ನೀ ಕೊಡೆ, ನಾ ಬಿಡೆ: ಹೆಡ್​​​ಮಾಸ್ಟರ್​​​​​​​ ಕುರ್ಚಿಗಾಗಿ ಇಬ್ಬರು ಶಿಕ್ಷಕರ ಮಧ್ಯೆ ಫೈಟ್​​.. ವಿಡಿಯೋ ವೈರಲ್​​

author img

By

Published : Oct 14, 2021, 8:11 PM IST

Updated : Oct 14, 2021, 8:41 PM IST

Bihar teachers

ಶಾಲೆಯಲ್ಲಿನ ಹೆಡ್​ಮಾಸ್ಟರ್​​​​ ಹುದ್ದೆಗೋಸ್ಕರ ಇಬ್ಬರು ಶಿಕ್ಷಕರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪಾಟ್ನಾ(ಬಿಹಾರ): ಶಾಲೆಯ ಹೆಡ್​​ಮಾಸ್ಟರ್​​​ ಕುರ್ಚಿಗಾಗಿ ಇಬ್ಬರು ಶಿಕ್ಷಕರ ನಡುವೆ ಜಗಳ ನಡೆದಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಬಿಹಾರದ ಮೋತಿಹರಿಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿವಶಂಕರ್​ ಹಾಗೂ ಕಿಂಕಿ ಕುಮಾರ್​ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಳೆದ ಮೂರು ತಿಂಗಳಿಂದ ಈ ಸೀಟ್​​ಗಾಗಿ ಇಬ್ಬರ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲಾ ಶಿಕ್ಷಣ ಇಲಾಖೆ ಇವರಿಬ್ಬರಿಗೂ ಶಿಕ್ಷಣ ಮತ್ತು ವಿದ್ಯಾರ್ಹತೆಯ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಇದರ ಬೆನ್ನಲ್ಲೇ ಫೈಟ್​​ ಆರಂಭಗೊಂಡಿದೆ.

ಹೆಡ್​ಮಾಸ್ಟರ್​ ಹುದ್ದೆಗಾಗಿ ಇಬ್ಬರು ಶಿಕ್ಷಕರ ನಡುವೆ ಫೈಟ್​​

ಇದನ್ನೂ ಓದಿರಿ: ವೈರಲ್​ ವಿಡಿಯೋ: ಶಾಲಾ ಶಿಕ್ಷಕನ ರಾಕ್ಷಸಿ ವರ್ತನೆ.. ವಿದ್ಯಾರ್ಥಿಗಳ ಮೇಲೆ ಅಮಾನವೀಯ ಹಲ್ಲೆ

ಶಾಲೆಯಲ್ಲಿ ಶಿವಶಂಕರ್​​​ಗೆ ಹೆಡ್​ಮಾಸ್ಟರ್​ ಆಗಿ ನೇಮಕ ಮಾಡಲಾಗಿತ್ತು. ಆದರೆ, ಅದೇ ಶಾಲೆಯ ರಿಂಕಿ ಕುಮಾರ್​​ ತಾವು ಅವರಿಗಿಂತ ಹಿರಿಯರು ಎಂದು ಹೇಳಿಕೊಳ್ಳುವ ಮೂಲಕ ತಕರಾರು ತೆಗೆದು ಅವರೊಂದಿಗೆ ಜಗಳವಾಡಿದ್ದಾರೆ. ಇದರ ವಿಡಿಯೋ ಸದ್ಯ ವೈರಲ್​​ ಆಗಿದೆ.

Last Updated :Oct 14, 2021, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.