ಕೋವಿಡ್ ನಿರ್ಬಂಧಗಳ ಸಡಿಲಿಕೆ.. ರೈಲ್ವೆ ಪ್ರಯಾಣಿಕರ ಸಂಖ್ಯೆ ಶೇ. 113 ರಷ್ಟು ಹೆಚ್ಚಳ:RTI

author img

By

Published : Oct 11, 2021, 10:51 PM IST

ರೈಲ್ವೆ

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, 2021-2022ರ ಎರಡನೇ ತ್ರೈಮಾಸಿಕದಲ್ಲಿ ರೈಲ್ವೇ ಪ್ರಯಾಣಿಕರ ಸಂಖ್ಯೆ ಶೇಕಡಾ 113 ರಷ್ಟು ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ನವದೆಹಲಿ: ಕೋವಿಡ್​ ಪ್ರಕರಣಗಳು ಕಡಿಮೆಯಾಗಿದ್ದರಿಂದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, 2021-2022ರ ಎರಡನೇ ತ್ರೈಮಾಸಿಕದಲ್ಲಿ ರೈಲ್ವೇ ಪ್ರಯಾಣಿಕರ ಸಂಖ್ಯೆ ಶೇಕಡಾ 113 ರಷ್ಟು ಹೆಚ್ಚಾಗಿದೆ.

2020-21ರ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದರಿಂದ ರೈಲುಗಳ ಸಂಚಾರ ರದ್ದು ಪಡಿಸಲಾಗಿದ್ದು, ಆದಾಯದಲ್ಲಿ ಇಳಿಮುಖವಾಗಿತ್ತು. ಆದರೆ, ಕೋವಿಡ್​ ನಿರ್ಬಂಧಗಳ ಸಡಿಲಿಕೆ ಬಳಿಕ ಕೋವಿಡ್ ಪೂರ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶೇಕಡಾ 96 ರಷ್ಟು ರೈಲುಗಳು ಸಂಚಾರ ಪುನಾರಂಭಿಸಿವೆ.

ಪ್ರಸ್ತುತ, ವಿಶೇಷ ರೈಲುಗಳನ್ನು ಓಡಿಸುತ್ತಿದ್ದು, ನಿಯಮಿತ ಸೇವೆಗಳನ್ನು ಇನ್ನೂ ಕಾರ್ಯಗತಗೊಳಿಸಿಲ್ಲ. ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರ ಆರ್​ಟಿಐ ಪ್ರಶ್ನೆಗೆ ಉತ್ತರಿಸಿದ ರೈಲ್ವೆ, ಮೊದಲ ತ್ರೈಮಾಸಿಕದಲ್ಲಿ 4,921.11 ಕೋಟಿ ರೂಪಾಯಿಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ 10,513.07 ಕೋಟಿ ರೂ. ಗಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಲಾಕ್​ಡೌನ್ ಸಡಿಲಗೊಳಿಸಿರುವುದರಿಂದ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ. ದೂರದ ಊರುಗಳಿಗೆ ಮಾತ್ರ ರೈಲುಗಳ ಸಂಚಾರ ಆರಂಭವಾಗಿದೆ. ಅಲ್ಪ ದೂರ ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಿಗೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ

ಸಾಮಾನ್ಯ ದರಗಳಲ್ಲಿ 1,402 ಮೇಲ್ ಎಕ್ಸ್‌ಪ್ರೆಸ್(Mail express) ರೈಲುಗಳನ್ನು ಓಡಿಸುತ್ತಿದ್ದರೆ, 323 ವಿಶೇಷ ರೈಲುಗಳನ್ನು ಸಾಮಾನ್ಯ ದರಗಳಲ್ಲಿ ಓಡಿಸಲಾಗುತ್ತಿದೆ. ಆದಾಯದ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವೆಂದರೆ ಹೆಚ್ಚಿನ ರೈಲುಗಳು ಕಾರ್ಯ ನಿರ್ವಹಿಸುತ್ತಿರುವುದು.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಕೇಂದ್ರದ ವಿದ್ಯುತ್‌, ಕಲ್ಲಿದ್ದಲು ಸಚಿವರೊಂದಿಗೆ ಅಮಿತ್‌ ಶಾ ಚರ್ಚೆ

ಅಲ್ಲದೇ, ಜನರು ಈಗ ಕೇವಲ ವ್ಯಾಪಾರಕ್ಕಾಗಿ ಮಾತ್ರವಲ್ಲದೇ ವಿರಾಮಕ್ಕಾಗಿ ಪ್ರಯಾಣಿಸಲು ಆರಂಭಿಸಿದ್ದಾರೆ. ಮಹಾರಾಷ್ಟ್ರದಂತಹ ಅನೇಕ ರಾಜ್ಯಗಳಲ್ಲಿ ಪ್ರಯಾಣದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ" ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.