HUBನಿಂದ ಕೈಗೆಟುಕುವ ದರದಲ್ಲಿ ಬಾಡಿಗೆ ಮನೆಗಳ ಒಳಾಂಗಣ ವಿನ್ಯಾಸ

author img

By

Published : Sep 16, 2021, 3:14 PM IST

Homes Under Budget

ಬೆಂಗಳೂರು ಮೂಲದ ಹೋಮ್ಸ್ ಅಂಡರ್ ಬಜೆಟ್ (HUB) ಕಂಪನಿಯು 'ಬಜೆಟ್' ಸರಣಿಯನ್ನು ಆರಂಭಿಸಿದೆ. ಇದರಡಿ ಬಾಡಿಗೆ ಮನೆಗಳ ಒಳಾಂಗಣ ವಿನ್ಯಾಸವನ್ನು ಎಲ್ಲರಿಗೂ ಮತ್ತಷ್ಟು ಕೈಗೆಟುಕುವಂತೆ ಮಾಡಿಕೊಡಲಿದೆ.

ಬೆಂಗಳೂರು: ಬಾಡಿಗೆ ಮನೆಗಳ ಒಳಾಂಗಣ ವಿನ್ಯಾಸವನ್ನು ಎಲ್ಲರಿಗೂ ಮತ್ತಷ್ಟು ಕೈಗೆಟುಕುವಂತೆ ಮಾಡಲು ಬೆಂಗಳೂರು ಮೂಲದ ಹೋಮ್ಸ್ ಅಂಡರ್ ಬಜೆಟ್ (HUB) ಕಂಪನಿಯು 'ಬಜೆಟ್' ಸರಣಿ ಆರಂಭಿಸಿದೆ.

ಹೋಮ್ಸ್ ಅಂಡರ್ ಬಜೆಟ್ ಅಥವಾ ಹಬ್​ ಇದು ಮನೆ-ಕಟ್ಟಡಗಳ ಒಳಾಂಗಣ ವಿನ್ಯಾಸ ಸೇವೆ ಒದಗಿಸುವ ಕಂಪನಿಯಾಗಿದೆ. ಈ ಕಂಪನಿಯನ್ನು 2019 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಈವರೆಗೆ ಸುಮಾರು 250 ಮನೆಗಳ ಒಳಾಂಗಣ ವಿನ್ಯಾಸಗೊಳಿಸಿದೆ.

ಮನೆಯ ಒಳಾಂಗಣ ವಿನ್ಯಾಸವು ದುಬಾರಿ ವ್ಯವಹಾರವಾಗಿದೆ ಎಂಬ ನಮ್ಮ ಗ್ರಾಹಕರ ಮನಸ್ಸಿನ ಆಲೋಚನೆಯನ್ನು ನಾವು ಭಗ್ನಗೊಳಿಸಿದ್ದೇವೆ. ನಮ್ಮ ಈ 'ಬಜೆಟ್' ಸರಣಿಯು ಒತ್ತಮ ಗುಣಮಟ್ಟ, ಬದ್ಧತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂಬ ಭರವಸೆಯೊಂದಿಗೆ ಬರುತ್ತಿದೆ ಎನ್ನುತ್ತಾರೆ HUBನ ಸ್ಥಾಪಕ ಮತ್ತು ನಿರ್ದೇಶಕ ರಂಜಿತ್ ಪಿ ರಾಜ್.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವವರಿಗೆ ಕಹಿ ಸುದ್ದಿ ; ಶೀಘ್ರದಲ್ಲೇ ಈ ಸೇವೆಯೂ ಜಿಎಸ್‌ಟಿ ವ್ಯಾಪ್ತಿಗೆ!

HUB ನೊಂದಿಗೆ ಮನೆ ಮಾಲೀಕರು, ಬಾಡಿಗೆದಾರರು ಮತ್ತು ಗುತ್ತಿಗೆದಾರರು ಬೆಂಗಳೂರಿನಲ್ಲಿ ಸುಂದರವಾದ ಮನೆಯೊಂದನ್ನು ಹೊಂದುವ ಕನಸು ಕಾಣಬಹುದಾಗಿದೆ. ಐಷಾರಾಮಿ ಒಳಾಂಗಣ ವಿನ್ಯಾಸವನ್ನು ಬ್ರಾಂಡೆಡ್ ವಸ್ತುಗಳ ಬಳಸಿ, ಕೈಗೆಟುಕುವ ಹಣದಲ್ಲಿ ನಾವು ಮಾಡಿಕೊಡುತ್ತೇವೆ ಎಂದು ರಂಜಿತ್ ಹೇಳಿದರು.

ಬಜೆಟ್ ಸರಣಿ ಅಡಿಯಲ್ಲಿ 3D ದೃಶ್ಯೀಕರಣ, ಸುಲಭ ಇಎಂಐ ಆಯ್ಕೆ, 49 ದಿನಗಳ ಒಳಗೆ ವಸ್ತುಗಳ ಡೆಲಿವರಿ, 5 ವರ್ಷಗಳ ಗ್ಯಾರೆಂಟಿ ಹಾಗೂ ಗ್ರಾಹಕ ಸೇವಾ ತಂಡವೂ ಪ್ಯಾಕೇಜ್ ಕೊಡುಗೆಗಳ ಭಾಗವಾಗಿರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.