Udhampur road accident: ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್.. 12 ವಿದ್ಯಾರ್ಥಿಗಳು ಸೇರಿ 15 ಜನರಿಗೆ ಗಾಯ

Udhampur road accident: ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಮಿನಿ ಬಸ್.. 12 ವಿದ್ಯಾರ್ಥಿಗಳು ಸೇರಿ 15 ಜನರಿಗೆ ಗಾಯ
Udhampur road accident: ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆಯ ಮಸ್ಸೋರಾ ಬಳಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಣಿವೆಗೆ ಬಿದ್ದ ಪರಿಣಾಮ ಸುಮಾರು 15 ಜನರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಉಧಂಪುರ(ಜಮ್ಮು-ಕಾಶ್ಮೀರ): ಇಂದು ಬೆಳಗ್ಗೆ 7:00 ಗಂಟೆಗೆ ಜಿಲ್ಲೆಯ ಬರ್ಮೀನ್ ಪ್ರದೇಶದ ಮಸ್ಸೋರಾ ಬಳಿ ಮಿನಿ ಬಸ್ ಅಪಘಾತಕ್ಕೀಡಾಗಿದ್ದು, ಸುಮಾರು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಿನಿ ಬಸ್ ಪುಬರ್ಮಿನ್‌ನಿಂದ ಉಧಮ್‌ಪುರ ಕಡೆಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಣವೆಗೆ ಉರುಳಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಈ ಅಪಘಾತದಲ್ಲಿ 15 ಮಂದಿಯಲ್ಲಿ ಸುಮಾರು 12 ಮಂದಿ ಶಾಲಾ ವಿದ್ಯಾರ್ಥಿಗಳೂ ಗಾಯಗೊಂಡಿದ್ದು, ಗಾಯಾಳುಗಳನ್ನು ಉಧಂಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ದುಃಸ್ಥಿತಿಯಿಂದಾಗಿ ಈ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು
