೋದಕ್ಕಿಂತ ಮೊದಲು ರೈತನ ಮಗ. ಹೀಗಾಗಿ, ಕೆ ಸಿ ವ್ಯಾಲಿ ನೀರಿ‌ನ ಬಗ್ಗೆ ಮಾತನಾಡಿದರೆ ಸಹಿಸೋದಿಲ್ಲ..

ಕೋಲಾರ : ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇಂದು ಕೋಲಾರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದು, ಬಹಿರಂಗವಾಗಿ ಕಾಂಗ್ರೆಸ್ ಸೇರುವ ಘೋಷಣೆ ಮಾಡಿದ್ದಾರೆ.

ಕೆ ಸಿ ವ್ಯಾಲಿ ಯೋಜನೆ ಕುರಿತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೃಷ್ಣ ಭೈರೇಗೌಡರನ್ನು ಹೊಗಳಿದಕ್ಕೆ ಅವರಿಗೆ ಬಾಧೆಯಾಗಿದೆ. ಹೀಗಾಗಿ, ನನ್ನನ್ನ ಬುಧುವಾರ ಪಕ್ಷದಿಂದ ಉಚ್ಛಾಟಿಸಿದ್ದಾರೆ. ರಮೇಶ್ ಕುಮಾರ್ ಹಾಗೂ ಕೃಷ್ಣಭೈರೇಗೌಡ ಇಬ್ಬರು ಮಹಾನುಭಾವರು ನಮ್ಮ ಭಾಗಕ್ಕೆ ನೀರು ತಂದಿದ್ದಾರೆ ಎಂದ ಅವರು, ದೇವೇಗೌಡ್ರು ಹಾಗೂ ಅವರ ಮಕ್ಕಳು ಬಹಳ ದೊಡ್ಡವರು ಎಂದು ಟೀಕಾ ಪ್ರಹಾರ ನಡೆಸಿದ್ರು‌.

ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೇ ಅಧಿಕಾರವೇ ಬೇಕು.. 'ಕೈ'ಹಿಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಕಿಡಿ..

ಕೆ ಸಿ ವ್ಯಾಲಿ ಯೋಜನೆಯನ್ನ ಕೊಚ್ಚೆ ನೀರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅದೇ ಕೊಚ್ಚೆ ನೀರನ್ನ ನಾನು ಕುಡಿದಿಲ್ವಾ? ಸತ್ತೋಗಿದಿನಾ ನಾನು ಎಂದು ಪ್ರಶ್ನಿಸಿದರು. ಜೊತೆಗೆ ದೇವೇಗೌಡರದ್ದೂ ರೈತರ ಕುಟುಂಬವಾಗಿ, ಕೆ ಸಿ ವ್ಯಾಲಿ ಯೋಜನೆ ಕುರಿತು ಏಕೆ ಲಘುವಾಗಿ ಮಾತನಾಡಬೇಕೆಂದರು. ನಾನು ಒಬ್ಬ ಶಾಸಕ ಅನ್ನೋದಕ್ಕಿಂತ ಮೊದಲು ರೈತನ ಮಗ. ಹೀಗಾಗಿ, ಕೆ ಸಿ ವ್ಯಾಲಿ ನೀರಿ‌ನ ಬಗ್ಗೆ ಮಾತನಾಡಿದರೆ ಸಹಿಸೋದಿಲ್ಲ ಎಂದರು.

'ಲಗಾಮು ಹಾಕಿ ಜೆಡಿಎಸ್‌ಗೆ ಎಳೆದುಕೊಂಡು ಹೋದ್ರೆ ಏನು ಮಾಡಬೇಕು'

ದೇವೇಗೌಡ್ರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರವೇ ಬೇಕು, ಜೆಡಿಎಸ್ ಅನ್ನೋದು ಇವರ ಕುಟುಂಬಕ್ಕೆ ಮಾತ್ರ ಸೀಮಿತನಾ? ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಂದು ನಾನು ಜೆಡಿಎಸ್ ಸೇರಿದ್ದೆ. ಆದ್ರೆ, ನನ್ನನ್ನು ಲಗಾಮು ಹಾಕಿ ಜೆಡಿಎಸ್‌ಗೆ ಎಳೆದುಕೊಂಡು ಹೋದ್ರೆ ಏನು ಮಾಡಬೇಕು ಎಂದರು. ಇನ್ನು, ಮಾತ್ತೆತ್ತಿದ್ರೆ ನಮ್ಮದು ರೈತರ ಕುಟುಂಬ ಅಂತಾ ಹೇಳಿಕೊಳ್ತಾರೆ.

ಎರಡು ಬಾರಿ ಸಿಎಂ ಆದಾಗ ಕೊಚ್ಚೆ ನೀರು ಬದಲು ಒಳ್ಳೆ ನೀರು ಕೊಡಬಹುದಿತ್ತಲ್ವಾ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ರು. ಉಚ್ಚಾಟನೆ ಮಾಡಿರೋದು ಸಂತೋಷ, ನನ್ನ ಮಗ ರಮೇಶ್‌ಕುಮಾರ್ ವ್ಯಾಪ್ತಿಗೆ ಬರುವ ಹೊಳೋರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎಂದರು.

'ಒಬ್ಬ ಮಹಾನುಭಾವ ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಿಸಿದ್ರು'

ನಾನು ಡಿಕೆಶಿ ಬಳಿ ಚರ್ಚಿಸಿದೇನೆ. ಗ್ರೀನ್ ಸಿಗ್ನಲ್ ಸಿಕ್ಕಿದೆ. ನನ್ನನ್ನು ಕಾಂಗ್ರೆಸ್‌ನ ಒಬ್ಬ ಮಹಾನುಭಾವ ಪಕ್ಷದಿಂದ ಉಚ್ಛಾಟನೆ ಮಾಡಿಸಿದ್ರು. ಹೀಗಾಗಿ, ಜೆಡಿಎಸ್ ಪಕ್ಷಕ್ಕೆ ಹೋದೆ ಎಂದು ಡಿಕೆಶಿ ಬಳಿ ತಿಳಿಸಿರುವುದಾಗಿ ಹೇಳಿದ್ರು‌. ಈಗ ಆ ಮಹಾನುಭಾನ ಹೆಸರೇ ಇಲ್ಲದಂಗೆ ಹೋಗಿದ್ದಾನೆ. ಜನರು ಸಹ ಮರೆತಿದ್ದಾರೆಂದು ಪರೋಕ್ಷವಾಗಿ ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ವಿರುದ್ಧ ವ್ಯಂಗ್ಯವಾಡಿದರು.

ಇದನ್ನೂ ಓದಿ: ಪಕ್ಷದ ವಿರುದ್ಧ ಹೇಳಿಕೆ: ಶಾಸಕ ಶ್ರೀನಿವಾಸ ಗೌಡ ವಿರುದ್ಧ ಕ್ರಮ ಕೈಗೊಳ್ಳುತ್ತಾ ಜೆಡಿಎಸ್?

Last Updated :Sep 18, 2021, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.