ರೇಷನ್​ ಅಂಗಡಿಗಳಲ್ಲೂ ದೊರೆಯಬೇಕು ಸ್ಯಾನಿಟರಿ ನ್ಯಾಪ್ಕಿನ್​: ಬಂಗಾಳದ ಪ್ಯಾಡ್​ಮ್ಯಾನ್​ ಬೇಡಿಕೆ

author img

By

Published : Nov 25, 2022, 4:58 PM IST

ರೇಷನ್​ ಅಂಗಡಿಗಳಲ್ಲಿ ದೊರೆಯಬೇಕು ಸ್ಯಾನಿಟರಿ ನ್ಯಾಪ್ಕಿನ್​; ಬಂಗಾಳದ ಪ್ಯಾಡ್​ಮ್ಯಾನ್​ ಬೇಡಿಕೆ ಇದು

ಹೋಮ್​ ಟ್ಯೂಟರ್​​ ಆಗಿರುವ ಸುಮಂತ್​ ಬಿಸ್ವಾಸ್​ ರಾಜ್ಯದ ಮೂಲೆಗಳಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮಹಿಳೆಯರಲ್ಲಿನ ಪೂರ್ವಗ್ರಹಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ

ಚಂದನ್​ನಗರ( ಪಶ್ಚಿಮ ಬಂಗಾಳ): ಋತುಚಕ್ರದ ಸಮಸ್ಯೆಗಳು ಮತ್ತು ಅದರ ಅವಶ್ಯಕತೆ, ಅನಾವಶ್ಯಕತೆಗಳ ಬಗ್ಗೆ ಇಂದಿಗೂ ಅನೇಕ ಗ್ರಾಮದ ಮಹಿಳೆಯರಿಗೆ ಅರಿವಿಲ್ಲ. ಆರ್ಥಿಕ ಸಮಸ್ಯೆ ಕಾರಣದಿಂದ ಅಥವಾ ಭಯದಿಂದಾಗಿ ಇನ್ನು ಹಳೆಯ ಸಂಪ್ರದಾಯದಿಂದ ಅನೇಕರು ಹೊರ ಬರಲು ಸಾಧ್ಯವಾಗಿಲ್ಲ.

ಋತುಚಕ್ರದಲ್ಲಿ ಸರಿಯದ ಸುರಕ್ಷತೆವಹಿಸದಿದ್ದಲ್ಲಿ ಅದು ಗರ್ಭಕೋಶದಲ್ಲಿ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಸಂಬಂಧ ಚಂದನ್​ನಗರದ ಹೋಮ್​ ಟ್ಯೂಟರ್​​ ಆಗಿರುವ ಸುಮಂತ್​ ಬಿಸ್ವಾಸ್​ ರಾಜ್ಯದ ಮೂಲೆಗಳಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮಹಿಳೆಯರಲ್ಲಿನ ಪೂರ್ವಗ್ರಹಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.

ಸ್ವಂತ ಖರ್ಚಿನಲ್ಲಿ ನ್ಯಾಪ್​ಕಿನ ಹಂಚಿಕೆ: ಯಾವಾಗ ಸಮಯ ಸಿಕ್ಕಾಗಲೂ ಪುರುಲಿಯಾ ದಿಂದ ಸುಂದರ್​ಬನ್ಸ್​ಗೆ ಭೇಟಿ ನೀಡಿ, ಮಹಿಳೆಯರಿಗೆ ಈ ವಿಚಾರ ಕುರಿತು ಅವರು ಮಾಹಿತಿ​ ನೀಡುತ್ತಾರೆ. ಜೊತೆಗೆ ಸ್ಯಾನಿಟರಿ ನ್ಯಾಪ್​ಕಿನ್​ ಕೂಡ ತಮ್ಮ ಖರ್ಚಿನಿಂದಲೇ ಹಂಚುತ್ತಿದ್ದಾರೆ. ಚಂದನ್​ನಗರದ ಸುಭಾಸ್ಪಲ್ಲಿಯ ಮನೆಗೆಲಸದವರು, ಸಿಂಗೂರ್​ ಸ್ಟೇಷನ್​ನ ಸ್ಲಮ್​ಗಳಲ್ಲಿನ ಮಹಿಳೆಯರಿಗೆ ಕಳೆದ ಎರಡೂ ವರೆ ವರ್ಷದಿಂದ ನ್ಯಾಪ್ಕಿನ್​ಗಳನ್ನು ನೀಡುತ್ತಿದ್ದಾರೆ.

ಸ್ಲಮ್​ಗಳನ್ನು ಮಾದರಿ ಮಾಡಬೇಕು ಎಂಬುದು ಸುಮಂತ್​ ಬಿಸ್ವಾಸ್​ ಇಚ್ಛೆಯಾಗಿದೆ. ಜೊತೆಗೆ ಸ್ಯಾನಿಟರಿ ನ್ಯಾಪ್ಕಿನ್​ ಅತಿ ಹೆಚ್ಚು ಬಳಸಿ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕು ಎನ್ನುವುದು ಅವರ ಗುರಿಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಗೂ ಬಿಸ್ವಾಸ್​ ಮನವಿ ಮಾಡಿದ್ದಾರೆ.

ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್​ ಅನ್ನು ಮಹಿಳೆಯರಿಗೆ ಸಾಮೂಹಿಕವಾಗಿ ಹಂಚಿಕೆ ಮಾಡುವ ವಿಧಾನ (ರೇಷನ್​ ಶಾಪ್​ಗಳಲ್ಲಿ) ಆಗಬೇಕು. ಆಗ ನಾವು ಅನೇಕ ಕಾಯಿಲೆಗಳನ್ನು ತಡೆಯಬಹುದು. ಮಿಗಿಲಾಗಿ, ರೇಷನ್​ ಅಂಗಡಿಗಳಲ್ಲಿ ಇದನ್ನು ನೀಡುವುದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಇರುವ ತೊಂದರೆ ನಿವಾರಣೆ ಆಗಲಿದೆ ಎನ್ನುತ್ತಾರೆ.

ತರಗತಿ ನಡೆಸುವ ಮೂಲಕ ಜಾಗೃತಿ: ಸ್ಯಾನಿಟರಿ ನ್ಯಾಪ್ಕಿನ್​ ಬಗ್ಗೆ ಜಾಗೃತಿ ಮಾತ್ರವಲ್ಲದೇ, ಋತುಚಕ್ರದ ಕುರಿತು ಶಾಲೆ ಮತ್ತು ಹಳ್ಳಿಗಳಲ್ಲಿ ತರಗತಿ ನಡೆಸುವ ಮೂಲಕ ಅದರ ಬಗ್ಗೆ ಕೂಡ ಇವರು ತಿಳಿ ಹೇಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಅನೇಕ ಶಾಲೆಗಳಲ್ಲಿ ಈ ನ್ಯಾಪ್ಕಿನ್​ ಮಿಷಿನ್​ ಅನ್ನು ಅಳವಡಿಸಲಾಗಿದೆಯಾದರೂ ಅದನ್ನು ಪುನಃ ಭರ್ತಿ ಮಾಡುವ ಕಾರ್ಯ ನಡೆಯುತ್ತಿಲ್ಲ. ಅದು ಆಗಬೇಕು ಎಂದು ತಿಳಿಸಿದ್ದಾರೆ.

ಹೂಗ್ಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್​ ಪಿ ಡಿಪಪ್​ ಪ್ರಿಯಾ ಮಾತನಾಡಿ, ತಾರಕೇಶ್ವರದಲ್ಲಿ ಸ್ವಯಂ ಸಹಾಯ ಗುಂಪಿನ ಸಹಾಯದಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್​ ನಿರ್ಮಿಸಲಾಗುತ್ತಿದೆ. ಈ ಸಂಬಂಧ ವರ್ಷ ಪೂರ್ತಿ ಜಾಹೀರಾತು ನೀಡಲಾಗುತ್ತಿದೆ. ಮುಂದೆ ನಾವು ಸುಮಂತ್​ ಬಾಬುನಂತವರ ಜೊತೆಗೆ ಕೂಡ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ರಾಜ್ಯದಲ್ಲಿ ರೇಷನ್​ ಅಂಗಡಿಗಳಲ್ಲೂ ಸ್ಯಾನಿಟರಿ ನ್ಯಾಪ್ಕಿನ್​ ಮಾರಾಟಕ್ಕೆ ರಾಜ್ಯಕ್ಕೆ ಮಾಹಿತಿ ನೀಡಿ, ಜಾರಿ ತರುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಶೇ 45 ರಷ್ಟು ಜನ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಂಧಿ: 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದ 35 ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ 45ರಷ್ಟು ತಮ್ಮ ಋತುಚಕ್ರದಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗಿದ್ದಾರೆ. ಇನ್ನು 43ರಷ್ಟು ಮಹಿಳೆಯರಿಗೆ ಋತುಚಕ್ರದ ವೇಳೆ ಈ ನ್ಯಾಪ್ಕಿನ್​ ಸಿಗುತ್ತಿದೆ. ಶೇ 67ರಷ್ಟು ಮಹಿಳೆರಯರಿ ನ್ಯಾಪ್ಕಿನ್​ ಬಳಸಲು ಮುಂದಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಸಂಖ್ಯೆ ಹೆಚ್ಚಳವಾಗಿದೆ. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಕೊರತೆ ಇದೆ.

ನಾನು ಕಳೆದ 12 ವರ್ಷಗಳಿಂದಾಗಿ ಈ ಬಗ್ಗೆ ಜಾಗೃತಿ ನಡೆಸುತ್ತಿದ್ದೇನೆ. ಆದರೆ ಮಹಿಳೆಯರ ಆರ್ಥಿಕ ಸ್ಥಿತಿಗೆ ಅನುಸಾರವಾಗಿ ಕೂಡ ಈ ಸ್ಯಾನಿಟರಿ ನ್ಯಾಪ್ಕಿನ್​ ಬಳಕೆ ನಡೆಸುತ್ತಿದೆ. ಕುಟುಂಬ ಸದಸ್ಯರಿಗೆ ತಿಳಿಸಿ, ಅಂಗಡಿಗಳಲ್ಲಿ ಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಸುಮಂತ್​ ಬಿಸ್ವಾಸ್​.

ಇದನ್ನೂ ಓದಿ: ವಿಮೆ ಹಣಕ್ಕೆ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದ ಪತಿ: 3 ಮದುವೆಯಾಗಿ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.