ಸರ್ಕಾರಿ ಆಸ್ಪತ್ರೆಗೆ ಸಲ್ಲಿಕೆಯಾದ ಬಿರಿಯಾನಿ ಬಿಲ್ ಎಷ್ಟು ಲಕ್ಷ ಗೊತ್ತಾ?

ಸರ್ಕಾರಿ ಆಸ್ಪತ್ರೆಗೆ ಸಲ್ಲಿಕೆಯಾದ ಬಿರಿಯಾನಿ ಬಿಲ್ ಎಷ್ಟು ಲಕ್ಷ ಗೊತ್ತಾ?
ಆಸ್ಪತ್ರೆಯ ಪೀಠೋಪಕರಣದ ಬಿಲ್ಗಳೊಂದಿಗೆ ಬಂದ ಬಿಲ್ಗಳಲ್ಲಿ ಬಿರಿಯಾನಿಗಾಗಿಯೇ 3 ಲಕ್ಷ ರೂ. ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಇವು ಬೋಗಸ್ ಬಿಲ್ ಎಂಬುವುದು ಸಹ ತಿಳಿದು ಬಂದಿದೆ.
ಕತ್ವಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಭಾರಿ ಗೋಲ್ಮಾಲ್ ನಡೆದಿದೆ. ಬಿರಿಯಾನಿಯ ಬಿಲ್ ಅಷ್ಟೇ 3 ಲಕ್ಷ ರೂ. ಮಾಡಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಪೂರ್ವ ಬರ್ಧಮಾನ್ ಜಿಲ್ಲೆಯ ಕತ್ವಾ ಉಪವಿಭಾಗ ಆಸ್ಪತ್ರೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. ಬಿರಿಯಾನಿಯ ಬಿಲ್ಗಳ ಹೊರತಾಗಿ ಆಸ್ಪತ್ರೆಗೆ ಇನ್ನೂ 81 ಬಿಲ್ಗಳು ಸಲ್ಲಿಕೆಯಾಗಿವೆ. ಕೆಲ ದಿನ ಹಿಂದೆ ಆಸ್ಪತ್ರೆಗೆ ನೂತನ ಅಧೀಕ್ಷಕರ ನೇಮಕವಾಗಿತ್ತು. ಆಗ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಬಿಲ್ಗಳ ಮಂಜೂರು ಮಾಡುವಂತೆ ಗುತ್ತಿಗೆದಾರರು ಬಿಲ್ಗಳನ್ನು ಸಲ್ಲಿಸಿದ್ದರು.
ಈ ಬಿಲ್ಗಳನ್ನು ಪರಿಶೀಲಿಸುವಾಗ ಅದರಲ್ಲಿ ಕೆಲ ಬಿಲ್ಗಳು ಬಿರಿಯಾನಿಗಾಗಿಯೇ 3 ಲಕ್ಷ ರೂ. ಮಾಡಿದ್ದು ಪತ್ತೆಯಾಗಿವೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಆಸ್ಪತ್ರೆಯ ಅಧಿಕಾರಿಗಳಿಗೆ ಈ ನಕಲಿ ಬಿಲ್ಗಳನ್ನು ಸಲ್ಲಿಸಲಾಗಿದೆ. ಇಂತಹ ಬಿಲ್ಗಳಿಗೆ ಆರೋಗ್ಯ ಅಧಿಕಾರಿಗಳೇ ಸಹಿ ಮಾಡಿರುವ ಅನುಮಾನ ಸಹ ಮೂಡಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯು ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ವಾಹನ ಡಿಕ್ಕಿ ಹೊಡೆದು ಬಾಲಕಿ ಸಾವು: ಜೀವಂತವಾಗಿ ಚಾಲಕನ ಸುಟ್ಟ ಗ್ರಾಮಸ್ಥರು!
