ಮಹಾರಾಷ್ಟ್ರ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳಿಸಿ, ಆತಿಥ್ಯ ನೀಡುತ್ತೇವೆ: ಸಿಎಂ ಮಮತಾ

ಮಹಾರಾಷ್ಟ್ರ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳಿಸಿ, ಆತಿಥ್ಯ ನೀಡುತ್ತೇವೆ: ಸಿಎಂ ಮಮತಾ
ಅಸ್ಸೋಂ ರಾಜ್ಯವು ಅತಿವೃಷ್ಟಿಯಿಂದ ನರಳುತ್ತಿರುವ ಮಧ್ಯೆ ನೀವೆಲ್ಲ ಅಲ್ಲಿಗೆ ಹೋಗಿ ಅವರಿಗೆ ಏಕೆ ಕಷ್ಟ ಕೊಡುತ್ತಿರುವಿರಿ? ಬಿಜೆಪಿ ತನ್ನ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಿ. ನಾವು ಅವರೆಲ್ಲರಿಗೂ ಒಳ್ಳೆಯ ಆತಿಥ್ಯ ನೀಡುತ್ತೇವೆ ಹಾಗೂ ಪ್ರಜಾಪ್ರಭುತ್ವವನ್ನೂ ಉಳಿಸುತ್ತೇವೆ ಎಂದು ಸಿಎಂ ಮಮತಾ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡುತ್ತಿದೆ. ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ ಸರ್ಕಾರ ಪತನಕ್ಕೆ ಯತ್ನಿಸುತ್ತಿರುವ ಬಿಜೆಪಿಯ ಕ್ರಮವು ಅನೈತಿಕ ಹಾಗೂ ಅಸಂವಿಧಾನಿಕವಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿನ ಬೆಳವಣಿಗೆಗಳು ಆಘಾತಕಾರಿ ಎಂದಿರುವ ಮಮತಾ, ನಾವು ಜನತೆಗೆ, ಜನರ ತೀರ್ಪಿಗೆ ಹಾಗೂ ಉದ್ಧವ್ ಠಾಕ್ರೆ ಸರ್ಕಾರಕ್ಕೆ ನ್ಯಾಯ ಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಅಸ್ಸೋಂ ರಾಜ್ಯವು ಅತಿವೃಷ್ಟಿಯಿಂದ ನರಳುತ್ತಿರುವ ಮಧ್ಯೆ ನೀವೆಲ್ಲ ಅಲ್ಲಿಗೆ ಹೋಗಿ ಅವರಿಗೆ ಏಕೆ ಕಷ್ಟ ಕೊಡುತ್ತಿರುವಿರಿ? ಬಿಜೆಪಿಯು ಶಿವಸೇನೆ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಿ. ನಾವು ಅವರೆಲ್ಲರಿಗೂ ಒಳ್ಳೆಯ ಆತಿಥ್ಯ ನೀಡುತ್ತೇವೆ ಹಾಗೂ ಪ್ರಜಾಪ್ರಭುತ್ವವನ್ನೂ ಉಳಿಸುತ್ತೇವೆ ಎಂದು ಸಿಎಂ ಮಮತಾ ವ್ಯಂಗ್ಯವಾಡಿದ್ದಾರೆ.
ಶಿವಸೇನೆಯ ಹಲವಾರು ಶಾಸಕರು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು ಅವರೆಲ್ಲ ಸಚಿವ ಏಕನಾಥ್ ಶಿಂದೆ ನೇತೃತ್ವದಲ್ಲಿ ಗುವಾಹಟಿಗೆ ತೆರಳಿದ ಹಿನ್ನೆಲೆಯಲ್ಲಿ ಸಿಎಂ ಮಮತಾ ಹೇಳಿಕೆ ನೀಡಿದ್ದಾರೆ.
