ಜನವರಿ ವೇಳೆಗೆ ಬೆಳಗಾವಿ ಸ್ವಚ್ಛ ನಗರ ಪಟ್ಟಿಯಲ್ಲಿ 50ನೇ ಸ್ಥಾನದೊಳಗೆ ಬರಲಿದೆ: ಶಾಸಕ ಅಭಯ್ ಪಾಟೀಲ್

author img

By

Published : Sep 18, 2021, 11:29 AM IST

mla abhay patil

ಸ್ವಚ್ಛ ನಗರ ಪಟ್ಟಿಯಲ್ಲಿ ಬೆಳಗಾವಿ 128ನೇ ಸ್ಥಾನದಲ್ಲಿದೆ. ಜನವರಿ ತಿಂಗಳಲ್ಲಿ ಸ್ವಚ್ಛ ನಗರದ ಸರ್ವೇ ತಂಡ ನಗರಕ್ಕೆ ಆಗಮಿಸಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಜನವರಿ ವೇಳೆಗೆ ಸ್ವಚ್ಛ ನಗರ ಪಟ್ಟಿಯಲ್ಲಿ ಬೆಳಗಾವಿ 50ರೊಳಗೆ‌ ಬರುವಂತೆ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಅಭಯ್ ಪಾಟೀಲ್​​ ತಿಳಿಸಿದ್ದಾರೆ.

ಬೆಳಗಾವಿ: ಜನವರಿ ವೇಳೆಗೆ ಬೆಳಗಾವಿ ಸ್ವಚ್ಛ ನಗರ ಪಟ್ಟಿಯಲ್ಲಿ 50ನೇ ಸ್ಥಾನದೊಳಗೆ ಬರಬೇಕಿದೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಅಭಯ್ ಪಾಟೀಲ್​​ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ನಗರಸೇವಕರು, ಪಾಲಿಕೆ ಅಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಮುಂಬರುವ ದಿನಗಳಲ್ಲಿ ಬೆಳಗಾವಿ ನಗರವನ್ನು ಸ್ಮಾರ್ಟ್ ‌ಸಿಟಿ ಜೊತೆಗೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ರೂಪುರೇಷೆಗಳು ಹಾಗೂ ಸದ್ಯ ಬೆಳಗಾವಿ ನಗರದಲ್ಲಿ ನಾಯಿಗಳು, ಬಿಡಾಡಿ ದನಗಳ ಹಾವಳಿ ಸೇರಿದಂತೆ ಸ್ವಚ್ಛತೆ ಬಗ್ಗೆ ಚರ್ಚೆ ನಡೆಸಲಾಯಿತು.

ಶಾಸಕ ಅಭಯ್ ಪಾಟೀಲ್

ಸಭೆಯಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, ನಗರದಲ್ಲಿ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಪ್ರತಿದಿನ ಒಂದು ಗಂಟೆ ಕಾಲ ಜನಸೇವೆಗೆ ಮೀಸಲಿಡಬೇಕು. ನಗರದ ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಪಾಲಿಕೆ ಆಯುಕ್ತರ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕು. ಒಂದು ವಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಆಗದಿದ್ರೆ ಹಿಂದಿನ ಆಯುಕ್ತರಿಗೆ ಮಾಡಿದಂತೆ ಈಗಿನ ಆಯುಕ್ತರಿಗೂ ಅದನ್ನೇ ಮಾಡೋಣ ಎಂದರು. ಇದಲ್ಲದೇ ಎಲ್ಲವನ್ನೂ ಅಧಿಕಾರಿಗಳೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೂತನವಾಗಿ ಆಯ್ಕೆಯಾದ ‌ಸದಸ್ಯರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸುವ ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಬೆತ್ತಲೆ ವಿಡಿಯೋ, ಬ್ಲ್ಯಾಕ್​ ಮೇಲ್​​.. ಹೆಂಗೆಳೆಯರ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದ ಗ್ಯಾಂಗ್ CID ಬಲೆಗೆ

ಬೆಳಗಾವಿ ಮಹಾನಗರ ಸದ್ಯ ಸ್ವಚ್ಛ ನಗರ ಪಟ್ಟಿಯಲ್ಲಿ 128ನೇ ಸ್ಥಾನದಲ್ಲಿದೆ. ಹೀಗಾಗಿ ಬೆಳಗಾವಿಯಲ್ಲಿರುವ ನ್ಯೂನ್ಯತೆಗಳ ಬಗ್ಗೆ ಇಂದಿನ‌ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಒಂದು ವಾರದಲ್ಲಿ ಲಿಸ್ಟ್ ಮಾಡಿಕೊಡುವಂತೆ ಸೂಚನೆ ಕೊಡಲಾಗಿದೆ. ಜನವರಿ ತಿಂಗಳಲ್ಲಿ ಸ್ವಚ್ಛ ನಗರದ ಸರ್ವೇ ತಂಡ ನಗರಕ್ಕೆ ಆಗಮಿಸಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಜನವರಿ ವೇಳೆಗೆ ಸ್ವಚ್ಛ ನಗರ ಪಟ್ಟಿಯಲ್ಲಿ ಬೆಳಗಾವಿ 50ರೊಳಗೆ‌ ಬರುವಂತೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.