ಫೇಸ್​​ಬುಕ್​ ಗೆಳತಿ ನಂಬಿ ಕೆಟ್ಟ ವ್ಯಕ್ತಿ.. ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್​​ಮೇಲ್​​!

author img

By

Published : Oct 14, 2021, 9:47 PM IST

Facebook crime

ಫೇಸ್​ಬುಕ್​​ನಲ್ಲಿ ಪರಿಚಯವಾಗಿರುವ ಯುವತಿಯೊಬ್ಬಳನ್ನು ನಂಬಿ ಮೋಸ ಹೋಗಿರುವ ವ್ಯಕ್ತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಹೈದರಾಬಾದ್​​: ಸಾಮಾಜಿಕ ಜಾಲತಾಣದ ಫೇಸ್​​ಬುಕ್​​ನಲ್ಲಿ ಪರಿಚಯವಾದ ಯುವತಿಯೊಬ್ಬಳು ಬಣ್ಣಬಣ್ಣದ ಮಾತನಾಡಿ, ವ್ಯಕ್ತಿಯೊಬ್ಬನನ್ನು ಪ್ರೀತಿಯ ಬಲೆಗೆ ಸಿಲುಕಿಸಿಕೊಂಡು, ತದನಂತರ ಆತನಿಗೆ ಹಣಕ್ಕೋಸ್ಕರ ಬ್ಲಾಕ್​ ಮೇಲ್​ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೋಸ ಹೋಗಿರುವ ಯುವಕ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಹೈದರಾಬಾದ್​​ನ ಬಂಜಾರಾ ಹಿಲ್ಸ್​​​ನಲ್ಲಿ ಈ ಪ್ರಕರಣ ನಡೆದಿದ್ದು, ಎಲೆಕ್ಟ್ರಿಷಿಯನ್​ ಆಗಿ ಕೆಲಸ ಮಾಡ್ತಿದ್ದ 32 ವರ್ಷದ ವ್ಯಕ್ತಿ ಕಳೆದ ಜುಲೈ ತಿಂಗಳಲ್ಲಿ ಸಾಕ್ಷಿ ವರ್ಮಾ ಎಂಬ ಯುವತಿಯ ಫೇಸ್​​ಬುಕ್​​​ ಫ್ರೆಂಡ್​​ ರಿಕ್ವೆಸ್ಟ್​​ ಪಡೆದುಕೊಂಡಿದ್ದಾನೆ. ಅದಕ್ಕೆ ಅನುಮೋದನೆ ನೀಡಿದ ಬಳಿ ಇಬ್ಬರ ನಡುವೆ ಚಾಟಿಂಗ್​​ ಆರಂಭಗೊಂಡಿದೆ. ತದನಂತರ ಇಬ್ಬರು ಸ್ನೇಹಿತರಾಗಿದ್ದಾರೆ. ಈ ವೇಳೆ ಯುವತಿ ತನ್ನೆಲ್ಲ ಬಟ್ಟೆ ತೆಗೆದು ಯುವಕನಿಗೂ ಅದೇ ರೀತಿ ಮಾಡಲು ಸೂಚನೆ ನೀಡಿದ್ದಾಳೆ. ಆಕೆಯ ಬಣ್ಣದ ಮಾತಿಗೆ ಮರುಳಾಗಿ ಬಟ್ಟೆ ತೆಗೆದಿದ್ದಾನೆ. ಈ ವೇಳೆ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿರಿ: ಮೋದಿ ಹೆಸರಿನಲ್ಲಿ ಹರಿಯಾಣದಲ್ಲಿ 45 ಸ್ಥಾನ ಗೆಲ್ಲಲು ಸಾಧ್ಯವೇ?: ಕೇಂದ್ರ ಸಚಿವರ ಪ್ರಶ್ನೆ

ಹಣಕ್ಕಾಗಿ ಬ್ಲಾಕ್​ ಮೇಲ್​!

ಆತನ ನಗ್ನ ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಂತೆ ಹಣಕ್ಕಾಗಿ ಬ್ಲಾಕ್​ ಮೇಲ್​ ಮಾಡಲು ಶುರು ಮಾಡಿದ್ದಾಳೆ. ಜೊತೆಗೆ ಕೆಲವೊಂದು ವಿಡಿಯೋ ಆತನ ಸ್ನೇಹಿತರಿಗೆ ಕಳುಹಿಸಿಕೊಟ್ಟಿದ್ದಾಳೆ. ಈ ವೇಳೆ, ಅವರಿಂದ ಫೋನ್​ ಕರೆ ಬರಲು ಶುರುವಾಗಿವೆ. ಈ ವೇಳೆ ಯುವತಿ ಆದಷ್ಟು ಬೇಗ ಹಣ ಕೊಡದಿದ್ದರೆ ಎಲ್ಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಒತ್ತಡಕ್ಕೊಗಾದ ಯುವಕ ಪೊಲೀಸರ ಮೊರೆ ಹೋಗಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.