ಅಚ್ಚರಿ... ಗರ್ಭ ಧರಿಸಿಲ್ಲ, ಕರುವಿಗೆ ಜನ್ಮ ನೀಡಿಲ್ಲ; ಆದರೂ ನಿತ್ಯ 3.5 ಲೀಟರ್ ಹಾಲು ನೀಡುವ ಹಸು!

ಅಚ್ಚರಿ... ಗರ್ಭ ಧರಿಸಿಲ್ಲ, ಕರುವಿಗೆ ಜನ್ಮ ನೀಡಿಲ್ಲ; ಆದರೂ ನಿತ್ಯ 3.5 ಲೀಟರ್ ಹಾಲು ನೀಡುವ ಹಸು!
ಕೇವಲ 11 ತಿಂಗಳ ಕರುವೊಂದು ಪ್ರತಿದಿನ 3.5 ಲೀಟರ್ ಹಾಲು ನೀಡುತ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಕನ್ನೂರು(ಕೇರಳ): ಗರ್ಭ ಧರಿಸದ, ಕರುವಿಗೆ ಜನ್ಮ ನೀಡದ ಆಕಳೊಂದು ನಿತ್ಯ ಬರೋಬ್ಬರಿ 3.5 ಲೀಟರ್ ಹಾಲು ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಕೇರಳದ ಕನ್ನೂರಿನ ಕಂಗೋಳ ಗ್ರಾಮದಲ್ಲಿ ಈ ರೀತಿಯ ಪ್ರಕೃತಿ ವೈಚಿತ್ರ್ಯ ನಡೆದಿದೆ.
ಕೇವಲ 11 ತಿಂಗಳ ಕರು ಪ್ರತಿ ದಿನ ಬರೋಬ್ಬರಿ 3.5 ಲೀಟರ್ ಹಾಲು ನೀಡುತ್ತಿದೆ. ಕಂಗೋಳನಲ್ಲಿ ವಾಸವಾಗಿದ್ದ ಸಜೇಶ್ 2021ರಲ್ಲಿ ಆಕಳು ಹಾಗೂ ಅದರ ಹಸು ಖರೀದಿ ಮಾಡಿದ್ದರು. ಆದರೆ, ಹಸುವಿಗೆ ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಅದನ್ನ ಮಾರಾಟ ಮಾಡಿ, ಅದರ ಮರಿ ಉಳಿಸಿಕೊಳ್ಳಲಾಗಿತ್ತು. ಅದಕ್ಕೆ ನಿತ್ಯ ಜೋಳ ಮತ್ತು ಕಡಲೆ ಆಹಾರವಾಗಿ ನೀಡುತ್ತಿದ್ದರು.
ಒಂದು ದಿನ ಸಜೇಶ್ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು 11 ತಿಂಗಳ ಕರುವಿನ ಕೆಚ್ಚಲು ಊದಿಕೊಂಡಿರುವ ಬಗ್ಗೆ ತಿಳಿಸಿದ್ದಾಳೆ. ಈ ವೇಳೆ ಹಾಲು ಕರೆಯಲಾಗಿದ್ದು, ತೆಳ್ಳಗಿನ ಹಾಲು ನೀಡಿದೆ.ತದನಂತರ ಹಾಲಿನ ಗುಣಮಟ್ಟ ಸುಧಾರಿಸಿದ್ದು, ಇದೀಗ 3.5 ಲೀಟರ್ ಹಾಲು ನೀಡಲು ಶುರು ಮಾಡಿದೆ.
ಇದನ್ನೂ ಓದಿ: ನಮ್ಮ ರಕ್ತ ಹರಿಸುತ್ತೇವೆಯೇ ಹೊರತು, ಹಿಂದುತ್ವ ಕೆಳಗಿಳಿಯಲು ಬಿಡಲ್ಲ: ಸಂಜಯ್ ರಾವತ್
ಹಾಲಿನ ಸೊಸೈಟಿಯಿಂದ ಅದರ ಗುಣಮಟ್ಟು ಪರಿಶೀಲನೆ ಮಾಡಲಾಗಿದ್ದು, ಇದರಲ್ಲಿ 8.8 ಶೇಕಡಾ ಪ್ಯಾಟ್ ಬಂದಿದೆ. ಹಸುವಿನ ಹಾರ್ಮೋನ್ ಬದಲಾವಣೆಯಿಂದ ಇಂತಹ ಘಟನೆ ನಡೆದಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
