PUBG ಆಟದಿಂದ ಪ್ರಾಣಕ್ಕೆ ಕುತ್ತು.. ರೈಲ್ವೆ ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ..

author img

By

Published : Nov 22, 2021, 4:52 PM IST

PUBG

ಬೆಳಗ್ಗೆ ವಾಕಿಂಗ್​ ಮಾಡಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಿವಿಯಲ್ಲಿ ಏರ್​​ಫೋನ್​​ ಹಾಕಿಕೊಂಡು ಪಬ್​ಜಿ ಗೇಮ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರೈಲು ಬಂದಿರುವುದು ಗೊತ್ತಾಗಿಲ್ಲ. ಹೀಗಾಗಿ, ಅವರ ಮೇಲೆ ಹರಿದು ಹೋಗಿದೆ..

ಮಥುರಾ (ಉತ್ತರಪ್ರದೇಶ) : ಆನ್​ಲೈನ್ ಗೇಮ್ ಪಬ್​ಜಿ(Online Game PUBG) ಆಡಲು ಹೋಗಿ ಈಗಾಗಲೇ ಅನೇಕ ಅವಾಂತರ, ದುರಂತಗಳು ನಡೆದಿವೆ. ಸದ್ಯ ಉತ್ತರಪ್ರದೇಶದ ಮಥುರಾದಲ್ಲಿ ಇಬ್ಬರು ವಿದ್ಯಾರ್ಥಿಗಳು(Two Students) ಇದೇ ಆಟದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.

ರೈಲ್ವೆ ಹಳಿ ಮೇಲೆ ಪಬ್​ಜಿ ಗೇಮ್( PUBG game)​​ ಆಡುತ್ತಿದ್ದ ವೇಳೆ ಅವರ ಮೇಲೆ ರೈಲು(Train) ಹರಿದು ಹೋಗಿದೆ. ಮಥುರಾದ ಲಕ್ಷ್ಮಿನಗರದ ರೈಲ್ವೆ ನಿಲ್ದಾಣ(railway track)ದ ಬಳಿ ಈ ಅಪಘಾತ ನಡೆದಿದೆ. 16 ವರ್ಷದ ಗೌರವ್​ ಹಾಗೂ 18 ವರ್ಷದ ಕಪಿಲ್ ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿರಿ: ಪಂಜಾಬ್​ನಲ್ಲಿ AAP ಅಧಿಕಾರಕ್ಕೆ ಬಂದ್ರೆ 18+ ಯುವತಿಯರಿಗೂ ತಿಂಗಳಿಗೆ ಸಾವಿರ ರೂ.: ಕೇಜ್ರಿವಾಲ್​ ಘೋಷಣೆ

ಬೆಳಗ್ಗೆ ವಾಕಿಂಗ್​ ಮಾಡಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಿವಿಯಲ್ಲಿ ಏರ್​​ಫೋನ್​​ ಹಾಕಿಕೊಂಡು ಪಬ್​ಜಿ ಗೇಮ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರೈಲು ಬಂದಿರುವುದು ಗೊತ್ತಾಗಿಲ್ಲ. ಹೀಗಾಗಿ, ಅವರ ಮೇಲೆ ಹರಿದು ಹೋಗಿದೆ.

ಘಟನೆಗೆ ಸಂಬಂಧಿಸಿದಂತೆ ಜಮುನಾ ಪೊಲೀಸ್​ ಠಾಣೆಯ ಶಶಿ ಪ್ರಕಾಶ್​ ಶರ್ಮಾ ಮಾಹಿತಿ ನೀಡಿದ್ದಾರೆ. ಇಬ್ಬರು ಕಾಳಿಂದಿ ಕುಂಜ್ ಕಾಲೋನಿ(Kalindi Kunj colony) ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ. ಮೃತರ ಪಕ್ಕದಲ್ಲೇ ಮೊಬೈಲ್​ ಫೋನ್ ಕೂಡ ಪತ್ತೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.