ಸ್ಪೂರ್ತಿ..! 50 ವರ್ಷಗಳ ಬಳಿಕ ಡಬಲ್ ಇಂಟರ್ಮೀಡಿಯೇಟ್​ .. ಕನಸು ನನಸಾಗಿಸಲು ವೃದ್ಧನ ಹೋರಾಟ!

author img

By

Published : Jun 22, 2022, 12:04 PM IST

Bijnor man has done double intermediate, Uttara Pradesh man has done double intermediate, Mohammad Naki news, ಡಬಲ್ ಇಂಟರ್ಮೀಡಿಯೇಟ್ ಪಡೆದ ಉತ್ತರಪ್ರದೇಶ ವ್ಯಕ್ತಿ, ಡಬಲ್ ಇಂಟರ್ಮೀಡಿಯೇಟ್ ಬಿಜ್ನೋರ್​ ವ್ಯಕ್ತಿ, ಮೊಹಮ್ಮದ್​ ನಾಕಿ ಸುದ್ದಿ,

ತಮ್ಮ ಕನಸು ನನಸ್ಸಾಗಿಸಲು ವೃದ್ಧರೊಬ್ಬರು ಇಳಿಯ ವಯಸ್ಸಿನಲ್ಲಿ ವ್ಯಾಸಂಗದ ಹೋರಾಟ ನಡೆಸಿ ಪಾಸಾಗಿದ್ದಾರೆ. ತಮ್ಮ 67ನೇ ವಯಸ್ಸಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದು ಪಾಸ್​ ಆಗಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ.

ಬಿಜ್ನೋರ್ (ಉತ್ತರಪ್ರದೇಶ): ಕೆಲ ಜನರು ಮಾತ್ರವೇ ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ವೃದ್ಧ 50 ವರ್ಷಗಳ ಬಳಿಕ ಡಬಲ್ ಇಂಟರ್ಮೀಡಿಯೇಟ್ ಪಡೆದಿರುವುದು ಅಚ್ಚರಿ ಮೂಡಿಸಿದೆ.

ಬಿಜ್ನೋರ್‌ನ ಮೊಹಮ್ಮದ್ ನಾಕಿ ಎಂಬುವವರು ತಮ್ಮ 17ನೇ ವಯಸ್ಸಿನಲ್ಲಿ ಅಂದ್ರೆ 1972 ರಲ್ಲಿ ಮಾನವಿಕ ಪದವಿ ಪೂರ್ವ ವಿದ್ಯಾರ್ಥಿಯಾಗಿ ಉತ್ತೀರ್ಣರಾಗಿದ್ದರು. ಈಗ ಐವತ್ತು ವರ್ಷಗಳ ನಂತರ ಅಂದ್ರೆ ತಮ್ಮ 67ನೇ ವಯಸ್ಸಿನಲ್ಲಿ ನಾಕಿ ಮತ್ತೆ ಪಿಯು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಅವರು ಪಾಸ್​ ಆಗಿದ್ದಾರೆ. ಏಕೆಂದರೆ ಅವರು ಫಾರ್ಮಸಿಸ್ಟ್ ಆಗುವ ಕನಸು ಮುಂದುವರಿಸಲು ಬಯಸಿದ್ದಾರೆ.

ಆನಗ ನಾನು ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಕುಟುಂಬದ ಜವಾಬ್ದಾರಿಗಳು ಅಡ್ಡಿಯಾದ ಕಾರಣ ಬೇಗನೆ ವ್ಯಾಸಂಗಕ್ಕೆ ಗುಡ್​ಬೈ ಹೇಳಬೇಕಾಯಿತು ಎಂದು ನಾಕಿ ಸುದ್ದಿಗಾರರಿಗೆ ತಿಳಿಸಿದರು. ನಾಕಿ ಅವರು ಈ ಬಾರಿ ವಿಜ್ಞಾನ ವಿಭಾದಲ್ಲಿ ಶೇಕಡಾ 72 ಅಂಕಗಳನ್ನು ಗಳಿಸಿದ್ದಾರೆ. ಇದು ಅವರ ಇಬ್ಬರು ಮೊಮ್ಮಕ್ಕಳಾದ ಮುಸ್ಕಾನ್ (17) ಮತ್ತು ಸುಹಾನಾ (15) ಕ್ರಮವಾಗಿ ತಮ್ಮ 12 ನೇ ತರಗತಿ ಮತ್ತು 10 ನೇ ತರಗತಿ ಪರೀಕ್ಷೆಗಳಲ್ಲಿ ಪಡೆದಿದ್ದಕ್ಕಿಂತ ಹೆಚ್ಚಾಗಿದೆ.

ನನ್ನ ಕುಟುಂಬವು ಆರ್ಥಿಕವಾಗಿ ಸದೃಢವಾಗಿರಲಿಲ್ಲ. ಕಲಾ ವಿಭಾಗದಲ್ಲಿ ಪಿಯು ಪರೀಕ್ಷೆಯಲ್ಲಿ ಪಾಸ್​ ಆದ ನಂತರ ನಾನು ಪದವಿಗೆ ಸಮಾನವಾದ ಕೆಲವು ಉರ್ದು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದೇನೆ. ನನ್ನ ಸ್ಥಳೀಯ ಹಳ್ಳಿಯ ಇಂಟರ್ - ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ನಾನು ಅಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದೆ. ಆದರೆ, ನನ್ನ ಸಂಬಳ ತುಂಬಾ ಕಡಿಮೆ ಇತ್ತು. ನಾನು ಅಂತಿಮವಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಅವರು ಹೇಳಿದರು.

ರಾಜೀನಾಮೆ ನೀಡಿದ ನಂತರ ನಾಕಿ ಸ್ವಲ್ಪ ಕೃಷಿ ಭೂಮಿಯನ್ನು ಖರೀದಿಸಿ ಹೂವಿನ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ನಂತರ ಅವರು ಆಯುರ್ವೇದ ಅಭ್ಯಾಸ ಕೂಡಾ ಮಾಡಿದ್ದಾರೆ.

ಓದಿ: ದ್ವಿತೀಯ ಪಿಯು ಪರೀಕ್ಷೆ: ಹಪ್ಪಳ ಮಾರಾಟಗಾರನ ಪುತ್ರಿ ರಾಜ್ಯಕ್ಕೆ ದ್ವಿತೀಯ

ಆಯುರ್ವೇದದಲ್ಲಿ ನನಗೆ ಆಸಕ್ತಿ ಬೆಳೆಯಿತು ಮತ್ತು ಅದಕ್ಕಾಗಿ ತಾವು ಅಂತಿಮವಾಗಿ ಗುರುಗ್ರಾಮ್‌ನಲ್ಲಿ ಒಂದು ಸಣ್ಣ ಅಭ್ಯಾಸ ಕೂಡಾ ಪ್ರಾರಂಭಿಸಿದೆ. ಅಲ್ಲಿ ನನ್ನ ಮಗ ಎಲೆಕ್ಟ್ರಿಕಲ್ ಸರಕುಗಳ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ. ಆದರೆ, ಆರೋಗ್ಯ ಅಧಿಕಾರಿಗಳು ನನ್ನ ಅಂಗಡಿ ಮೇಲೆ ದಾಳಿ ನಡೆಸಿದರು ಮತ್ತು ನಾನು ಅಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಅಂತಿದ್ದಾರೆ ಮೊಹಮ್ಮದ್​ ನಾಕಿ.

ಅದಾದ ಬಳಿಕ ನಾನು ನನ್ನ ಹಳ್ಳಿಗೆ ಹಿಂತಿರುಗಿದೆ. ನನಗೆ ಮಾರ್ಗದರ್ಶನ ನೀಡಿದ ಸ್ಥಳೀಯ ಶಾಲೆಯ ಶಿಕ್ಷಕಿ ನೇಹಾ ಖಾನ್ ಅವರನ್ನು ಭೇಟಿಯಾದರು. ಅವರು ಚಿಕಿತ್ಸೆ ನೀಡಲು ನೀವು ಪ್ರಕೃತಿಚಿಕಿತ್ಸೆಯಲ್ಲಿ ಪದವಿ ಪಡೆಯಬೇಕು ಎಂದು ನನಗೆ ಹೇಳಿದರು. ಹಾಗಾಗಿ ನಾನು ಬಂದಾ ಜಿಲ್ಲೆಗೆ ತೆರಳಿದೆ ಮತ್ತು ನೈಸರ್ಗಿಕ ಯೋಗ ವಿಜ್ಞಾನದಲ್ಲಿ ನಾಲ್ಕು ವರ್ಷಗಳ ಡಿಪ್ಲೊಮಾ ಪದವಿ ಕೂಡಾ ಪಡೆದಿದ್ದೇನೆ ಎಂದು ಹೇಳಿದರು.

ಡಿಪ್ಲೋಮಾ ಬಳಿಕ ಫಾರ್ಮಾಸಿಸ್ಟ್​ ಆಗ ಬಯಸಿದ ಮೊಹಮ್ಮದ್​: ಡಿಪ್ಲೋಮಾವನ್ನು ಪಡೆದ ನಂತರ, ನಾಕಿ ಮತ್ತಷ್ಟು ಅಧ್ಯಯನ ಮಾಡಲು ಮತ್ತು ಫಾರ್ಮಾಸಿಸ್ಟ್ ಆಗಲು ನಿರ್ಧರಿಸಿದರು. ಇದಕ್ಕಾಗಿ ಅವರು, ಅಮ್ರೋಹಾ ಮೂಲದ ಫಾರ್ಮಸಿ ಕಾಲೇಜಿಗೆ ಭೇಟಿ ನೀಡಿ ಈ ಬಗ್ಗೆ ತಮ್ಮ ಇಂಗಿತ ವ್ಯಕ್ತಪಡಿಸಿದರು. ಈ ಕೋರ್ಸ್ ಮಾಡಲು ಪಿಯು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಮಾನವಿಕ ವಿಷಯಗಳಲ್ಲ ಎಂದು ತಿಳಿಸಿದರು. ಹೀಗಾಗಿ ನಾನು ಮತ್ತೆ ಪರೀಕ್ಷೆ ಬರೆದು ಪಾಸ್​ ಆಗಿದ್ದೇನೆ ಎಂದು ಅವರು ತಮ್ಮ ಸಾಹಸಗಾಥೆಯನ್ನು ಬಿಚ್ಚಿಟ್ಟರು.

ಕೆಲವರು ನನ್ನ ನೋಡಿ ನಕ್ಕರು: ನಾನು ಕಾಲೇಜ್​ಗೆ ಹೋಗಲು ಪ್ರಾರಂಭಿಸಿದಾಗ ವಿದ್ಯಾರ್ಥಿಗಳು ನನ್ನನ್ನು ನೋಡಿ ನಕ್ಕರು. ನನ್ನಂತಹ ವಯಸ್ಸಾದ ವ್ಯಕ್ತಿ ಅಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದರು. ಆದರೆ, ಎಲ್ಲರೂ ನೆಗೆಟಿವ್ ಆಗಿರಲಿಲ್ಲ. ಕೆಲವು ಪೊಲೀಸ್ ಸಿಬ್ಬಂದಿ ನನ್ನ ಚಿತ್ರಗಳನ್ನು ಕ್ಲಿಕ್ ಮಾಡಿಕೊಂಡು ಇದನ್ನು ನಮ್ಮ ಮಕ್ಕಳಿಗೆ ತೋರಿಸುತ್ತೇವೆ. ಆಗಲಾದರೂ ಸ್ಫೂರ್ತಿಗೊಳ್ಳುತ್ತಾರೆ ಎಂದು ನನ್ನ ಬೆನ್ನು ತಟ್ಟಿದರು ಎಂದು ಅವರು ನೆನಪಿಸಿಕೊಂಡರು ಕೂಡಾ.

ಅವರ ಫಲಿತಾಂಶಗಳ ಬಗ್ಗೆ ತಿಳಿದ ನಂತರ ಅವರ 100 ವರ್ಷದ ತಾಯಿ ಅನೀಸಾ ಅವರು ಉತ್ಸಾಹಗೊಂಡರು. ನನ್ನ ವ್ಯಾಸಂಗಾಕ್ಕಾಗಿ ಆಶೀರ್ವಾದ ಮತ್ತು ಸ್ವಲ್ಪ ಹಣವನ್ನು ನನಗೆ ನೀಡಿದರು ಎಂದು ಹೇಳಿದರು. ಒಟ್ಟಿನಲ್ಲಿ ಛಲವೊಂದಿದ್ದರೆ ಬದುಕಿನಲ್ಲಿ ನಾವು ಏನು ಬೇಕಾದ್ರೂ ಸಾಧಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.