ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

author img

By

Published : Jun 23, 2022, 9:01 AM IST

cheating case

ಫೇಸ್​ಬುಕ್​ ಅಲ್ಲಿ ಫ್ರೆಂಡ್​, ಲವ್​ ಅಂತ ನಂಬಿಕೊಂಡ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಖಾಸಗಿ ಫೈನಾನ್ಸ್​​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿರುವ ಬೆಂಗಳೂರಿನ 48 ವರ್ಷದ ವ್ಯಕ್ತಿಯೊಬ್ಬರಿಗೆ ಫೇಸ್‍ಬುಕ್ ಮೂಲಕ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ 35 ಲಕ್ಷ ವಂಚನೆ ಮಾಡಿದ್ದಾಳೆ.

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಅಂದದ ಅಪರಿಚಿತ ಯುವತಿಯರ ಜೊತೆ ಸ್ನೇಹ ಬೆಳೆಸುವ ಮುನ್ನ ಎಚ್ಚರ. ಲವ್​ ಅಂತ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣಗಳನ್ನ ನೀವೆಲ್ಲಾನೋಡಿದ್ದೀರಿ. ಇಲ್ಲೊಬ್ಬರು ಸಹ ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಕ್ಕೆ ಬರೋಬ್ಬರಿ 35 ಲಕ್ಷ ಬೆಲೆ ತೆತ್ತಿದ್ದಾರೆ.

ಖಾಸಗಿ ಫೈನಾನ್ಸ್​​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿರುವ ಬೆಂಗಳೂರಿನ 48 ವರ್ಷದ ವ್ಯಕ್ತಿಯೊಬ್ಬರಿಗೆ ಫೇಸ್‍ಬುಕ್ ಮೂಲಕ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ, 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ. ಮೊದಲಿಗೆ ಫ್ರೆಂಡ್​ ರಿಕ್ವೆಸ್ಟ್ ​ ಕಳಿಸಿದ್ದ ನ್ಯಾನ್ಸಿ ವಿಲಿಯಂ ನಂತರ ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾಳೆ.

ವಂಚನೆ ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ ಭೀಮಾಶಂಕರ ಗುಳೇದ್

ಪರಸ್ಪರ ಇಬ್ಬರೂ ಫೋನ್​ ನಂಬರ್​ ಎಕ್ಸ್​ಚೇಂಜ್​ ಮಾಡಿಕೊಂಡು ನಂತರ ವಾಟ್ಸ್​ಆ್ಯಪ್​ನಲ್ಲಿ ಚಾಟಿಂಗ್​, ಕಾಲ್​ ​ಮಾಡಿದ್ದಾರೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಇಬ್ಬರು ಒಟ್ಟಿಗೆ ಸೇರಿ ಬ್ಯುಸಿನೆಸ್​ ಆರಂಭಿಸೋಣ, ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್​ನಲ್ಲಿ ತೊಡಗುತ್ತೇನೆ ಅಂತಾ ನ್ಯಾನ್ಸಿ ನಂಬಿಸಿದ್ದಾಳೆ. ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳಿದ್ದಾಳೆ.

ನ್ಯಾನ್ಸಿ ಮಾತಿಗೆ ಮರುಳಾದ ಬೆಂಗಳೂರಿನ ವ್ಯಕ್ತಿ,​ ಹಂತ ಹಂತವಾಗಿ 35 ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಅತ್ತ ಹಣ ಅಕೌಂಟ್​ಗೆ ತಲುಪುತ್ತಿದ್ದಂತೆ ಫೇಸ್​ ಬುಕ್​ ಖಾತೆ ಡಿಲೀಟ್​ ಮಾಡಿರುವ ನ್ಯಾನ್ಸಿ ವಿಲಿಯಂ, ನಾಪತ್ತೆಯಾಗಿದ್ದಾಳೆ.

ಫೇಸ್‌ಬುಕ್‌ ಗೆಳತಿಯ ಬಣ್ಣದ ಮಾತಿಗೆ ಮರುಳಾಗಿ ವಂಚನೆಗೆ ಒಳಗಾದ ಬೆಂಗಳೂರಿನ ನಿವಾಸಿ, ಆಕೆಯ ವಿರುದ್ಧ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ದೇವರ ಪಾದ ಸೇರಿದ 10 ಜನ ಯಾತ್ರಿಕರು, 7 ಮಂದಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.