ತಾಜ್​ಮಹಲ್​ನಲ್ಲಿ ಪಶ್ಚಿಮ ಬಂಗಾಳ ಪ್ರವಾಸಿಗನಿಗೆ ಕಚ್ಚಿದ ಮಂಗಗಳು

author img

By

Published : Sep 22, 2022, 7:35 PM IST

Taj Mahal

16 ದಿನಗಳ ಅವಧಿಯಲ್ಲಿ ಇದು ಏಳನೇ ಘಟನೆಯಾಗಿದೆ. ಬುಧವಾರ ವಿಶ್ವವಿಖ್ಯಾತ ಸ್ಮಾರಕ ತಾಜ್​ಮಹಲ್​ಗೆ ಭೇಟಿ ನೀಡಿದ್ದ ಸ್ಪ್ಯಾನಿಷ್ ಮಹಿಳಾ ಪ್ರವಾಸಿಯೊಬ್ಬರಿಗೆ, ಕಳೆದ ಸೋಮವಾರವಷ್ಟೇ ಮತ್ತೊಬ್ಬ ಸ್ಪೇನ್ ಮಹಿಳೆ ಮೇಲೆ ಕೋತಿ ದಾಳಿ ಮಾಡಿತ್ತು.

ಆಗ್ರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ಸ್ಮಾರಕ ತಾಜ್‌ಮಹಲ್‌ಗೆ ಭೇಟಿ ನೀಡಿದ್ದ ಸ್ಪೇನ್‌ನ ಮಹಿಳಾ ಪ್ರವಾಸಿಯೊಬ್ಬರು ಮಂಗ ಕಚ್ಚಿ ಗಾಯಗೊಂಡ ಒಂದು ದಿನದ ಅಂತರದಲ್ಲಿ, ಮತ್ತೋರ್ವ ಪಶ್ಚಿಮ ಬಂಗಾಳದ ಪ್ರವಾಸಿಗನಿಗೆ ಗುರುವಾರ ಮಂಗವೊಂದು ಕಚ್ಚಿದೆ. ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

16 ದಿನಗಳ ಅವಧಿಯಲ್ಲಿ ಇದು ಏಳನೇ ಘಟನೆಯಾಗಿದೆ. ಬುಧವಾರ ವಿಶ್ವವಿಖ್ಯಾತ ಸ್ಮಾರಕಕ್ಕೆ ಭೇಟಿ ನೀಡಿದ್ದ ಸ್ಪ್ಯಾನಿಷ್ ಮಹಿಳಾ ಪ್ರವಾಸಿಯೊಬ್ಬರಿಗೆ ಮಂಗ ಕಚ್ಚಿ ಗಾಯಗೊಂಡಿದ್ದರು. ಕಳೆದ ಸೋಮವಾರವಷ್ಟೇ ಮತ್ತೊಬ್ಬ ಸ್ಪೇನ್ ಮಹಿಳೆ ತಾಜ್ ಮಹಲ್‌ನ ಪೂರ್ವ ದ್ವಾರದಲ್ಲಿ ಟಿಕೆಟ್ ಖರೀದಿಸುತ್ತಿದ್ದಾಗ ಕೋತಿಗಳ ಪಡೆ ದಾಳಿ ನಡೆಸಿತ್ತು.

ಕೋತಿಗಳ ದಂಡು ಅವರ ಮೇಲೆ ಎರಗಿದ್ದು, ನೆಲಕ್ಕೆ ಬಿದ್ದ ಆಕೆಯ ಮೇಲೆ ಕೋತಿಗಳ ಉಗುರುಗಳಿಂದ ಗಾಯಗೊಳಿಸಿದ್ದವು. ಈ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಪುರಾತತ್ವ ಇಲಾಖೆಯು ಇತ್ತೀಚೆಗೆ ಮಂಗಗಳ ಹಾವಳಿಯನ್ನು ನಿಭಾಯಿಸಲು ತಾಜ್ ಮಹಲ್ ಸಂಕೀರ್ಣದಲ್ಲಿ 4 ನೌಕರರನ್ನು ನಿಯೋಜಿಸಿದೆ.

ಇದನ್ನೂ ಓದಿ: ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಹುಷಾರ್​.. ಅವು ಯಾರಿಗಾದ್ರು ಕಚ್ಚಿದ್ರೆ ನೀವೇ ಹೊಣೆ ಎಂದ ಸುಪ್ರೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.