ಎರಡೇ ದಿನದಲ್ಲಿ 1,100 ಕೋಟಿ ರೂ.ಮೌಲ್ಯದ Electric scooters ಮಾರಾಟ ಮಾಡಿದ Ola

author img

By

Published : Sep 18, 2021, 7:57 AM IST

Electric scooters sales

ಎರಡೇ ದಿನಗಳಲ್ಲಿ ಓಲಾ ಸಂಸ್ಥೆ ಅತ್ಯಧಿಕ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ​(Electric scooters) ಮಾರಾಟ ಮಾಡಿದೆ.

ನವದೆಹಲಿ: ಎರಡೇ ದಿನಗಳಲ್ಲಿ ಓಲಾ ಸಂಸ್ಥೆ 1,100 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್​ ಸ್ಕೂಟರ್​​ಗಳನ್ನು(Electric scooters) ಮಾರಾಟ ಮಾಡಿರುವುದಾಗಿ ಓಲಾ ಸಂಸ್ಥೆ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಹೇಳಿದ್ದಾರೆ.

ಓಲಾ ಕಂಪನಿಯು ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿ ಪ್ರಕ್ರಿಯೆಯನ್ನು ಈಗ ನಿಲ್ಲಿಸಿದರೂ, ದೀಪಾವಳಿ ಸಮಯಕ್ಕೆ ಪುನಃ ಮಾರಾಟ ಆರಂಭಿಸುವುದಾಗಿ ಎಂದು ಅಗರ್ವಾಲ್ ತಿಳಿಸಿದ್ದಾರೆ.

ಬುಧವಾರದಿಂದ ಗುರುವಾರ ಮಧ್ಯರಾತ್ರಿವರೆಗೆ ಓಲಾ ಸ್ಕೂಟರ್ ಬುಕ್ ಮಾಡಲು ಕಂಪನಿ ಕಾಲಾವಕಾಶ ನೀಡಿತ್ತು. ಈ ಹಿಂದೆ ಓಲಾದ ಈ ಸ್ಕೂಟರ್ ಸೆಪ್ಟೆಂಬರ್​ 8ರಂದು ಮಾರಾಟಕ್ಕೆ ಲಭ್ಯವಾಗುತ್ತದೆಂದು ಸಂಸ್ಥೆ ತಿಳಿಸಿತ್ತು. ಆದರೆ ತಾಂತ್ರಿಕ ದೋಷದ ಕಾರಣ ಸೆಪ್ಟೆಂಬರ್​15 ಕ್ಕೆ ಮುಂದೂಡಲಾಗಿತ್ತು.

ಎರಡು ದಿನಗಳಲ್ಲಿ 1,100 ಕೋಟಿ ರೂ.ಮೌಲ್ಯದ ವಾಹನಗಳನ್ನು ಮಾರಾಟ ಮಾಡಿದ್ದೇವೆ. ನವೆಂಬರ್​ 1 ರಿಂದ ಮತ್ತೆ ವಾಹನಗಳನ್ನು ಮಾರುತ್ತೇವೆ. ನೀವು ಈಗಲೇ ಬುಕ್ ಮಾಡಿ ಎಂದು ಅಗರ್ವಾಲ್​ ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳಲ್ಲಿ 1,100 ಕೋಟಿ ರೂ ಮೌಲ್ಯದ ವಾಹನಗಳನ್ನು ಮಾರಾಟ ಮಾಡುವುದು ಸುಲಭದ ಮಾತಲ್ಲ. ಇದು ಕೇವಲ ಉದ್ಯಮ ಮಾತ್ರವಲ್ಲ. ಭಾರತೀಯ ಇ-ಕಾಮರ್ಸ್​ನಲ್ಲಿ ಒಂದೇ ಉತ್ಪನ್ನ ಅಧಿಕವಾಗಿ ಮಾರಾಟವಾಗಿದ್ದು, ಇತಿಹಾಸ ನಿರ್ಮಿಸಿದೆ. ನಾವು ನಿಜವಾಗಿಯೂ ಡಿಜಿಟಲ್ ಭಾರತದಲ್ಲಿ ಬದುಕುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸ್ವಿಗ್ಗಿ,ಜೊಮ್ಯಾಟೊ GST ಪಾವತಿಸಬೇಕು: ಆದ್ರೆ, ಆರ್ಡರ್​ ಮಾಡುವ ಗ್ರಾಹಕರಿಗಿಲ್ಲ ತೊಂದರೆ

ಗ್ರಾಹಕರು ಓಲಾ ಇ- ಸ್ಕೂಟರ್ ಅನ್ನು ಓಲಾ ಆ್ಯಪ್ ಮೂಲಕವೇ ಬುಕ್ ಮಾಡಬೇಕು. ಬುಕ್ ಮಾಡುವಾಗ ಗ್ರಾಹಕರು 20,000 ರೂ. ಮುಂಗಡ ಹಣ ಪಾವತಿಸಬೇಕು. ಆರ್ಡರ್ ಪ್ರಕಾರ ಸರದಿಯಂತೆ ಅಕ್ಟೋಬರ್ ನಂತರ ಇ ಸ್ಕೂಟರ್ ಡೆಲಿವರಿ ಪ್ರಾರಂಭಗೊಳ್ಳಲಿದೆ. ಬುಕ್ ಮಾಡಿದ 72 ಗಂಟೆಗಳ ನಂತರ ಗ್ರಾಹಕರಿಗೆ ಸ್ಕೂಟರ್ ಯಾವಾಗ ಡೆಲಿವರಿ ಮಾಡಲಾಗುವುದು ಎನ್ನುವ ಸಂದೇಶವನ್ನು ಸಂಸ್ಥೆಯು ಗ್ರಾಹಕರಿಗೆ ಕಳಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.