ನ್ಯುಮೋನಿಯಾಗೆ ತುತ್ತಾಗಿದ್ದವನ ಜೀವ ಉಳಿಸಿದ ಎಕ್ಮೊ ಚಿಕಿತ್ಸೆ.. ಬಿಜಿಎಸ್ ಗ್ಲೆನಿಗ್ಲಸ್​​​​ ಗ್ಲೋಬಲ್ ಆಸ್ಪತ್ರೆ ವೈದ್ಯರ ಸಾಧನೆ

author img

By

Published : Dec 22, 2021, 8:54 PM IST

ecmo therapy

ಗಂಭೀರ ಸ್ವರೂಪದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಗ್ಲೆನಿಗ್ಲೆಸ್​​ ಗ್ಲೋಬಲ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಗಂಭೀರ ಸ್ವರೂಪದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸುಮಾರು 3 ವಾರಗಳ ಕಾಲ ಎಕ್ಮೊ ಬೆಂಬಲದಿಂದ ಚಿಕಿತ್ಸೆ ಪಡೆಯುತ್ತಾ ಬೆಂಗಳೂರಿನ 39 ವರ್ಷದ ರೋಗಿಯೊಬ್ಬರು ಬಿಜಿಎಸ್ ಗ್ಲೆನಿಗ್ಲೆಸ್​​ ಗ್ಲೋಬಲ್ ಆಸ್ಪತ್ರೆಯಲ್ಲಿ ಗುಣಮುಖರಾಗಿದ್ದಾರೆ.

ಕಳೆದ ನವೆಂಬರ್ 22 ರಂದು ಆಸ್ಪತ್ರೆಗೆ ಬಂದಾಗ ಅವರಲ್ಲಿ 103 - 104 ಡಿಗ್ರಿಯಷ್ಟು ಜ್ವರ, ಹೈಪೋಕ್ಸಿಯಾದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ನಡೆಸಿದಾಗ ರೋಗಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ವೈದ್ಯರಿಗೆ ತಿಳಿಯಿತು. ಆ ಕೂಡಲೇ ಅವರನ್ನು ಐಸಿಯುಗೆ ದಾಖಲು ಮಾಡಲಾಯಿತು.

ಮಹೇಶ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರೂ ಸಹ ಸುಮಾರು 7 ದಿನಗಳ ಕಾಲ ಉಸಿರಾಟದ ತೊಂದರೆ ಮತ್ತು ಅಧಿಕ ಜ್ವರದಿಂದ ಬಳಲುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಗಂಭೀರ ಸ್ವರೂಪದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದುದು ಪತ್ತೆಯಾಯಿತು.

ಅಂದರೆ 25 ರಲ್ಲಿ 22 ಪಾಯಿಂಟ್‍ನಷ್ಟು ಸೋಂಕು ಹರಡಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘವಾದ ಸಮಾಲೋಚನೆ ಮತ್ತು ಇತರ ವೈದ್ಯರ ತಂಡಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ರೋಗಿಗೆ ಚಿಕಿತ್ಸಾ ಯೋಜನೆಯನ್ನು ರೂಪಿಸಲಾಯಿತು.

ಬಿಜಿಎಸ್ ಗ್ಲೆನಿಗ್ಲೆಸ್​​ ಗ್ಲೋಬಲ್ ಹಾಸ್ಪಿಟಲ್‍ನ ಐಸಿಯು ಮತ್ತು ಕೋವಿಡ್ ಐಸಿಯು ವಿಭಾಗದ ವೈದ್ಯಕೀಯ ಮುಖ್ಯಸ್ಥ ಡಾ.ಗೌರೀಶಂಕರ್ ರೆಡ್ಡಿ ಮಾನೆ ಮಾತನಾಡಿ, ರೋಗಿಯ ಕುಟುಂಬ ಸದಸ್ಯರ ಅನುಮತಿ ಪಡೆದು ವೈದ್ಯರು ನವೆಂಬರ್ 26 ರ ಮಧ್ಯರಾತ್ರಿ ರೋಗಿ ಮಹೇಶ್ ಗೆ ವೆಂಟಿಲೇಟರ್ ಅಳವಡಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿಂದು 321 ಮಂದಿಗೆ ಕೋವಿಡ್ ದೃಢ, ನಾಲ್ವರು ಸೋಂಕಿತರ ಸಾವು

ಸೋಂಕು ಕಡಿಮೆ ಮಾಡಲು ಮತ್ತು ಜೀವಾಣುಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ವೈದ್ಯರು ರೋಗಿಯನ್ನು ಎಕ್ಸ್‍ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ ಅನ್ನು ಅಳವಡಿಸಲು ನಿರ್ಧರಿಸಿದರು. ಇದೊಂದು ಜೀವ ರಕ್ಷಕವಾಗಿದ್ದು, ನವೆಂಬರ್ 27 ರ ಬೆಳಗಿನ ಜಾವ 3 ಗಂಟೆಗೆ ಎಕ್ಮೊಗೆ ಒಳಪಡಿಸಿದರು.

ರೋಗಿಯನ್ನು 15 ದಿನಗಳಿಗೂ ಅಧಿಕ ಕಾಲದವರೆಗೆ ಎಕ್ಮೊ ಮತ್ತು ಐಸಿಯು ಸಪೋರ್ಟ್‍ನಲ್ಲಿಡಲಾಯಿತು. ಆದರೆ, ರೋಗಿಯು ಸೋಂಕು ಮತ್ತು ರಕ್ತಸ್ರಾವದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಕಾರಣದಿಂದ ಎಕ್ಮೊ ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಯ ಮೇಲೆ ನಿರಂತರವಾಗಿ ನಿಗಾ ಇಡುವ ಅಗತ್ಯವಿತ್ತು. ಬಳಿಕ ಚೇತರಿಸಿಕೊಂಡ ರೋಗಿ ಇದೀಗ ಗುಣಮುಖರಾಗಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.