ಎರಡು ದೇಶಗಳ ಮಧ್ಯೆ ಯುದ್ಧವಂತೆ : ಅನ್ಯರಿಗೆ ತೈಲ ಬೆಲೆ ಏರಿಕೆಯ ಚಿಂತೆ!

author img

By

Published : Feb 26, 2022, 11:54 AM IST

Russia attacks on Ukraine

ರಷ್ಯಾ‐ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಮೇಲೆ ಯಾವ ಬಗೆಯ ಪರಿಣಾಮಗಳಾಗುತ್ತವೆ? ಯಾವುದೇ ಯುದ್ಧವನ್ನು ಏಕಾಂತದಲ್ಲಿ ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮಗಳು, ಪ್ರತಿಕ್ರಿಯೆಗಳು ಸರಪಣಿಯಂತಿರುತ್ತವೆ. ಈ ಕೊಂಡಿಗಳ ಬಂಧಕ್ಕೆ ಕೊನೆಯೇ ಇಲ್ಲ. ಇದು ಇಡೀ ಪ್ರಪಂಚದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಪಾರ, ವಾಣಿಜ್ಯ ‐ ಎಲ್ಲವೂ ತೊಂದರೆಗೆ ಒಳಗಾಗುತ್ತವೆ. ಯುದ್ಧ ಘೋಷಣೆಯಾದ ಬೆನ್ನಲ್ಲೇ ಗುರುವಾರ ಜಾಗತಿಕ ಮಾರುಕಟ್ಟೆಗಳು ಸಾಕಷ್ಟು ಕುಸಿತ ಕಂಡಿವೆ..

ರಷ್ಯಾದಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ಈ ಯುದ್ಧವು ವಿಶ್ವ ನಾಯಕರು ಮತ್ತು ಶಾಂತಿಯನ್ನು ಉತ್ತೇಜಿಸುವ ಸಂಸ್ಥೆಗಳ ಸಾಮೂಹಿಕ ನಾಯಕತ್ವದ ವೈಫಲ್ಯದ ಪ್ರತಿಬಿಂಬವಾಗಿದೆ.

ಉಕ್ರೇನ್ ಮೇಲೆ ರಷ್ಯಾ ಬಾಂಬ್ ಹಾಕುವುದಿಲ್ಲ ಎಂದು ಇಡೀ ವಿಶ್ವವೇ ಇರಿಸಿಕೊಂಡಿದ್ದ ಭರವಸೆಯನ್ನು ರಷ್ಯಾ ಅಧಕ್ಷ ವ್ಲಾಡಿಮಿರ್ ಪುಟಿನ್ ಕೊನೆಗೂ ಸುಳ್ಳಾಗಿಸಿದ್ದಾರೆ.

ಅದೂ ಯುದ್ಧದ ಮೊದಲ ದಿನವೇ! ಈ ಅನಿರೀಕ್ಷಿತ ನಡೆಯ ಮೂಲಕ ಅವರು ಬಲಿಷ್ಠ ಅಮೆರಿಕವನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ. ಅಮೆರಿಕ, ಇಂಗ್ಲೆಂಡ್, ಯುರೋಪಿಯನ್ ಯೂನಿಯನ್, ಕೆನಡಾ, ಜಮರ್ನಿ ಮತ್ತು ಜಪಾನ್ ವಿಧಿಸಿದ ಆರ್ಥಿಕ ನಿರ್ಬಂಧಗಳನ್ನೂ ಅವರು ಧಿಕ್ಕರಿಸಿದ್ದಾರೆ. ಮಿಲಿಟರಿ ಬಲದ ವಿಷಯದಲ್ಲಿ ಇದು ಎರಡು ಅಸಮಾನ ದೇಶಗಳ ನಡುವಿನ ಯುದ್ಧವಾಗಿದೆ.

ರಷ್ಯಾ‐ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಮೇಲೆ ಯಾವ ಬಗೆಯ ಪರಿಣಾಮಗಳಾಗುತ್ತವೆ? ಯಾವುದೇ ಯುದ್ಧವನ್ನು ಏಕಾಂತದಲ್ಲಿ ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮಗಳು, ಪ್ರತಿಕ್ರಿಯೆಗಳು ಸರಪಣಿಯಂತಿರುತ್ತವೆ. ಈ ಕೊಂಡಿಗಳ ಬಂಧಕ್ಕೆ ಕೊನೆಯೇ ಇಲ್ಲ. ಇದು ಇಡೀ ಪ್ರಪಂಚದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವ್ಯಾಪಾರ, ವಾಣಿಜ್ಯ‐ಎಲ್ಲವೂ ತೊಂದರೆಗೆ ಒಳಗಾಗುತ್ತವೆ. ಯುದ್ಧ ಘೋಷಣೆಯಾದ ಬೆನ್ನಲ್ಲೇ ಗುರುವಾರ ಜಾಗತಿಕ ಮಾರುಕಟ್ಟೆಗಳು ಸಾಕಷ್ಟು ಕುಸಿತ ಕಂಡಿವೆ. ಚಿನ್ನದ ಬೆಲೆಗಳು 2021ರ ಆರಂಭದ ಬಳಿಕ ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪಿವೆ. ಗುರುವಾರದ ವಹಿವಾಟಿನ ಮೊದಲ ಒಂದು ಗಂಟೆಯಲ್ಲಿ ದಲಾಲ್ ಸ್ಟ್ರೀಟ್ ಷೇರುಗಳಲ್ಲಿ ಶೇ.3.5 ಕುಸಿತವನ್ನು ಕಂಡಿತು. ಇಡೀ ಭಾರತೀಯ ಮಾರುಕಟ್ಟೆ $103 ಶತಕೋಟಿಗಿಂತ ಕಡಿಮೆಯಿಲ್ಲದ ನಷ್ಟ ಅನುಭಸಿತು. ಗೊಂದಲಕಾರಿಯಾದ ಬೆಳವಣಿಗೆಗಳು ಸರಕುಗಳ ಬೆಲೆಗಳನ್ನು ಹೆಚ್ಚಿಸಬಹುದು.

ಯುದ್ಧದ ಕೆಲವು ಋಣಾತ್ಮಕ ಪರಿಣಾಮಗಳು ತಕ್ಷಣವೇ ಭಾರತದ ಅನುಭವಕ್ಕೆ ಬರುತ್ತೆ. ಇನ್ನೂ ಕೆಲವು ಪರಿಣಾಮಗಳ ಬಿಸಿ ಮುಂಬರುವ ವಾರಗಳಲ್ಲಿ ತಟ್ಟುವ ನಿರೀಕ್ಷೆಯಿದೆ. ರಫ್ತುಗಳಿಗೆ ಅಂತಹ ತೊಂದರೆಯೇನೂ ಆಗದು. ಏಕೆಂದರೆ, ಅವುಗಳ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿರುತ್ತದೆ. ಆದರೆ, ರಷ್ಯಾದಿಂದ ಮಾಡಿಕೊಳ್ಳುತ್ತಿರುವ ಆಮದುಗಳ ಒಟ್ಟು ಪ್ರಮಾಣ ಶೇ.1.5 ರಷ್ಟಾಗಿರುತ್ತದೆ.

2021ರ ಹಣಕಾಸು ವರ್ಷದಲ್ಲಿ, ಭಾರತವು $ 2.6 ಶತಕೋಟಿ ಮೌಲ್ಯದ ಉತ್ಪನ್ನಗಳನ್ನು ರಷ್ಯಾಕ್ಕೆ ರಫ್ತು ಮಾಡಿದೆ. ಇದೇ ಅವಧಿಯಲ್ಲಿ ಆಮದು ಪ್ರಮಾಣ ದುಪ್ಪಟ್ಟಿಗಿಂತಲೂ ಹೆಚ್ಚು, ಅಂದರೆ $5.5 ಶತಕೋಟಿ ಆಗಿತ್ತು. ಮುಖ್ಯವಾಗಿ ಔಷಧೀಯ ಉತ್ಪನ್ನಗಳು ಮತ್ತು ವಿದ್ಯುತ್ ಯಂತ್ರೋಪಕರಣಗಳನ್ನು ರಷ್ಯಾಕ್ಕೆ ಮಾರಾಟ ಮಾಡಲಾಯಿತು. ಇತರ ರಫ್ತುಗಳಲ್ಲಿ ಚಹಾ, ಉಡುಪು ಮತ್ತು ಜವಳಿ ಸೇರಿವೆ. ಖಾದ್ಯ ತೈಲದ ಆಮದು ಹೊರತುಪಡಿಸಿ ಭಾರತ ಮತ್ತು ಉಕ್ರೇನ್ ನಡುವಿನ ವ್ಯಾಪಾರ ಸಂಬಂಧಗಳು ನಗಣ್ಯವಾಗಿವೆ.

ಸೇನಾ ವಿಭಾಗರಷ್ಯಾಉಕ್ರೇನ್
ವಾಯುಪಡೆ ಸಿಬ್ಬಂದಿ1,65,00035,000
ದಾಳಿ ವಿಮಾನಗಳು1,328 146
ದಾಳಿ ಹೆಲಿಕಾಫ್ಟರ್​ಗಳು478+ 42
ಸೇನಾ ಸಿಬ್ಬಂದಿ2,80,000 1,25,600
ಸೇನಾ ಟ್ಯಾಂಕರ್​ಗಳು13,367 2,119
ಸೇನಾ ಫಿರಂಗಿಗಳು5,935 1,962
ಶಸ್ತ್ರಸಜ್ಜಿತ ವಾಹನಗಳು19,783 2,870
ನೌಕಾ ಸಿಬ್ಬಂದಿ 1,50,000 15,000
ಯುದ್ಧ ನೌಕೆಗಳು74 2
ಜಲಂತರ್ಗಾಮಿಗಳು510

(ಮೂಲ: ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಮಿಲಿಟರಿ ಬ್ಯಾಲೆನ್ಸ್ ವರದಿ-2022)

ಕಮ್ಯುನಿಸ್ಟ್ ದೇಶದಿಂದ ಆಮದು ಮಾಡಿಕೊಳ್ಳುವ ಪೆಟ್ರೋಕೆಮಿಕಲ್ ಉತ್ಪನ್ನಗಳೂ ಉಲ್ಲೇಖಿಸುವಷ್ಟಿಲ್ಲ. ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟವು ಸೂಚಿಸಿದಂತೆ ಭಾರತವು ಪೂರೈಕೆಗಾಗಿ ಬೇರೆ ದೇಶಗಳತ್ತ ಗಮನಹರಿಸಬಹುದು. ಭಾರತದ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಆಮದು ಸುಮಾರು $150 ಬಿಲಿಯನ್ ಎಂದು ಹೇಳಲಾಗುತ್ತದೆ. ಇದರಲ್ಲಿ ರಷ್ಯಾದಿಂದ $ 3.7 ಶತಕೋಟಿ ಮೌಲ್ಯದ ಉತ್ಪನ್ನಗಳು ಬರುತ್ತಿವೆ.

ಈಗ ಯುದ್ಧದ ಸಮಯವಾಗಿರುವುದರಿಂದ ಆಮದಿಗೆ ಪರ್ಯಾಯಗಳು ಸುಲಭವಾಗಿ ಲಭಿಸದಿರಬಹುದು ಅಥವಾ ಪ್ರಸ್ತುತ ಆಗುತ್ತಿರುವ ಆಮದುಗಳಿಗೂ ಅಡ್ಡಿಯುಂಟಾಗಬಹುದು. ಏಕೆಂದರೆ, ಯುರೋಪ್ ದೇಶಗಳೂ ಇಂಧನ ಪೂರೈಕೆದಾರರನ್ನು ಹುಡುಕುತ್ತಿವೆ. ಯುರೋಪ್ ತನ್ನ ತೈಲದ ಕಾಲು ಭಾಗವನ್ನು ಮತ್ತು ಅನಿಲದ ಮೂರನೇ ಒಂದು ಭಾಗದಷ್ಟು ರಷ್ಯಾದಿಂದ ಪಡೆಯುತ್ತವೆ.

ಈ ಕಾರಣಕ್ಕಾಗಿಯೇ ಅಮೆರಿಕವು ರಷ್ಯಾವನ್ನು'ದೊಡ್ಡ ಗ್ಯಾಸ್ ಸ್ಟೇಷನ್' ಎಂದು ಕರೆಯುತ್ತಿರುವುದು. ರಷ್ಯಾ ವಿರುದ್ಧ ಈಗ ನಿರ್ಬಂಧಗಳನ್ನು ಹೇರಿರುವ ಕಾರಣಕ್ಕೆ ಯುರೋಪ್​ಗೆ ತೈಲ ಹಾಗೂ ಅನಿಲದ ಪೂರೈಕೆ ಸಂಪೂರ್ಣವಾಗಿ ಬಾಧಿತವಾಗುವುದು.

ಗಮನಾರ್ಹವೆಂದ್ರೆ, ವಿಶ್ವದ ಅತಿ ದೊಡ್ಡ ತೈಲ ಆಮದುದಾರ ದೇಶಗಳ ಪೈಕಿ ಭಾರತಕ್ಕೆ ಮೂರನೇ ಸ್ಥಾನವಿದೆ. ಯಾವುದೇ ಪ್ರಮುಖ ಯುದ್ಧದ ಆರಂಭಿಕ ಅವಧಿಯಲ್ಲಿ, ತೈಲ ಬೆಲೆಗಳು ಸಹಜವಾಗಿಯೇ ಹೆಚ್ಚಾಗುತ್ತವೆ ಮತ್ತು ಆನಂತರ ಸ್ಥಿರಗೊಳ್ಳುತ್ತವೆ. 1990ರಲ್ಲಿ ನಡೆದ ಕೊಲ್ಲಿ ಯುದ್ಧವು ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಗೆ ಕಾರಣವಾಯಿತು.

ಯುದ್ಧ ಮಾತ್ರವಲ್ಲ, ಯುದ್ಧದ ಭೀತಿಯು ತೈಲಬೆಲೆ ಏರಿಕೆಗೆ ಕಾರಣವಾಗುತ್ತದೆ. ಉದಾಹರಣೆಗೆ, 2014ರಲ್ಲಿ ಯುರೋಪಿಯನ್ ಯುದ್ಧದ ಭೀತಿಯು ಬ್ಯಾರೆಲ್ ಬೆಲೆಗಳನ್ನು $ 100ಕ್ಕಿಂತ ಆಚೆಗೆ ತಳ್ಳಿತು. ಈ ಬಾರಿ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ $ 110 ಮುಟ್ಬಬಹುದು ಎಂಬುದು ವ್ಯಾಪಾರ ವಿಶ್ಲೇಷಕರ ಪ್ರಕ್ಷೇಪಣವಾಗಿದೆ.

ತೈಲ ಬೆಲೆಗಳು ಈಗ ಏರಿಕೆಯಾದರೆ, ಭಾರತದ ಚಾಲ್ತಿ ಖಾತೆ ಕೊರತೆಯು ಹೆಚ್ಚಾಗುತ್ತದೆ. ರಷ್ಯಾ‐ಉಕ್ರೇನ್ ನಡುವಿನ ಉದ್ವಿಗ್ನತೆಯು ಕಚ್ಚಾ ತೈಲ ಪ್ರಕ್ರಿಯೆಯಲ್ಲಿ ಉಲ್ಬಣಕ್ಕೆ ಅವಕಾಶ ನೀಡುತ್ತದೆ ಮತ್ತು ದೇಶದ ಆರ್ಥಿಕ ಸ್ಥಿರತೆಗೆ ಅಪಾಯವನ್ನು ಉಂಟು ಮಾಡುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದಾರೆ.

ಈಗಿರುವ ಸಾಧ್ಯತೆ ಎಂದರೆ, ರಷ್ಯಾದಿಂದ ಹಡಗುಗಳಲ್ಲಿ ಸರಕುಗಳ ಸಾಗಾಟಕ್ಕೆ ಉಕ್ರೇನ್ ತಡೆಯೊಡ್ಡಬಹುದು. ಇದು ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಬರುವಲ್ಲಿ ಅಡಚಣೆ ಉಂಟುಮಾಡಬಹುದು. ಆಮದು ಮಾಡಿಕೊಳ್ಳುವ ಸೂರ್ಯಕಾಂತಿ ಎಣ್ಣೆ ಮೇಲೆ ದೇಶದ ಅವಲಂಬನೆಯು ಒಟ್ಟು ಆವಶ್ಯಕತೆಯ 60% ಆಗಿದೆ.

ಸೂರ್ಯಕಾಂತಿ ಎಣ್ಣೆ ಆಮದಿನ ಪೈಕಿ ಸುಮಾರು 70% ಉಕ್ರೇನ್​ನಿಂದ, 20% ರಷ್ಯಾದಿಂದ ಮತ್ತು 10% ಅರ್ಜೆಂಟೀನಾದಿಂದ ಬರುತ್ತಿದೆ. ಸಂಘರ್ಷವು ದೀರ್ಘಾವಧಿಗೆ ಮುಂದುವರಿದರೆ, ಆಮದಿಗೆ ಅಡ್ಡಿಯಾಗಬಹುದೆಂದು ಭಾರತೀಯ ಸಮನ್ವಯ್ ತೈಲ ಉತ್ಪಾದಕರ ಸಂಘವು ನಿರೀಕ್ಷಿಸುತ್ತಿದೆ. ಖಾದ್ಯ ತೈಲದ ಪ್ರಮುಖ ಪ್ರಕಾರವಾಗಿರುವ ಸೂರ್ಯಕಾಂತಿ ಎಣ್ಣೆ ಪ್ರಸ್ತುತ ದಾಸ್ತಾನು ಮುಂದಿನ ಎರಡು ತಿಂಗಳುಗಳಿಗೆ ಸಾಕಾಗಬಹುದು.

ಫೆಬ್ರವರಿ ಮತ್ತು ಮಾರ್ಚ್ ನಡುವೆ ಉಕ್ರೇನ್​ನಿಂದ ಕನಿಷ್ಠ 2 ಲಕ್ಷ ಟನ್​ಗಳಷ್ಟು ತೈಲವನ್ನು ನಿರೀಕ್ಷಿಸಲಾಗಿದೆ. ಆದರೆ, ಯುದ್ಧ ಭೀತಿಯ ಕಾರಣಕ್ಕೆ ಒಂದೇ ಒಂದು ಹಡಗೂ ಉಕ್ರೇನ್​ನಿಂದ ಹೊರಬಂದಿಲ್ಲ. ಆಮದು ಪ್ರಮಾಣವು ಚಿಕ್ಕದಾಗಿದೆ. ಆದರೆ ಇದು ದೇಶಿಯ ಮಾರುಕಟ್ಟೆಗೆ, ವಿಶೇಷವಾಗಿ ದಕ್ಷಿಣ ರಾಜ್ಯಗಳಿಗೆ ನಿರ್ಣಾಯಕವಾಗಲಿದೆ.

ಇದರ ಜೊತೆಗೆ, ಉಕ್ರೇನ್ ಅಜೈವಿಕ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕಗಳು ಮತ್ತು ಇತರ ಸರಕುಗಳನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಈ ಮೂಲಕ ಭಾರತವು ಉಕ್ರೇನ್​ಗೆ ಅತಿದೊಡ್ಡ ರಫ್ತು ತಾಣವಾಗಿದೆ. ಪ್ರಸ್ತುತ, ಉದ್ವಿಗ್ನತೆಯು ಉಲ್ಬಣಿಸಿದ್ದರೂ ರಷ್ಯಾ ಅಥವಾ ಉಕ್ರೇನ್​ಗೆ ರಫ್ತುಗಳು ಅಪಾಯಕ್ಕೆ ಒಳಗಾಗಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಜೊತೆಗೆ, ಭಾರತಕ್ಕಿರುವ ಮತ್ತೊಂದು ಪ್ರಮುಖ ಚಿಂತೆ ಎಂದರೆ, ರಷ್ಯಾ ಮತ್ತು ಅಮೆರಿಕದ ನಡುವೆ ಉತ್ತಮ ಸಮತೋಲನ ಉಳಿಸಿಕೊಳ್ಳುವುದು. ಇದು ರಾಜತಾಂತ್ರಿಕವಾಗಿ ತುಂಬ ಬಿಗುವಿನ ಸ್ಥಿತಿ. 39,000 ಕೋಟಿ ರೂ.ಗೆ ಐದು ಎಸ್‐400 ಏರ್ ಡಿಫೆನ್ಸ್ ದಳಗಳನ್ನು ಭಾರತಕ್ಕೆ ಪೂರೈಸುವ ಕೆಲಸವನ್ನು ರಷ್ಯಾ ಹೊಂದಿದೆ.

ಇದಕ್ಕೆ ಅಮೆರಿಕದ ವಿರೋಧವಿದೆ. ಒಂದು ವೇಳೆ ಭಾರತ ಈಗ ರಷ್ಯಾ ಪರವಾಗಿ ನಿಂತರೆ, ಅಮೆರಿಕದೊಂದಿಗಿನ ಮೈತ್ರಿಗೆ ಧಕೆಯಾಗಲಿದೆ. ಆದರೂ, ಭಾರತವು ಅಮೆರಿಕವನ್ನು ವಿರೋಧಿಸಲು ಸಾಧ್ಯವಿಲ್ಲ. ಏಕೆಂದರೆ, ಅಮೆರಿಕ ಮತ್ತು ಭಾರತ ಎರಡೂ ದೇಶಗಳಿಗೆ ಸಾಮಾನ್ಯ ಶತ್ರುವಾಗಿದೆ. ಪರಿಸ್ಥಿತಿಯನ್ನು ಭಾರತ ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬುದನ್ನು ಕಾದು ನೋಡಬೇಕು.

ರಷ್ಯಾ ಈಗಾಗಲೇ ಹಲವು ದೇಶಗಳಿಂದ ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿದೆ. ಪಾಶ್ಚಿಮಾತ್ರ ನಿರ್ಬಂಧಗಳನ್ನು ಧಿಕ್ಕರಿಸಲು ಮಾಸ್ಕೋ ಹೊಸ ವ್ಯಾಪಾರ ಪಾಲುದಾರರನ್ನು ಹುಡುಕಲು ಪ್ರಾರಂಭಿಸಬಹುದು. ಕೋವಿಡ್ ಪ್ರೇರಿತ ಆರ್ಥಿಕ ಪರಿಸ್ಥಿತಿಯು ರಷ್ಯಾವನ್ನು ದೀರ್ಘಕಾಲದವರೆಗೆ ಯುದ್ಧವನ್ನು ಮುಂದುವರಿಸಲು ಅನುಮತಿಸುವುದಿಲ್ಲ ಅಥವಾ ಆಥಿರ್ಕ ಕಾರಣಗಳಿಗಾಗಿ ಕಾದಾಡುತ್ತಿರುವ ಎರಡು ದೇಶಗಳೊಂದಿಗೆ ಭಾರತವು ತನ್ನ ಪ್ರಸ್ತುತ ಸಂಬಂಧವನ್ನು ಮುಂದುವರೆಸುವುದನ್ನೂ ತಡೆಯುವುದಿಲ್ಲ. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್ ಸೃಷ್ಟಿಸಿರುವ ವ್ಯಾಪಾರದ ಅಂತರವನ್ನು ಭಾರತವು ತುಂಬುವುದೇ ಅಥವಾ ಚೀನಾ ದೇಶವೇ ಎಂದು ನೋಡಬೇಕು.

ಗಿರೀಶ್ ಲಿಂಗಣ್ಣ,

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.