ರಸ್ತೆ ವಿಭಜಕಕ್ಕೆ ಗುದ್ದಿದ ಕಾರಿಗೆ ಬೆಂಕಿ; ಧಗಧಗಿಸಿದ ಅಗ್ನಿಯಲ್ಲಿ ವೈದ್ಯ ವಿದ್ಯಾರ್ಥಿಗಳು ಸಜೀವ ದಹನ

author img

By

Published : Jun 23, 2022, 3:51 PM IST

Updated : Jun 23, 2022, 4:46 PM IST

ಧಗಧಗಿಸಿದ ಅಗ್ನಿಯಲ್ಲಿ ವೈದ್ಯ ವಿದ್ಯಾರ್ಥಿಗಳು ಸಜೀವ ದಹನ

ರಸ್ತೆ ಮಧ್ಯೆ ಅಡ್ಡಲಾಗಿ ಹಾಕಲಾಗಿದ್ದ ಕಲ್ಲಿನ ಬ್ಯಾರಿಕೇಡ್​ಗೆ ಕಾರು ವೇಗವಾಗಿ ಬಂದು ಗುದ್ದಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಧಗಧಗಿಸಿದೆ. ಇದರಲ್ಲಿ ಮೂವರು ಯುವಕರು ಸಜೀವ ದಹನವಾಗಿದ್ದಾರೆ.

ಸೋನಿಪತ್: ವೇಗವಾಗಿ ಬಂದ ಕಾರು ನಿರ್ಮಾಣಕ್ಕಾಗಿ ರಸ್ತೆ ಮಧ್ಯೆ ಅಡ್ಡಲಾಗಿ ಹಾಕಲಾಗಿದ್ದ ವಿಭಜಕಕ್ಕೆ ಗುದ್ದಿ, ಬೆಂಕಿ ಹೊತ್ತಿಕೊಂಡು ಮೂವರು ಯುವಕರು ಸಜೀವ ದಹನವಾದ ಭೀಕರ ಘಟನೆ ಹರಿಯಾಣದ ಸೋನಿಪತ್​ನಲ್ಲಿ ನಡೆದಿದೆ. ಇದೇ ವೇಳೆ ಇನ್ನೂ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋನಿಪತ್‌ನ ಮೀರತ್-ಝಜ್ಜರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ತಕ್ಷಣವೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ 6 ಯುವಕರಿದ್ದರು.


ರಾಷ್ಟ್ರೀಯ ಹೆದ್ದಾರಿ-44ರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಲ್ಲಿನ ಬ್ಯಾರಿಕೇಡ್‌ಗಳನ್ನು ರಸ್ತೆ ಮಧ್ಯೆ ಅಡ್ಡಲಾಗಿ ಅಳವಡಿಸಲಾಗಿತ್ತು. ಕತ್ತಲಲ್ಲಿ ಈ ಕಲ್ಲಿನ ಬ್ಯಾರಿಕೇಡ್‌ಗಳನ್ನು ಗಮನಿಸದೇ ವೇಗವಾಗಿ ಬಂದು ಗುದ್ದಿದೆ.

ಎಂಬಿಬಿಎಸ್ ವಿದ್ಯಾರ್ಥಿಗಳು: ಅಪಘಾತವಾದ ಕಾರಿನಲ್ಲಿದ್ದ ಎಲ್ಲರೂ ಎಂಬಿಬಿಎಸ್ ವಿದ್ಯಾರ್ಥಿಗಳು. ರೋಹ್ಟಕ್​ನ ಪಿಜಿಐನಲ್ಲಿ ವೈದ್ಯ ವ್ಯಾಸಂಗ ಮಾಡುತ್ತಿದ್ದರು. ರೋಹ್ಟಕ್​ನಿಂದ ಹರಿದ್ವಾರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ: ರಸ್ತೆಗೆ ಅಡ್ಡಲಾಗಿ ಕಲ್ಲಿನ ಬ್ಯಾರಿಕೇಡ್​ಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ಅಳವಡಿಸಿದ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆ ಪಡೆದ ಪಂನಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಎನ್‌ಎಚ್‌ಎಐ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: 21ವರ್ಷದ ಅರ್ಚಕನ ಜೊತೆ 35ರ ವಿವಾಹಿತೆ ಪರಾರಿ: ನಂಬಿಸಿ ಕರೆದೊಯ್ದವನು ಕಾಡಲ್ಲೇ ಕೈಕೊಟ್ಟ!

Last Updated :Jun 23, 2022, 4:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.