ಉತ್ತರಪ್ರದೇಶದ ಮತ್ತೊಬ್ಬ ಸಚಿವ ರಾಜೀನಾಮೆ: ಮೂರೇ ದಿನದಲ್ಲಿ ಬಿಜೆಪಿಯ 3 ಸಚಿವರು, 5 ಶಾಸಕರು ರಿಸೈನ್!

author img

By

Published : Jan 13, 2022, 5:08 PM IST

Dharam Singh Saini

ಉತ್ತರಪ್ರದೇಶ ಚುನಾವಣೆಯ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ವಿವಿಧ ಪಕ್ಷಗಳ ನಾಯಕರ ಪಕ್ಷಾಂತರ ಪರ್ವ ಶುರುವಾಗಿದೆ. ಆಡಳಿತಾರೂಢ ಬಿಜೆಪಿಯ ಮೂವರು ಸಚಿವರು, 5 ಶಾಸಕರು ಸೇರಿ 8 ನಾಯಕರು ಪಕ್ಷಕ್ಕೆ ಗುಡ್​ಬೈ ಹೇಳಿದ್ದಾರೆ. ಕಾಂಗ್ರೆಸ್​, ಸಮಾಜವಾದಿ ಪಕ್ಷದಿಂದಲೂ ನಾಯಕರ ವಲಸೆ ನಡೆಯುತ್ತಿದೆ.

ಲಖನೌ(ಉತ್ತರಪ್ರದೇಶ): ಉತ್ತರಪ್ರದೇಶ ಬಿಜೆಪಿ ಸರ್ಕಾರದ ಮತ್ತೊಬ್ಬ ಸಚಿವ ಧರಂ ಸಿಂಗ್​ ಸೈನಿ ಪಕ್ಷ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಳೆದ 3 ದಿನದಲ್ಲಿ ಮೂವರು ಸಚಿವರು ಮತ್ತು 5 ಶಾಸಕರು ಪಕ್ಷಕ್ಕೆ ವಿದಾಯ ಹೇಳಿದಂತಾಗಿದೆ.

  • I have resigned because for 5 years Dalits, backward classes were suppressed, their voices were suppressed... We will do whatever Swami Prasad Maurya will say. One minister and 3-4 MLAs will resign every day till Jan 20: Dharam Singh Saini after resigning from the UP cabinet pic.twitter.com/1z4Coqs6Zt

    — ANI UP/Uttarakhand (@ANINewsUP) January 13, 2022 " class="align-text-top noRightClick twitterSection" data=" ">

ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತ ಸಚಿವರಾಗಿದ್ದ ಧರಂ ಸಿಂಗ್​ ಸೈನಿ ಕೆಲ ದಿನಗಳ ಹಿಂದೆ ಉತ್ತರಪ್ರದೇಶ ಸರ್ಕಾರ ನೀಡಿದ್ದ ಭದ್ರತೆ, ಅಧಿಕೃತ ನಿವಾಸವನ್ನು ಹಿಂದಿರುಗಿಸಿದ್ದರು. ಇದು ಅವರು ಪಕ್ಷವನ್ನು ತೊರೆಯಲಿದ್ದಾರೆ ಎಂಬ ಸುಳಿವು ನೀಡಿತ್ತು. ಇದೀಗ ಪಕ್ಷದಿಂದ ಅಧಿಕೃತವಾಗಿ ಹೊರಬಂದಿದ್ದಾರೆ.

ಇನ್ನು ಮೊನ್ನೆಯಷ್ಟೇ ಕ್ಯಾಬಿನೆಟ್​ ಸಚಿವರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ, ದಾರಾ ಸಿಂಗ್​ ಚೌಹಾಣ್​ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಲ್ಲದೇ ಐವರು ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಷನ್ ಲಾಲ್ ವರ್ಮಾ, ಭಗವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಶಾಕ್ಯ ಕೂಡ ಬಿಜೆಪಿಗೆ ಗುಡ್​ಬೈ ಹೇಳಿದ್ದರು.

  • ‘सामाजिक न्याय’ के एक और योद्धा डॉ. धर्म सिंह सैनी जी के आने से, सबका मेल-मिलाप-मिलन करानेवाली हमारी ‘सकारात्मक और प्रगतिशील राजनीति’ को और भी उत्साह व बल मिला है। सपा में उनका ससम्मान हार्दिक स्वागत एवं अभिनंदन!

    बाइस में समावेशी-सौहार्द की जीत निश्चित है! #मेला_होबे pic.twitter.com/2FDkLLNW93

    — Akhilesh Yadav (@yadavakhilesh) January 13, 2022 " class="align-text-top noRightClick twitterSection" data=" ">

ಇನ್ನಷ್ಟು ಶಾಸಕರಿಂದ ರಾಜೀನಾಮೆ: ಧರಂ ಸಿಂಗ್​ ಸೈನಿ

ಕಳೆದ 5 ವರ್ಷದಲ್ಲಿ ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿತ್ತು. ಈ ಕಾರಣಕ್ಕಾಗಿ ಸರ್ಕಾರದಿಂದ ಹೊರ ಬರುತ್ತಿದ್ದೇನೆ. ಮತ್ತೊಬ್ಬ ಸಚಿವರು ಸರ್ಕಾರದಿಂದ ಹೊರ ಬರಲಿದ್ದಾರೆ. ಇದಲ್ಲದೇ, ಜನವರಿ 20 ರವರೆಗೂ ದಿನವೂ 3-4 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಧರಂ ಸಿಂಗ್​ ಸೈನಿ ಹೇಳಿಕೆ ನೀಡಿದ್ದಾರೆ.

ಅಖಿಲೇಶ್​ ಯಾದವ್ ಸ್ವಾಗತ​

ಧರಂ ಸಿಂಗ್​ ಸೈನಿ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಲು ಮುಂದಾಗಿದ್ದು, ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್​ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತ ಫೋಟೋವನ್ನು ಅಖಿಲೇಶ್​ ಯಾದವ್​ ಟ್ವೀಟ್​ ಮಾಡಿದ್ದು, 'ಪಕ್ಷಕ್ಕೆ ಧರಂ ಸಿಂಗ್​ ಸೈನಿ ಅವರನ್ನು ಸ್ವಾಗತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಜನ ಬಿಜೆಪಿ ಬಿಡ್ತಾರೆ: ಶರದ್​ ಪವಾರ್​

ಬೇರೆ ಪಕ್ಷದೆಡೆ ವಲಸೆ ಹೋಗುತ್ತಿರುವ ಉತ್ತರಪ್ರದೇಶ ಬಿಜೆಪಿ ಶಾಸಕರು, ಸಚಿವರ ಬಗ್ಗೆ ಮಾತನಾಡಿರುವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷದ(ಎನ್​ಸಿಪಿ) ನಾಯಕ ಶರದ್​ ಪವಾರ್​, ಯುಪಿಯಲ್ಲಿ 13 ಶಾಸಕರು ಬಿಜೆಪಿ ತೊರೆಯಲಿದ್ದಾರೆ. ಇಂದು ನಾಲ್ವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಪಕ್ಷಾಂತರ ಪರ್ವ

ಇನ್ನು ಇತ್ತೀಚೆಗಷ್ಟೇ ಸಹರನ್​ಪುರ್​ ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಫಿರೋಜಾಬಾದ್​ನ ಶಾಸಕ ಹರಿ ಓಂ ಯಾದವ್​ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್​​ ಸಿಂಗ್​ ಬಿಜೆಪಿ ಸೇರ್ಪಡೆಯಾಗಿದ್ದರು. ಇನ್ನೊಂದೆಡೆ, ಕಾಂಗ್ರೆಸ್​ ಪಕ್ಷದ ಪ್ರಮುಖ ಮುಖಂಡರಾಗಿದ್ದ ಇಮ್ರಾನ್​ ಮಾಸೂದ್​ ಸಮಾಜವಾದಿ ಪಕ್ಷ ಸೇರಿಕೊಂಡಿದ್ದರು.

ಉತ್ತರಪ್ರದೇಶ ವಿಧಾನಸಭೆ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:

ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ದಾರಾ ಸಿಂಗ್​ ಚೌಹಾಣ್​ ರಾಜೀನಾಮೆ

ಉತ್ತರಪ್ರದೇಶದಲ್ಲಿ ಬಿಜೆಪಿ ತೊರೆದ ಮತ್ತೊಬ್ಬ ಶಾಸಕ... 3 ದಿನದಲ್ಲಿ 7 ನಾಯಕರು ಕಮಲಕ್ಕೆ ಗುಡ್​ಬೈ

ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷ ಸೇರಿದ ಯುಪಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.