ಈ ಹುಡುಗನ ಬಳಿ ಇವೆ 300 ಕಾರುಗಳು.. ಅವ್ಯಾವು ಗೊತ್ತಾ?

author img

By

Published : Sep 20, 2022, 7:43 PM IST

telangana-boy-create-paper-cars

ತೆಲಂಗಾಣದ ಮಹೆಬೂಬ್​ ನಗರದ ಅನಸ್​ ಫೈಝಿ ಎಂಬ ಯುವಕ ತನಗಿರುವ ಕಾರುಗಳ ಮೇಲಿನ ಪ್ರೀತಿಯಿಂದಾಗಿ ಎಲ್ಲ ಬಗೆಯ ಕಾರುಗಳ ಆಕೃತಿಯನ್ನು ರೂಪಿಸಿ, ಅವು ಥೇಟ್​ ಕಾರಿನಂತೆಯೇ ಕಾಣುವಂತೆ ಮಾಡಿದ್ದಾನೆ.

ಹೈದರಾಬಾದ್​, ತೆಲಂಗಾಣ: ಸುಂದರವಾದ ಕಾರುಗಳನ್ನು ನೋಡಿದಾಗ ಅವುಗಳು ನಮ್ಮ ಮನೆಯಲ್ಲಿರಬೇಕು ಅಂತನಿಸೋದು ಸಹಜ. ಹಾಗಂತ ನಾವು ಎಲ್ಲ ಕಾರುಗಳನ್ನು ಖರೀದಿಸಲು ಸಾಧ್ಯವೇ?. ಇಲ್ಲವಲ್ಲ. ಇಲ್ಲೊಬ್ಬ ಹುಡುಗನಿಗೆ ಕಾರು ಕ್ರೇಜ್​ ಇದೆ. ಅವುಗಳನ್ನು ಖರೀದಿಸಲು ಅಸಾಧ್ಯವಾದರೂ ಅವುಗಳನ್ನು ತಾನೇ ತಯಾರಿಸಿದ್ದಾನೆ. ಅದು ಪೇಪರ್​ನಲ್ಲಿ!.

ಮೇಲಿನ ಚಿತ್ರವನ್ನು ನೋಡಿದರೆ ಇದೇನು ಸಾಲಾಗಿ ಇಷ್ಟು ಕಾರುಗಳು ನಿಂತಿವೆಯಲ್ಲ ಅನ್ನಿಸಬಹುದು. ಅವೆಲ್ಲ ಪೇಪರ್​ನಿಂದ ಮಾಡಿದ ಕಾರುಗಳ ಆಕೃತಿ. ತೆಲಂಗಾಣದ ಮಹೆಬೂಬ್​ನಗರದ ಯುವಕ ಇವುಗಳ ಪಿತಾಮಹ. ಬಿಟೆಕ್​ ಶಿಕ್ಷಣ ಪಡೆದಿರುವ ಈತನಿಗೆ ಕಾರುಗಳು ಎಂದರೆ ಪಂಚಪ್ರಾಣ. ಖರೀದಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಪೇಪರ್​ನಲ್ಲಿ ತಾನೇ ತಯಾರಿಸಿ ಖುಷಿ ಪಡುತ್ತಿದ್ದಾನೆ.

ಯುವಕ ಅನಸ್ ಫೈಝಿ ಸುಮಾರು 355 ವಿವಿಧ ಮಾದರಿಯ ಕಾರುಗಳನ್ನು ರೂಪಿಸಿದ್ದಾನೆ. ಕಾರುಗಳು ಮಾತ್ರವಲ್ಲ, ಬೈಕ್‌ಗಳು, ಪೊಲೀಸ್, ಮಿಲಿಟರಿ ವಾಹನಗಳು, ಆ್ಯಂಬುಲೆನ್ಸ್​​ಗಳು ಫೈಝಿಯ ಪೇಪರ್​ ಗ್ಯಾರೇಜ್​ನಲ್ಲಿವೆ.

ಫೈಝಿ ಬಳಿಯಿವೆ 355 ಕಾರುಗಳ ಆಕೃತಿ: ಚಿಕ್ಕವನಿದ್ದಾಗಿನಿಂದಲೂ ಫೈಝಿಗೆ ಕಾರಿನ ಬಗ್ಗೆ ಅತೀವ ಆಸೆ ಇದೆ. ನೋಡಿದಂತಹ ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ ತಾನೇ ಕಾಗದದಿಂದ ತಯಾರಿಸಿ ಖುಷಿಪಡುತ್ತಿದ್ದಾನೆ. ಕ್ರಮೇಣ ಇದು ಹವ್ಯಾಸವಾಗಿ, 355 ಕಾರುಗಳ ಮಾದರಿಗಳನ್ನು ರೂಪಿಸಿದ್ದಾನೆ. 9 ವರ್ಷದ ವಯಸ್ಸಿನಿಂದ ಈ ಗೀಳು ಅಂಟಿಸಿಕೊಂಡಿದ್ದಾನೆ.

ಹೊಸ ಮಾದರಿಯ ಕಾರನ್ನು ಕಂಡಾಗ ಅವುಗಳ ಅಳತೆಯನ್ನು ತಿಳಿದುಕೊಂಡು ನಂತರ ಆಕೃತಿಯನ್ನು ಬಿಡಿಸುತ್ತಾನೆ. ಅವುಗಳಿಗೆ ಕಾರಿನದ್ದೇ ಬಣ್ಣ ಮಾಡಿ, ಕತ್ತರಿಸಿ, ಮಾದರಿಯನ್ನು ರೂಪಿಸುತ್ತಾನೆ. ನೋಡಿದರೆ ಅದು ನಿಜವಾದ ಕಾರೇ ಅನ್ನಿಸಬೇಕು ಹಾಗಿರುತ್ತೆ ಈತನ ಕೈಚಳಕ. ಎಲ್ಲ ಕಾರುಗಳು 3 ಸೆಂ.ಮೀ ನಿಂದ 7 ಸೆಂ.ಮೀ ಉದ್ದವಿರುತ್ತದೆ. ಪ್ರತಿ ಕಾರನ್ನು ತಯಾರಿಸಲು 2 ರಿಂದ 20 ಗಂಟೆಗಳು ತೆಗೆದುಕೊಳ್ಳುತ್ತದೆ. ಓದಿನ ಮಧ್ಯೆ ಈ ಹವ್ಯಾಸವನ್ನು ಅನಸ್​ ಫೈಝಿ ಬೆಳೆಸಿಕೊಂಡಿದ್ದಾನೆ.

ಐಫೆಲ್​ ಟವರ್​ ಮಾಡುವ ಗುರಿ: ಇಷ್ಟಲ್ಲದೇ, ಐಫೆಲ್ ಟವರ್ ಮತ್ತು ಬುರ್ಜ್ ಖಲೀಫಾದಂತಹ ವಿಶ್ವದ ಅತಿ ಎತ್ತರದ ಕಟ್ಟಡಗಳ ಮಾದರಿಗಳನ್ನು ಕಾಗದದಿಂದ ತಯಾರಿಸಿದ್ದಾನೆ ಈತ. ಭವಿಷ್ಯದಲ್ಲಿ ವಿಮಾನಗಳು, ಹೆಲಿಕಾಪ್ಟರ್‌ಗಳು, ದೋಣಿಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ರೂಪಿಸುವ ಗುರಿಯನ್ನು ಫೈಝಿ ಹೊಂದಿದ್ದಾನೆ. ತನ್ನ ಈ ಪ್ರತಿಭೆ ಪ್ರದರ್ಶಿಸಲು ಇನ್ನೂವರೆಗೂ ಯಾವುದೇ ವೇದಿಕೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾನೆ ಫೈಝಿ.

ಅವಕಾಶ ಸಿಕ್ಕರೆ ಮಕ್ಕಳಿಗೆ ಪೇಪರ್​ನಿಂದ ಇಂತಹ ಆಟಿಕೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುವುದಾಗಿ ಹೇಳಿದ್ದಾನೆ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿನ ಸೃಜನಶೀಲತೆ ಬೆಳಕಿಗೆ ಬರುತ್ತದೆ. ಮೆದುಳು ಕೂಡ ಚುರುಕಾಗುತ್ತದೆ ಎಂಬುದು ಫೈಝಿಯ ಅಭಿಪ್ರಾಯ.

ಓದಿ: ಮಂಗಳವಾರದ ಚಿನಿವಾರ ಮಾರುಕಟ್ಟೆ: ಚಿನ್ನ-ಬೆಳ್ಳಿ ದರದಲ್ಲಿ ಕೊಂಚ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.