ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ, ಕೌನ್ಸಿಲ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮೇಲೆ ಚರ್ಚೆ : ಅರುಣ್ ಸಿಂಗ್

author img

By

Published : May 14, 2022, 12:43 PM IST

ಅರುಣ್ ಸಿಂಗ್

ರಾಜ್ಯಸಭೆ ಹಾಗೂ ಪರಿಷತ್‌ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಕಸರತ್ತು ಜೋರಾಗಿದೆ. ಈ ಸಂಬಂಧ ನಿನ್ನೆಯಿಂದಲೂ ಹಲವರ ಜತೆ ಭೇಟಿ, ಕರೆ ಮೂಲಕ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಎರಡು ಸಲ‌ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ..

ಬೆಂಗಳೂರು : ಇಂದು ಬಿಜೆಪಿ ಕೋರ್ ಕಮಿಟಿ ಸಭೆ ಇದೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಬಗ್ಗೆ ಚರ್ಚೆ ನಡೆಸುತ್ತೇವೆ. ಪಟ್ಟಿ ಅಂತಿಮಗೊಳಿಸಿ, ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡುತ್ತೇವೆ. ಹೈಕಮಾಂಡ್ ಅಭ್ಯರ್ಥಿಗಳನ್ನು ಫೈನಲ್ ಮಾಡಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ಅದು ಕಾಂಗ್ರೆಸ್ ಚಿಂತನ ಸಮ್ಮೇಳನ : ರಾಜಸ್ಥಾನಲ್ಲಿ ನಡೆಯುತ್ತಿರುವುದು ಚಿಂತನ ಶಿಬಿರ ಅಲ್ಲ, ಅದು ಕಾಂಗ್ರೆಸ್ ಚಿಂತನ ಸಮ್ಮೇಳನ. 50 ಜನ ಇರುವುದು ಚಿಂತನ ಮಂಥನ ಬೈಟಕ್. ಆದರೆ, ಇದರಲ್ಲಿ 400 ಜನ ಸೇರಿದ್ದಾರೆ. ಹೀಗಾಗಿ, ಅದು ಚಿಂತನ ಶಿಬಿರವಲ್ಲ, ಚಿಂತನ ಸಮ್ಮೇಳನ ಎಂದರು.

ಅಭ್ಯರ್ಥಿಗಳ ಆಯ್ಕೆಗೆ ಸಿಎಂ ಕಸರತ್ತು : ರಾಜ್ಯಸಭೆ ಹಾಗೂ ಪರಿಷತ್‌ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಕಸರತ್ತು ಜೋರಾಗಿದೆ. ಈ ಸಂಬಂಧ ನಿನ್ನೆಯಿಂದಲೂ ಹಲವರ ಜತೆ ಭೇಟಿ, ಕರೆ ಮೂಲಕ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಎರಡು ಸಲ‌ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆಗೂ ದೂರವಾಣಿ ಮೂಲಕ ಸಿಎಂ ಚರ್ಚಿಸಿದ್ದಾರೆ. ಬಳಿಕ ನಿನ್ನೆ ತಡರಾತ್ರಿ ಕೇಶವ ಕೃಪಾದಲ್ಲಿ ಆರ್​ಎಸ್​ಎಸ್ ಮುಖಂಡರ ಜತೆಗೂ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಸಿಎಂ ಬೊಮ್ಮಾಯಿ ಸರ್ಕಾರಿ ನಿವಾಸದಲ್ಲಿ ಬಿಜೆಪಿ ನಾಯಕರ ಮಹತ್ವದ ಸಭೆ ನಡೆಸಲಾಗುತ್ತಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿ ಟಿ ರವಿ, ಲಕ್ಷ್ಮಣ್ ಸವದಿ, ಗೋವಿಂದ ಕಾರಜೋಳ ಭಾಗಿಯಾಗಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸುತ್ತಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಇಂದು ಕೋರ್‌ ಕಮಿಟಿ ಸಭೆಯಲ್ಲೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಹಾಗಾಗಿ, ಇಂದೇ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅಂತಿಮ‌ ಮುದ್ರೆ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜಕಾರಣದಲ್ಲಿ ದಿನಗಣನೆ ಮಾಡಲು ಆಗುವುದಿಲ್ಲ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.