ಅಮೆರಿಕ ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರುವ ಸಾಧ್ಯತೆ

author img

By

Published : Sep 14, 2021, 2:04 PM IST

solar

ಹವಾಮಾನ ಬದಲಾವಣೆ ತಗ್ಗಿಸುವಲ್ಲಿ ಭಾರತದ ಜಾಗತಿಕ ಪ್ರಯತ್ನಗಳಿಗೆ ಒಂದು ಪ್ರಮುಖ ಸಾಧನೆಯಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆಯಾದ ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಯುಎಸ್ ಸೇರುವ ಸಾಧ್ಯತೆಯಿದೆ. ISA 124 ದೇಶಗಳ ಒಕ್ಕೂಟವಾಗಿದೆ, ಅವುಗಳಲ್ಲಿ ಹೆಚ್ಚಿನವು ತಾಪಮಾನ ಹೆಚ್ಚಿರುವ ದೇಶಗಳಾಗಿವೆ.

ನವದೆಹಲಿ: ಹವಾಮಾನ ಬದಲಾವಣೆಯನ್ನು ತಗ್ಗಿಸುವ ಭಾರತದ ಜಾಗತಿಕ ಪ್ರಯತ್ನಗಳ ಭಾಗವಾಗಿ ಆರಂಭವಾಗಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಅಮೆರಿಕ ಸೇರುವ ಸಾಧ್ಯತೆಯಿದೆ.

2015 ರಲ್ಲಿ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಆರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟ 124 ದೇಶಗಳ ಒಕ್ಕೂಟವಾಗಿದ್ದು, ಅವುಗಳಲ್ಲಿ ಹೆಚ್ಚಿನವು ಬಿಸಿಲಿನ ದೇಶಗಳಾಗಿವೆ. ಈಗ ಈ ಸೌರ ಒಕ್ಕೂಟಕ್ಕೆ ಸೇರಲು ಅಮೆರಿಕ ಇಚ್ಛೆ ವ್ಯಕ್ತಪಡಿಸಿದೆ.

ಎರಡು ದಿನಗಳ ಹಿಂದೆ, ಜರ್ಮನಿ ISA ಅನ್ನು ಅಂಗೀಕರಿಸಿತು ಮತ್ತು ಜರ್ಮನಿಯ ಸದಸ್ಯತ್ವವು ಭಾರತದ 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ('One Sun, One World, One Grid' plan)ಯೋಜನೆಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.