ಏನಿದು ಕ್ರೆಡಿಟ್​ ಸ್ಕೋರ್​​​.. ಬಳಸುವುದು ಹೇಗೆ?: ಏನೇನು ಪ್ರಯೋಜನ?

author img

By

Published : Jun 24, 2022, 10:32 AM IST

Updated : Jun 24, 2022, 10:46 AM IST

Maintain higher credit score to get loans on lower interest rate

ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ, ಅವರನ್ನು ನಂಬಲರ್ಹ ಸಾಲಗಾರ ಎಂದು ಪರಿಗಣಿಸಲಾಗುತ್ತದೆ. ಒಂದೇ ಒಂದು EMI ಅನ್ನು ಪಾವತಿಸಲು ವಿಳಂಬವಾದರೆ, ಅದು ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಅದನ್ನು ಪುನಃಸ್ಥಾಪಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಹೈದರಾಬಾದ್: ಕ್ರೆಡಿಟ್ ಸ್ಕೋರ್ ಎನ್ನುವುದು ವ್ಯಕ್ತಿಯ ಆದಾಯ ಹಾಗೂ ಸಾಲ ಪಡೆಯುವ ಮತ್ತು ಹಣಕಾಸು ನಿರ್ವಹಣೆಯನ್ನು ನಿರ್ಧರಿಸುವ ಅರ್ಹತೆ ಆಗಿದೆ. ಮತ್ತು ನಿಮ್ಮ ಆದಾಯದ ಅಳತೆಗೋಲು ಕೂಡಾ ಹೌದು. ಒಬ್ಬ ವ್ಯಕ್ತಿಯು ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ನಂತರ, ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಆ ವ್ಯಕ್ತಿಯ ಸಾಲ ಮರುಪಾವತಿ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತವೆ.

ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ, ಅವರನ್ನು ನಂಬಲರ್ಹ ಸಾಲಗಾರ ಎಂದು ಪರಿಗಣಿಸಲಾಗುತ್ತದೆ. ಒಂದೇ ಒಂದು EMI ಅನ್ನು ಪಾವತಿಸಲು ವಿಳಂಬವಾದರೆ, ಅದು ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಅದನ್ನು ಪುನಃಸ್ಥಾಪಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಸರಿಯಾದ ಸಮಯಕ್ಕೆ ಪಾವತಿ ಆಗಿದೆಯಾ?: ಮನೆ, ವಾಹನ, ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಸೇರಿದಂತೆ ಯಾವುದೇ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಈ ಎಲ್ಲ ಅಂಶಗಳೇ ಕ್ರೆಡಿಟ್​ ಸ್ಕೋರ್​​ನ ಮಾನದಂಡವಾಗಿದೆ. ಅದೇ ಸಮಯದಲ್ಲಿ, ಕ್ರೆಡಿಟ್ ಕಾರ್ಡ್ ಬಳಸುವಾಗ ಮಿತಿ ಇರುತ್ತದೆ. ಮಿತಿಯನ್ನು ಮೀರಿ ಅತಿಯಾಗಿ ಬಳಸಿದಾಗ ನಿಮ್ಮ ಕ್ರೆಡಿಟ್​ ಸ್ಕೋರ್ ಕಡಿಮೆ ಆಗುತ್ತದೆ.

ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಮಿತಿ 50,000 ಆಗಿದ್ದರೆ, ನೀವು ಆಗಿ 20 ಸಾವಿರ ರೂ. ಗಿಂತ ಹೆಚ್ಚಾಗಿ ಬಳಸಬಾರದು. ಆಗ ಮಾತ್ರ ಸಾಲದ ಮಿತಿಯನ್ನು ಶಿಸ್ತಿನಿಂದ ಬಳಸಲಾಗುತ್ತಿದೆ ಎಂದು ಬ್ಯಾಂಕ್‌ಗಳು ಭಾವಿಸುತ್ತವೆ. ಕೊಡುಗೆಗಳು ಮತ್ತು ಕ್ಯಾಶ್ ಬ್ಯಾಕ್‌ಗಾಗಿ ಕ್ರೆಡಿಟ್ ಕಾರ್ಡ್ ಮಿತಿಯನ್ನು ಖಾಲಿ ಮಾಡುವುದು ಯಾವಾಗಲೂ ಸೂಕ್ತವಲ್ಲ. ನೀವು ಸಾಲ - ಅವಲಂಬಿತ ವ್ಯಕ್ತಿ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಋಣಾತ್ಮಕ ಪರಿಣಾಮ ಎದುರಿಸುತ್ತಿದ್ದೀರಿ ಎಂದು ಊಹಿಸಲು ಇದು ಬ್ಯಾಂಕಗಳಿಗೆ ನೆರವಾಗುತ್ತದೆ. ಇನ್ನೊಂದು ಗಮನಿಸಬೇಕಾದ ವಿಚಾರ ಎಂದರೆ ನೀವು ಸಾಲ ಸಿಗುತ್ತಾ ಎಂಬ ಹೆಚ್ಚು ವಿಚಾರಣೆ ಮಾಡಬೇಡಿ ಇದು ನಿಮ್ಮ ಕ್ರೆಡಿಟ್ ಸ್ಕೋರ್​ ಮೇಲೆ ಪರಿಣಾಮ ಬೀರುತ್ತದೆ.

ಫೋನ್​ ಕರೆಗಳ ಬಗ್ಗೆ ಎಚ್ಚರಿಕೆ ಇರಲಿ: ಕ್ರೆಡಿಟ್ ಕಾರ್ಡ್‌ಗಳು ಮತ್ತು ಸಾಲಗಳನ್ನು ನೀಡುತ್ತೇವೆ ಎಂದು ಕರೆಗಳು ನಿಮಗೆ ಬಂದೇ ಇರುತ್ತವೆ. ಹೀಗೆ ಬಂದ ದೂರವಾಣಿ ಕರೆಗಳಿಗೆ ನೀವು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ. ಒಂದೊಮ್ಮೆ ಕರೆ ಮಾಡಿದಾಗ ತಕ್ಷಣವೇ ನಿಮ್ಮ ಡೀಟೇಲ್ಸ್​ಗಳನ್ನು ನೀಡಬಾರದು.

ಹಾಗೊಮ್ಮೆ ನೀವು ನಿಮ್ಮ ಡೀಟೇಲ್ಸ್​ಗಳನ್ನು ನೀಡಿದ್ದೇ ಆದರೆ, ನೀವು ಸಾಲ ಪಡೆಯಲು ಸಿದ್ದರಿದ್ದೀರಿ ಎಂದೇ ಬ್ಯಾಂಕ್​ಗಳು ತಿಳಿದುಕೊಳ್ಳುತ್ತವೆ. ಮತ್ತು ಅದನ್ನು ಬ್ಯಾಂಕ್ ದಾಖಲೆಗಳಲ್ಲಿ ಗುರುತಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಅಧಿಕಾರಿಗಳು ಅದನ್ನು ಗಮನಿಸುತ್ತಾರೆ. ಇದು ಕ್ರೆಡಿಟ್ ಸ್ಕೋರ್ ಕುಸಿತಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ. ಅದೇ ನಿಯಮವು ಕ್ರೆಡಿಟ್ ಕಾರ್ಡ್‌ಗೂ ಅನ್ವಯಿಸುತ್ತದೆ.

ಸರಿಯಾದ ಸಾಲ: ಸರಿಯಾದ ಸಾಲವು ಉತ್ತಮ ಕ್ರೆಡಿಟ್ ಸ್ಕೋರ್ ಗಳಿಸಲು ಸಹಾಯ ಮಾಡುತ್ತದೆ. ನೀವು ಮನೆ ಅಥವಾ ವಾಹನದಂತಹ ಸುರಕ್ಷಿತ ಸಾಲಗಳನ್ನು ಬಯಸಿದರೆ ಮತ್ತು ಅವುಗಳನ್ನು ನಿಯಮಿತವಾಗಿ ಮರುಪಾವತಿಸಿದರೆ ಸ್ಕೋರ್ ಸುಧಾರಿಸುತ್ತದೆ. ಅಸುರಕ್ಷಿತ ವೈಯಕ್ತಿಕ ಅಥವಾ ಕ್ರೆಡಿಟ್ ಕಾರ್ಡ್​​ಗಳ ಅತಿಯಾದ ಸಾಲವು ಕ್ರೆಡಿಟ್ ಇತಿಹಾಸದ ಮೇಲೆ ಪರಿಣಾಮ ಬೀರುತ್ತದೆ. ನೀವು ಈ ಎರಡು ರೀತಿಯ ಲೋನ್‌ಗಳನ್ನು ಸರಿಯಾಗಿ ಮಿಶ್ರಣ ಮಾಡಿದರೆ ಸ್ಥಿರ ಸ್ಕೋರ್ ಕಾಯ್ದುಕೊಳ್ಳಬಹುದು.

ಕ್ರೆಡಿಟ್​ ಸ್ಕೋರ್​ ಆಗಾಗ ಚೆಕ್​ ಮಾಡಿಕೊಳ್ಳಬೇಕು: ಕ್ರೆಡಿಟ್ ವರದಿಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಬೇಕು. ಕೆಲವು ಕಂಪನಿಗಳು ಉಚಿತ ಮೂಲ ಕ್ರೆಡಿಟ್ ವರದಿಯನ್ನು ನೀಡುತ್ತವೆ. ಬ್ಯಾಂಕಿಂಗ್ ಅಪ್ಲಿಕೇಶನ್​ನ ಆನ್‌ಲೈನ್ ಖಾತೆಗಳಿಗೆ ಕ್ರೆಡಿಟ್ ಸ್ಕೋರ್‌ಗಳನ್ನು ಸಹ ನೀಡುತ್ತವೆ. ಕ್ರೆಡಿಟ್ ವರದಿಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದರೆ, ವಿಷಯವನ್ನು ತಕ್ಷಣವೇ ಬ್ಯಾಂಕ್ ಮತ್ತು ಕ್ರೆಡಿಟ್ ಬ್ಯೂರೋದ ಗಮನಕ್ಕೆ ತರಬೇಕು. ತಜ್ಞರ ಸಹಾಯದಿಂದ ಇದನ್ನು ಸರಿಪಡಿಸಬಹುದು.

ನೀವು ಅವರಿಗೆ ತ್ವರಿತವಾಗಿ ತಿಳಿಸಲು ವಿಫಲವಾದರೆ, ಭವಿಷ್ಯದ ಪರಿಣಾಮಗಳನ್ನು ನೀವು ತಪ್ಪಿಸಲು ಸಾಧ್ಯವಿಲ್ಲ. ಕ್ರೆಡಿಟ್ ಸ್ಕೋರ್ ಎನ್ನುವುದು ವ್ಯಕ್ತಿಯ ಆರ್ಥಿಕ ಶಿಸ್ತಿನ ಅಳತೆಯಾಗಿದೆ. ಅಗತ್ಯವಿದ್ದಾಗ ಕಡಿಮೆ ಬಡ್ಡಿದರದ ಸಾಲ ಪಡೆಯಲು ಮತ್ತು ಚೌಕಾಶಿ ಮಾಡುವ ಶಕ್ತಿಯನ್ನು ಇದು ಒದಗಿಸುತ್ತದೆ. ಹೀಗಾಗಿ ಕ್ರೆಡಿಟ್​ ಸ್ಕೋರ್​ ಬಗ್ಗೆ ಜಾಗೃತರಾಗಿರಬೇಕು.

ಇದನ್ನು ಓದಿ:ರೆಪೋ ದರ ಏರಿಕೆ.. ಠೇವಣಿದಾರರಿಗೆ ಬಂಪರ್​.. FD ಮೇಲೆ ಎಷ್ಟು ಬಡ್ಡಿ ಸಿಗುತ್ತಾ ಗೊತ್ತಾ?

Last Updated :Jun 24, 2022, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.