ಅಪಾರ್ಟ್​​ಮೆಂಟ್​ನಲ್ಲಿ 10 ಕೋವಿಡ್ ಸೋಂಕಿತರಿದ್ದರೂ ಸಂಪೂರ್ಣ ಕಟ್ಟಡ 7 ದಿನ ಕಂಟೈನ್​ಮೆಂಟ್!

author img

By

Published : Jan 14, 2022, 2:23 PM IST

Updated : Jan 14, 2022, 2:38 PM IST

covid rules for bangalore apartments

ಕೋವಿಡ್ ಅಪಾರ್ಟ್​ಮೆಂಟ್ ನಿವಾಸಿಗಳನ್ನು ಹೆಚ್ಚು ಹೈರಾಣಾಗಿಸುತ್ತಿದೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಪಾಲಿಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ..

ಬೆಂಗಳೂರು : ಕೊರೊನಾ ಮೂರನೇ ಅಲೆ ಹಾಗೂ ರೂಪಾಂತರಿ ಒಮಿಕ್ರಾನ್ ಅಪಾರ್ಟ್​ಮೆಂಟ್ ನಿವಾಸಿಗಳನ್ನು ಹೆಚ್ಚು ಹೈರಾಣಾಗಿಸುತ್ತಿದೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಪಾಲಿಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಅಪಾರ್ಟ್​ಮೆಂಟ್, ಹೌಸಿಂಗ್ ಸೊಸೈಟಿ ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

covid rules for bangalore apartments
ಕೋವಿಡ್ ಮಾರ್ಗಸೂಚಿ

ಅಪಾರ್ಟ್​ಮೆಂಟ್​ನ ಒಂದು ಫ್ಲೋರ್​ನಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಕೋವಿಡ್ ಸೋಂಕು ದೃಢಪಟ್ಟರೆ ಆ ಮಹಡಿಯನ್ನು ಸೀಲ್ ಮಾಡಲಾಗುತ್ತೆ. ಮನೆಯಲ್ಲಿ ಒಂದು ಕೋವಿಡ್ ಪ್ರಕರಣವಿದ್ದರೆ ಆ ಮನೆಯನ್ನು ಮಾತ್ರ ಕಂಟೈನ್​ಮೆಂಟ್ ಹಾಗೂ ಅಪಾರ್ಟ್​ಮೆಂಟ್​ನಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಸೋಂಕು ದೃಢಪಟ್ಟರೆ ಇಡೀ ಅಪಾರ್ಟ್​ಮೆಂಟ್​ ಅನ್ನೇ 7 ದಿನಗಳ ಕಾಲ ಕಂಟೈನ್​ಮೆಂಟ್ ಮಾಡಲು ಪಾಲಿಕೆ ನಿರ್ಧರಿಸಿದೆ. ಕಂಟೈನ್​ಮೆಂಟ್ ಘೋಷಣೆಯಾದ ಬಳಿಕ ಅಲ್ಲಿರುವ ಎಲ್ಲರೂ ಕೋವಿಡ್ ಟೆಸ್ಟ್​ಗೆ ಒಳಗಾಗಬೇಕು.

covid rules for bangalore apartments
ಕೋವಿಡ್ ಮಾರ್ಗಸೂಚಿ

ಇನ್ನು ಅಪಾರ್ಟ್​ಮೆಂಟ್​ಗೆ ಬರುವ ಸಂದರ್ಶಕರು, ಮನೆಗೆಲಸದವರು ಸೇರಿದಂತೆ ಯಾರೇ ಬಂದರೂ ಕಡ್ಡಾಯವಾಗಿ ದೇಹದ ಉಷ್ಣತೆ ಪರಿಶೀಲಿಸಿ, ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿರಬೇಕೆಂದು ನಿಯಮ ಮಾಡಲಾಗಿದೆ.

covid rules for bangalore apartments
ಕೋವಿಡ್ ಮಾರ್ಗಸೂಚಿ

ನಿಯಮಗಳು :

  • ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಥಳಗಳಾದ ನೆಲ, ಮೆಟ್ಟಿಲನ್ನು ಆಗಾಗ ಸ್ಯಾನಿಟೈಸ್​ ಮಾಡುವುದು.
  • ನಡಿಗೆ ದಾರಿಗಳು ಹಾಗೂ ಪಾರ್ಕ್​ಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು. ಇಲ್ಲಿ ಜನ ಸೇರುವುದನ್ನು ತಪ್ಪಿಸಬೇಕು.
  • ಕೋವಿಡ್ ಲಸಿಕೆ ಪಡೆಯಲು ಸಾಮಾಜಿಕ ಜಾಲತಾಣ ಬಳಸಿ ಪ್ರೇರೇಪಿಸಬೇಕು.
  • ಜಿಮ್, ಈಜುಕೊಳ ಬಳಕೆ ನಿಷಿದ್ಧ.
  • ಮಕ್ಕಳೂ ಕೂಡ ಆಟದ ಸಮಯದಲ್ಲಿ, ತೆರೆದ ಜಾಗಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
  • ಕಮ್ಯುನಿಟಿ ಹಾಲ್, ಕ್ಲಬ್ ಹೌಸ್​ಗಳ ಕಾರ್ಯಕ್ರಮಕ್ಕೆ ಮಿತಿ ಹೇರಬೇಕು, ಗರಿಷ್ಠ 50 ಜನ ಸೇರಲು ಮಾತ್ರ ಅವಕಾಶ.
  • ಹೌಸಿಂಗ್ ಸೊಸೈಟಿಗಳು ನಿಗದಿತ ಸ್ಥಳದಲ್ಲಿಯೇ ಕಸ ಪ್ರತ್ಯೇಕಿಸಬೇಕು.
  • ಲಿಫ್ಟ್ ಪ್ರವೇಶ ದ್ವಾರ, ಬಟನ್​ಗಳನ್ನು ಸ್ಯಾನಿಟೈಸ್ ಮಾಡಬೇಕು.
  • ಕಂಟೈನ್​​ಮೆಂಟ್ ವ್ಯಾಪ್ತಿಯಲ್ಲಿರುವವರು ಕಡ್ಡಾಯವಾಗಿ ಹೋಂ ಐಸೋಲೇಷನ್ ಆಗಬೇಕು.
  • ಕೋವಿಡ್ ನಿಯಮ ಪಾಲಿಸಿ ಸಾಕು ಪ್ರಾಣಿಗಳನ್ನು ವಾಕ್​ಗೆ ಕರೆದುಕೊಂಡು ಹೋಗಬಹುದು.
  • ಮನೆಗೆಲಸದವರು, ಸೆಕ್ಯುರಿಟಿ ಗಾರ್ಡ್​​ ಹಾಗೂ ಎಲ್ಲ ಸಿಬ್ಬಂದಿ ಎರಡೂ ಡೋಸ್ ವ್ಯಾಕ್ಸಿನ್ ಪಡೆದಿರಬೇಕು.
  • ಬಿಬಿಎಂಪಿ ಆರೋಗ್ಯ ವಿಭಾಗದ ಬಳಿ ಒಬ್ಬರು ಸಂಪರ್ಕದಲ್ಲಿರಬೇಕು.

ಇದನ್ನೂ ಓದಿ: ಕೋವಿಡ್ ಟೆಸ್ಟ್ ರಿಸಲ್ಟ್ ನೋಡಲು ಇಲ್ಲಿದೆ ನೋಡಿ ಸುಲಭ ಮಾರ್ಗ

Last Updated :Jan 14, 2022, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.