ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರು.. ಒಬ್ಬ ಸ್ಥಳದಲ್ಲೇ ಸಿಕ್ಕಿಬಿದ್ರೆ, ಮತ್ತೊಬ್ಬ ಅಪಘಾತದಲ್ಲಿ ಎಡವಿ ಬಿದ್ದ!
Updated on: Jun 24, 2022, 12:07 PM IST

ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರು.. ಒಬ್ಬ ಸ್ಥಳದಲ್ಲೇ ಸಿಕ್ಕಿಬಿದ್ರೆ, ಮತ್ತೊಬ್ಬ ಅಪಘಾತದಲ್ಲಿ ಎಡವಿ ಬಿದ್ದ!
Updated on: Jun 24, 2022, 12:07 PM IST
ಮಹಿಳೆಯ ಸರ ಕದ್ದು ಪರಾರಿಯಾಗುತ್ತಿದ್ದ ಸರಗಳ್ಳರಿಬ್ಬರಲ್ಲಿ ಒಬ್ಬ ಸ್ಥಳದಲ್ಲೇ ಸಿಕ್ಕಿಬಿದ್ದರೆ, ಮತ್ತೊಬ್ಬ ಅಪಘಾತದಲ್ಲಿ ದೊರೆತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ : ಚಿನ್ನದ ಸರ ಪಾಲಿಶ್ ಮಾಡಿ ಕೊಡುವ ನೆಪದಲ್ಲಿ ಗ್ರಾಮಕ್ಕೆ ಬಂದ ಸರಗಳ್ಳರು ಮಹಿಳೆಯಿಂದ ಮಾಂಗಲ್ಯ ಸರ ಕಿತ್ಕೊಂಡು ಪರಾರಿಯಾಗುತ್ತಿದ್ದರು. ಈ ವೇಳೆ, ಕಳ್ಳನೊಬ್ಬನನ್ನು ಜನರೇ ಹಿಡಿದು ಗೂಸಾ ಕೊಟ್ಟರೇ, ಮತ್ತೊಬ್ಬ ಕಳ್ಳ ಬೈಕ್ನಲ್ಲಿ ಪರಾರಿಯಾಗುವ ಭರದಲ್ಲಿ ಗ್ರಾಮದ ಬೋರ್ಡ್ಗೆ ಡಿಕ್ಕಿ ಹೊಡೆದು ತಾನಾಗೇ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಇದೇ ಸಮಯದಲ್ಲಿ ಭಾಗ್ಯಶ್ರೀ ಎಂಬ ಮಹಿಳೆ ಮನೆ ಮುಂದೆ ನಿಂತಿದ್ದಾಗ ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಮಹಿಳೆಯನ್ನ ಮಾತನಾಡಿಸಿದ್ದಾರೆ. ಸರಗಳ್ಳರ ಮಾತಿಗೆ ಮರುಳಾದ ಆಕೆ ಪಾಲಿಶ್ಗಾಗಿ ತನ್ನ ಮಾಂಗಲ್ಯ ಸರವನ್ನ ಕೊಟ್ಟಿದ್ದಾಳೆ. ತಕ್ಷಣವೇ ಅವರು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಓರ್ವನನ್ನು ಹಿಡಿದ ಗ್ರಾಮಸ್ಥರು ಸಖತ್ತಾಗಿ ಗೂಸಾ ನೀಡಿದ್ದಾರೆ.
ಓದಿ: ವೃದ್ಧೆಯರನ್ನೆ ಟಾರ್ಗೇಟ್ ಮಾಡಿ ಸರಗಳ್ಳತನ : ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ
ಸ್ಥಳದಿಂದ ಪರಾರಿಯಾಗುತ್ತಿದ್ದ ಮತ್ತೋರ್ವ ಕೊನಘಟ್ಟ ಗ್ರಾಮದ ವೃತ್ತದಲ್ಲಿ ಅಳವಡಿಸಿದ್ದ ಗ್ರಾಮದ ಹೆಸರಿನ ಬೋರ್ಡ್ಗೆ ಡಿಕ್ಕಿ ಹೊಡೆದು ಬೈಕ್ನಿಂದ ಬಿದ್ದಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಸರಗಳ್ಳನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಗ್ರಾಮಸ್ಥರು ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಬಂಧಿತ ಆರೋಪಿಗಳು ಬಿಹಾರ ಮೂಲದವರಾಗಿದ್ದು, ತೆಲುಗು ಭಾಷೆ ಮಾತನಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
