BBMP in 2021: ಜನಪ್ರತಿನಿಧಿಗಳ ಆಡಳಿತವಿಲ್ಲ.. ಕೊರೊನಾದಿಂದ ನಗರಾಭಿವೃದ್ಧಿಯಲ್ಲೂ ಮಂಕು

author img

By

Published : Dec 31, 2021, 12:41 AM IST

bengaluru-bbmp-2021-year-end-story

ಬಿಬಿಎಂಪಿಯಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಆಯುಕ್ತರಾದ ಆರ್ಥಿಕ ವಿಭಾಗದ ತುಳಸಿ ಮದ್ದಿನೇನಿ ಬಜೆಟ್ ಮಂಡಿಸಿದರು. ಇನ್ನು ಕಳೆದ 9 ತಿಂಗಳಲ್ಲಿ 2,555 ಕೋಟಿ ರೂ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸಿದೆ.

ಬೆಂಗಳೂರು: ಒಂದೆಡೆ ಬೆಂಗಳೂರಿನ 198 ವಾರ್ಡ್​​ಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ಬರೋಬ್ಬರಿ ಒಂದು ವರ್ಷ ಕಳೆದಿದೆ. ಅಧಿಕಾರಿಗಳ ಆಡಳಿತದಲ್ಲೇ ಬಿಬಿಎಂಪಿ ಮುಂದುವರಿದಿದ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

ಇನ್ನೊಂದೆಡೆ ಕೋವಿಡ್ ಎರಡನೇ ಅಲೆ 2021ನೇ ವರ್ಷದಲ್ಲಿ ತೀವ್ರವಾಗಿ ಬಾಧಿಸಿದ್ದರಿಂದ ಆರೋಗ್ಯ ವಿಭಾಗ ಹೊರತುಪಡಿಸಿ, ರಸ್ತೆ ಕಾಮಗಾರಿಗಳು, ಕಟ್ಟಡ ಕಾಮಗಾರಿಗಳು, ರಾಜಕಾಲುವೆ, ಮಳೆ ನಿರ್ವಹಣೆ ಸರಿಯಾಗಿ ನಡೆಯದೆ ಜನಜೀವನ ಅಸ್ತವ್ಯವಸ್ತವಾಗಿದ್ದಲ್ಲದೆ, ಅಭಿವೃದ್ಧಿ ಕಾರ್ಯಗಳು ನಗರದಾದ್ಯಂತ ಕುಂಠಿತಗೊಂಡಿದೆ.

ನಗರ ಪ್ರವಾಹದಿಂದ ತತ್ತರ: ಭಾರಿ ಮಳೆಯಿಂದಾಗಿ ನಗರದಲ್ಲಿ ಶಿಥಿಲ ಕಟ್ಟಡಗಳು ಧರೆಗುರುಳಲು ಪ್ರಾರಂಭವಾದವು. ಅಕ್ಟೋಬರ್ ತಿಂಗಳಲ್ಲಿ ಮಹಾಲಕ್ಷ್ಮಿ ಬಡಾವಣೆ ಹಾಗೂ ಗೋವಿಂದರಾಜಪುರ ವಿಧಾನಸಭಾ ಕ್ಷೇತ್ರಗಳ ಹಾಗೂ ಎಚ್​ಎಸ್ಆರ್ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದವು. ನವೆಂಬರ್ 21, 22ರಂದು ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಅಪಾರ್ಟ್​ಮೆಂಟ್​ ನೆಲಮಹಡಿ ಸಂಪೂರ್ಣವಾಗಿ ಜಲಾವೃತಗೊಂಡು ಜನರು ದೋಣಿ ಮೂಲಕ ಓಡಾಡುವಂತಾಯಿತು. ಈ ಭಾರಿ ಮಳೆ ನಡುವೆಯ ನವೆಂಬರ್​ 11ರಿಂದ 14ರವರೆಗೆ ಜಿಕೆವಿಕೆಯಲ್ಲಿ ಕೃಷಿಮೇಳ ನಡೆಯಿತು.

ಅಧಿಕಾರಿಗಳಿಂದ ಬಜೆಟ್ : ಬಿಬಿಎಂಪಿಯಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಆಯುಕ್ತರಾದ ಆರ್ಥಿಕ ವಿಭಾಗದ ತುಳಸಿ ಮದ್ದಿನೇನಿ ಬಜೆಟ್ ಮಂಡಿಸಿದರು. ಇನ್ನು ಕಳೆದ 9 ತಿಂಗಳಲ್ಲಿ 2,555 ಕೋಟಿ ರೂ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸಿದೆ. ತೆರಿಗೆ ಸಂಗ್ರಹದ ಗುರಿಯಲ್ಲಿ ಶೇಕಡಾ 63ರಷ್ಟು ಗುರಿ ಸಾಧನೆಯಾಗಿದ್ದು, ಯಲಹಂಕದಲ್ಲಿ ಶೇಕಡಾ 76 ರಷ್ಟು ಸಂಗ್ರಹವಾಗಿದೆ.

ವಾರ್ಡ್ ಪುನರ್​​ವಿಂಗಡಣೆ ನಿಧಾನ: ಬೆಂಗಳೂರಿನ ವಾರ್ಡ್​​ಗಳನ್ನು 198ರಿಂದ 243ಕ್ಕೆ ಏರಿಕೆ ಮಾಡುವ ಕಾರ್ಯ ಇನ್ನೂ ಚುರುಕು ಪಡೆದಿಲ್ಲ. ಜೊತೆಗೆ ಬೆಂಗಳೂರನ್ನು ಒಂದು ಕಿ.ಮೀ ವ್ಯಾಪ್ತಿಗೆ ವಿಸ್ತರಿಸುವ ಕಾರ್ಯ ಚುರುಕು ಪಡೆದಿದ್ದು ಈಗಾಗಲೇ ನಾಲ್ಕು ಹಳ್ಳಿಗಳ ಸೇರ್ಪಡೆಯಾಗಿದೆ.

ಬಿಡಿಎ ಅಭಿವೃದ್ಧಿ ಕಾರ್ಯಗಳಿಗೆ ಚುರುಕು: ಬೆಂಗಳೂರು ಅಭಿವೃದ್ಧ ಪ್ರಾಧಿಕಾರದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯ ಚುರುಕು ಪಡೆದಿದ್ದು, ಸುಪ್ರೀಂ ಕೋರ್ಟ್ ರಚಿಸಿದ ನ್ಯಾ. ಚಂದ್ರಶೇಖರ್ ಸಮಿತಿ ಈಗಾಗಲೇ ವರದಿ ಸಲ್ಲಿಕೆ ಮಾಡಿದ್ದು, ಆರಂಭಿಕ ಹಂತದಲ್ಲಿ 300 ಜನರ ಕಟ್ಟಡಗಳನ್ನು ಸಕ್ರಮಗೊಳಿಸಲಾಗುತ್ತಿದೆ.

ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 10 ರಿಂದ 15 ಸಾವಿರ ಕೋಟಿ ರೂಪಾಯಿ ಕ್ರೋಢೀಕರಿಸುವ ಗುರಿ ಹೊಂದಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ನಗರದಾದ್ಯಂತ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಇದೆ. ನಾನಾ ಕಾರಣಗಳಿಂದಾಗಿ ಇಂತಹ ಸ್ವತ್ತು ಪರರ ವಶದಲ್ಲಿದೆ. ಈ ಸ್ವತ್ತನ್ನು ಬಿಡಿಎ ವಶಪಡಿಸಿಕೊಂಡು ಸಾರ್ವಜನಿಕರ ಅನುಕೂಲಕ್ಕಾಗಿ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Year Ender 2021: ಈ ವರ್ಷ ಮೈಸೂರಿನಲ್ಲಿ ಸದ್ದು ಮಾಡಿದ ಘಟನಾವಳಿಗಳ ಹಿನ್ನೋಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.