ಏರ್ ಇಂಡಿಯಾ ಮಾರಾಟಕ್ಕೆ ಹಣಕಾಸಿನ ಬಿಡ್‌ ಕರೆದ ಕೇಂದ್ರ.. ಟಾಟಾ ಗ್ರೂಪ್, ಸ್ಪೈಸ್​ ಜೆಟ್ ಭಾಗಿ ಸಾಧ್ಯತೆ..

author img

By

Published : Sep 15, 2021, 3:21 PM IST

final-bids-for-air-india-disinvestment-today-tata-group-also-in-race

ದೇಶದ ಸಾರ್ವಜನಿಕ ರಂಗದ ವಿಮಾನಯಾನ ಸಂಸ್ಥೆಯಾಗಿರುವ ಏರ್​ ಇಂಡಿಯಾ ಲಿಮಿಟೆಡ್‌ಗೆ ಹಣಕಾಸಿನ ಬಿಡ್‌ ಕರೆಯಲಾಗಿದೆ. ಈ ಬಿಡ್​ನಲ್ಲಿ ದೇಶದ ಪ್ರಮುಖ ಸಂಸ್ಥೆಗಳಾದ ಟಾಟಾ ಗ್ರೂಪ್ ಹಾಗೂ ಸ್ಪೈಸ್​​ ಜೆಟ್​ ಭಾಗಿಯಾಗುವ ಸಂಭವವಿದೆ ಎನ್ನಲಾಗಿದೆ..

ನವದೆಹಲಿ : ನಷ್ಟದಲ್ಲಿರುವ ಸರ್ಕಾರಿ ಒಡೆತನದ ಏರ್​ ಇಂಡಿಯಾ ವಿಮಾನಗಳ ಷೇರು ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಇಂದು ಹಣಕಾಸು ಬಿಡ್ ಕರೆದಿದೆ. ಭಾರತದ ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಸಂಸ್ಥೆ ಈ ಬಿಡ್​ನಲ್ಲಿ ಮುಂಚೂಣಿಯಾಗಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

2018ರಲ್ಲಿ ಸರ್ಕಾರಿ ಒಡೆತನದ ಶೇ.76ರಷ್ಟು ಷೇರು ಬಿಡ್ ಮಾಡಲು ಯಾವ ಸಂಸ್ಥೆಯೂ ಮುಂದಾಗಿರಲಿಲ್ಲ. ಹೀಗಾಗಿ, ಸೆ.15ರೊಳಗೆ ಹಣಕಾಸು ಬಿಡ್ ಕರೆಯಲು ಕೇಂದ್ರ ನಿರ್ಧರಿಸಿತ್ತು. ಈ ಬಾರಿ ಏರ್ ಇಂಡಿಯಾ ಹೊಸ ಬಿಡ್ಡರ್ ಅನ್ನು ಪಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಸುಮಾರು 43,000 ಕೋಟಿ ರೂಪಾಯಿ ದೊಡ್ಡ ಮೊತ್ತದ ಸಾಲ ಉಳಿಸಿಕೊಂಡಿದೆ. ಅದರಲ್ಲಿ 22,000 ಕೊಟಿ ರೂಪಾಯಿ ಏರ್​​ ಇಂಡಿಯಾ ಆಸ್ತಿ ಹೋಲ್ಡಿಂಗ್ ಲಿಮಿಟೆಡ್​​​ಗೆ ವರ್ಗಾಯಿಸಲಾಗಿದೆ.

ಈ ವಿಮಾನಯಾನ ಸಂಸ್ಥೆಯ ಸಾಲವು 43 ಸಾವಿರ ಕೋಟಿ ರೂಪಾಯಿ ಮೀರಿದೆ. ಜೊತೆಗೆ ಎಲ್ಲಾ ಸಾಲವು ಸರ್ಕಾರಿ ಆಸ್ತಿಯ ಖಾತರಿಯಲ್ಲಿವೆ. ವಿಮಾನ ಸಂಸ್ಥೆಯನ್ನ ಬೇರೆ ಮಾಲೀಕರಿಗೆ ವರ್ಗಾಯಿಸುವ ಮೊದಲು ಈ ಎಲ್ಲಾ ಸಾಲಗಳನ್ನ ಭರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನಯಾನ ಮತ್ತು ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಶೇ.100ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ನಿರ್ಧರಿಸಿದೆ. ಗ್ರೌಂಡ್ ಹ್ಯಾಂಡ್ಲಿಂಗ್ ಕಂಪನಿ ಏರ್ ಇಂಡಿಯಾ ಎಸ್‌ಎಟಿಎಸ್ ಏರ್‌ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಎಐಎಸ್‌ಎಟಿಎಸ್)ನಲ್ಲಿ ಶೇ.50ರಷ್ಟು ಪಾಲು ಮತ್ತು ಮುಂಬೈನ ಏರ್ ಇಂಡಿಯಾ ಕಟ್ಟಡ, ದೆಹಲಿಯಲ್ಲಿ ಏರ್​​​ಲೈನ್ಸ್ ಹೌಸ್ ಸೇರಿ ಇತರ ಆಸ್ತಿಗಳು ಸಹ ಒಪ್ಪಂದದ ಭಾಗವಾಗಿರಲಿವೆ.

ಇದನ್ನೂ ಓದಿ: ವಿಪ್ರೋ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅಂತ್ಯ: ವಾರಕ್ಕೆರಡು ದಿನ ಉದ್ಯೋಗಿಗಳಿಗೆ ಆಫೀಸ್ ಕೆಲಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.