ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಸೋನಾರ್​ ಬಾಬಾನನ್ನು ಹೊಡೆದ ಕೊಂದ ಜನ!

author img

By

Published : Jun 10, 2022, 9:59 AM IST

Updated : Jun 10, 2022, 10:44 AM IST

Sonar Baba rape case

ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ಸೋನಾರ್​ ಬಾಬಾ ಎಂಬಾತನ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಅಹಮದ್​ನಗರ(ಮಹಾರಾಷ್ಟ್ರ): ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ರಾಜೇಶ್ ಕಾಶಿನಾಥ್​(55) ಅಲಿಯಾಸ್​​ ಸೋನಾರ್​ ಬಾಬಾನನ್ನ ಜನರು ಥಳಿಸಿ, ಕೊಂದಿರುವ ಘಟನೆ ಮಹಾರಾಷ್ಟ್ರದ ಅಹಮದ್​​ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಸೋನಾರ್​ ಬಾಬಾನನ್ನು ಹೊಡೆದ ಕೊಂದ ಜನ

ಏನಿದು ಪ್ರಕರಣ: ಕಳೆದ ಸೋಮವಾರ ರಾತ್ರಿ ಮಗು ಮನೆ ಮುಂದೆ ಆಡುತ್ತಿದ್ದ ವೇಳೆ ತಾಯಿ ಬಳಿ ಹಣ ಪಡೆದುಕೊಂಡು ಕಿರಾಣಿ ಅಂಗಡಿಗೆ ಹೋಗಿದೆ. 10ರಿಂದ 15 ನಿಮಿಷ ಕಳೆದರೂ ಬಾಲಕ ವಾಪಸ್​​ ಆಗಿಲ್ಲ. ಹೀಗಾಗಿ, ತಾಯಿ ಹುಡುಕಾಟ ನಡೆಸಿದ್ದಾಳೆ.

ಈ ವೇಳೆ, ನಿಮ್ಮ ಮನಗನನ್ನು ಸೋನಾರ್​ ಬಾಬಾ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಈ ವೇಳೆ, ಮಹಿಳೆ ಅಲ್ಲಿಗೆ ತೆರಳಿದ್ದಾಳೆ. ಮನೆಯಲ್ಲಿ ಸೋನಾರ್ ಬಾಬಾ ಮಗುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಂಡು ಬಂದಿದೆ. ತಕ್ಷಣವೇ ತಾಯಿ ಕೂಗಾಡಿ, ಜನರನ್ನ ಜಮಾಯಿಸಿದ್ದಾರೆ. ಈ ವೇಳೆ, ಆತನ ಮೇಲೆ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: 51 ಟ್ರ್ಯಾಕ್ಟರ್​ಗಳಲ್ಲಿ ಅತ್ತೆ ಮನೆಗೆ ದಿಬ್ಬಣ ಬಂದ ರೈತನ ಮಗ... ಅಳಿಯ ಬಂದ ದಾರಿ ಬಿಡಿ!

ಹಲ್ಲೆಯಿಂದಾಗಿ ಸೋನಾರ್​ ಬಾಬಾ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಮುಂದಿನ ವಿಚಾರಣೆ ನಡೆಸಿದ್ದಾರೆ.

Last Updated :Jun 10, 2022, 10:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.