6 ಸಾವಿರ ಮುಖ್ಯಶಿಕ್ಷಕ ಹುದ್ದೆಗೆ ಪರೀಕ್ಷೆ ಬರೆದ 13 ಸಾವಿರ ಶಿಕ್ಷಕರು: ಪಾಸ್ ಆದವರೆಷ್ಟು ಗೊತ್ತಾ?

6 ಸಾವಿರ ಮುಖ್ಯಶಿಕ್ಷಕ ಹುದ್ದೆಗೆ ಪರೀಕ್ಷೆ ಬರೆದ 13 ಸಾವಿರ ಶಿಕ್ಷಕರು: ಪಾಸ್ ಆದವರೆಷ್ಟು ಗೊತ್ತಾ?
ಬಿಹಾರದಲ್ಲಿ ಹೆಚ್ಎಂ(ಹೆಡ್ ಮಾಸ್ಟರ್) ಹುದ್ದೆಗೆ ಪರೀಕ್ಷೆ ಬರೆದ 87 ಶಿಕ್ಷಕರು ತಮ್ಮ ಓಎಂಆರ್ ಶೀಟ್‌ಗಳನ್ನೇ ತಪ್ಪಾಗಿ ಭರ್ತಿ ಮಾಡಿದ್ದಾರೆ.
ಪಾಟ್ನಾ (ಬಿಹಾರ): ಬಿಹಾರದಲ್ಲಿ ಶಿಕ್ಷಣದ ಗುಣಮಟ್ಟ ಯಾವ ರೀತಿ ಇದೆ ಎಂಬುವುದಕ್ಕೆ ಇಲ್ಲೊಂದು ತಾಜಾ ನಿರ್ದಶನವಿದೆ. ರಾಜ್ಯಾದ್ಯಂತ ಖಾಲಿ ಇದ್ದ 6,421 ಹೆಡ್ ಮಾಸ್ಟರ್‌ಗಳ (ಹೆಚ್ಎಂ) ಹುದ್ದೆಗಳಿಗೆ ಪರೀಕ್ಷೆ ಬರೆದ 13 ಸಾವಿರ ಹಾಲಿ ಶಿಕ್ಷಕರಲ್ಲಿ ಕೇವಲ 421 ಜನ ಮಾತ್ರವೇ ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ನೇಮಕಾತಿಗಾಗಿ ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ಮೇ 31ರಂದು ಪರೀಕ್ಷೆ ನಡೆಸಿದೆ. 6,421 ಖಾಲಿ ಹುದ್ದೆಗಳಿಗೆ ಪ್ರಸ್ತುತ ಶಿಕ್ಷಕರಾಗಿರುವ 13 ಸಾವಿರಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, 421 ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ 421 ಶಿಕ್ಷಕರಲ್ಲಿ 99 ಜನ ಸಾಮಾನ್ಯ ಕೋಟಾ, 103 ಮಂದಿ ಎಸ್‌ಸಿ/ಎಸ್‌ಟಿ ಮತ್ತು 140 ಇತರ ಹಿಂದುಳಿದ ವರ್ಗಗಳ ಕೋಟಾದಿಂದ ಪಾಸ್ ಆಗಿದ್ದಾರೆ. ಉಳಿದಂತೆ ಪರೀಕ್ಷೆಗೆ ಹಾಜರಾದ 87 ಶಿಕ್ಷಕರು ತಮ್ಮ ಓಎಂಆರ್ ಶೀಟ್‌ಗಳನ್ನೇ ತಪ್ಪಾಗಿ ಭರ್ತಿ ಮಾಡಿದ್ದಾರೆ. ಇದರ ಪರಿಣಾಮ ಆ ಶಿಕ್ಷಕರು ತಮಗೆ ತಾವೇ ಅನರ್ಹನ್ನಾಗಿ ಮಾಡಿಕೊಂಡಿದ್ದಾರೆ ಎಂದೂ ಅಧಿಕಾರಿ ತಿಳಿಸಿದ್ಧಾರೆ.
ಇದನ್ನೂ ಓದಿ: ಪಂಚಾಯ್ತಿಯಲ್ಲಿ ಗೆದ್ದಿದ್ದು ಮಹಿಳೆಯರು: ಪ್ರಮಾಣ ಸ್ವೀಕರಿಸಿದ್ದು ಗಂಡಂದಿರು, ಸಂಬಂಧಿಕರು!
