ಯುಪಿ ಚುನಾವಣೆಗೆ ಕಾಂಗ್ರೆಸ್ ರೆಡಿ: ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ಸೇರಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್​

author img

By

Published : Jan 13, 2022, 3:04 PM IST

Congress candidate list

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 125 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿರುವ ಕಾಂಗ್ರೆಸ್ ಪಕ್ಷ​​ ಶೇ. 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಿದ್ದು, ಶೇ. 40ರಷ್ಟು ಯುವಕರಿಗೂ ಅವಕಾಶ ಕಲ್ಪಿಸಿದೆ.

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಇಂದು ಬಿಡುಗಡೆ ಮಾಡಿದೆ. ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಪೈಕಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಘೋಷಣೆ ಮಾಡಿದ್ದು, ಈ ಪೈಕಿ ಶೇ. 40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.

ಉತ್ತರ ಪ್ರದೇಶ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ​ ಮಾಡಿದರು. ಪ್ರಮುಖವಾಗಿ, ಕೈ ಪಕ್ಷ 2017ರ ಉನ್ನಾವೋ ಅತ್ಯಾಚಾರ​ ಸಂತ್ರಸ್ತೆಯ ತಾಯಿ ಆಶಾ ದೇವಿಗೆ ಟಿಕೆಟ್​ ನೀಡಿದೆ. 125 ಅಭ್ಯರ್ಥಿಗಳ ಪೈಕಿ 50 ಕ್ಷೇತ್ರಗಳಲ್ಲಿ ಮಹಿಳೆಯರು ಸ್ಪರ್ಧಿಸಲಿದ್ದು, ಶೇ. 40ರಷ್ಟು ಯುವಕರಿಗೂ ಮಣೆ ಹಾಕಿದೆ.

  • Congress leader Priyanka Gandhi Vadra releases party's first list of 125 candidates for Uttar Pradesh polls

    "Out of the total 125 candidates, 40% are women & 40% are the youth. With this historic initiative, we hope to bring in a new kind of politics in the sate," she says pic.twitter.com/qg8pJQrlri

    — ANI UP/Uttarakhand (@ANINewsUP) January 13, 2022 " class="align-text-top noRightClick twitterSection" data=" ">

ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿರುವ ಎಲ್ಲ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದು, ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯಕ್ಕೆ ನಾಂದಿ ಹಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಟಿಕೆಟ್​ನಲ್ಲಿ ಉನ್ನಾವೋ ರೇಪ್​ ಕೇಸ್​, ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆಗೂ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ಪ್ರಮುಖರ ಹೆಸರು ಇಂತಿದೆ:

1. ಲಕ್ನೋ ಸೆಂಟ್ರಲ್ - ಸದಾಫ್ ಜಾಫರ್
2. ರಾಂಪುರ ಖಾಸ್- ಆರಾಧನಾ ಮಿಶ್ರಾ
3. ಉನ್ನಾವೋ- ಉಷಾ ಸಿಂಗ್
4. ಸೋನಭದ್ರ- ರಾಮರಾಜ್ ಕೋಲ್
5. ಶಹಜಹಾನ್‌ಪುರ- ಆಶಾ ಬಹು
6. ಶಹಜಹಾನ್‌ಪುರ- ಪೂನಂ ಪಾಂಡೆ
7. ಖೇರಿ- ರಿತು ಸಿಂಗ್​
8. ಸೀತಾಪುರ ಸದರ್- ಸಮೀನಾ ಶಫೀಕ್
9. ಮೋಹನ್‌ಲಾಲ್‌ಗಂಜ್-ಮಮತಾ ಚೌಧರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.