ಸರ್ಕಾರ ವಿಸರ್ಜಿಸುವ ಸುಳಿವು ನೀಡಿದ ರಾವುತ್​.. ಮಧ್ಯಾಹ್ನ ಸಂಪುಟ ಸಭೆ.. ಉದ್ದವ್​ ಠಾಕ್ರೆಗೂ ಕೋವಿಡ್​​​​+

author img

By

Published : Jun 22, 2022, 12:32 PM IST

Updated : Jun 22, 2022, 1:45 PM IST

REBEL LEADER EKNATH SHINDE LIKELY FORM INDEPENDENT GROUP CLAIMS TO HAVE STHE SUPPORT OF 40 MLA

ಶಿವಸೇನೆಯಲ್ಲಿ ಭಿನ್ನಮತ ಉಂಟಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜಿಸುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಆದರೆ, ಸಂಪುಟ ಸಭೆಯ ಅಜೆಂಡಾ ಇನ್ನೂ ನಿರ್ಧಾರವಾಗಿಲ್ಲ.

ಮುಂಬೈ: ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬಂಡಾಯದ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ ಬಂಡಾಯ ನಾಯಕ ಶಿಂಧೆ ಪ್ರತ್ಯೇಕ ಗುಂಪು ರಚನೆಗೆ ಸಂಬಂಧಿಸಿದಂತೆ ಪತ್ರವೊಂದನ್ನ ಸಿದ್ಧಪಡಿಸಿದ್ದು, ಇದಕ್ಕೆ ಬಂಡಾಯ ಶಾಸಕರು ಸಹಿ ಹಾಕಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸ್ವತಂತ್ರ ಗುಂಪು ರಚನೆಗೆ 37 ಸದಸ್ಯರ ಅಗತ್ಯವಿದೆ. ಆದರೆ ನಮ್ಮ ಬಳಿ 40 ಶಾಸಕರಿದ್ದಾರೆ ಎಂದು ಏಕನಾಥ್ ಶಿಂಧೆ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಶಾಸಕರು ಶಿಂಧೆ ಜೊತೆ ಇರುವ ವಿಡಿಯೋ, ಫೋಟೋಗಳು ಹಾಗೂ ಶಾಸಕರು ಹೇಳಿಕೆಗೆ ಸಹಿ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಿಂಧೆ, ಪ್ರತ್ಯೇಕ ಗುಂಪು ರಚನೆಗೆ ಸಂಬಂಧಿಸಿದ ಪತ್ರವನ್ನು ರಾಜಭವನಕ್ಕೆ ಶೀಘ್ರದಲ್ಲೇ ನೀಡುವ ಸಾಧ್ಯತೆಯಿದೆ.

ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ನಿನ್ನೆ ಸೂರತ್‌ಗೆ ತೆರಳಿದದ್ದರು. ಆದರೆ ಅವರೆಲ್ಲ ಈಗ ಗುವಾಹಟಿಯಲ್ಲಿದ್ದಾರೆ. ಇನ್ನೊಂದೆಡೆ, ರಾಜ್ಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ದೆಹಲಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ಬಿಜೆಪಿ ಶಾಸಕರಿಗೆ ಮುಂಬೈಗೆ ಬರುವಂತೆ ಆದೇಶ ನೀಡಲಾಗಿದೆ.

  • महाराष्ट्रातील राजकीय घडामोडींचा प्रवास विधान सभा बरखास्तीचया दिशेने..

    — Sanjay Raut (@rautsanjay61) June 22, 2022 " class="align-text-top noRightClick twitterSection" data=" ">

ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಸಂಜಯ್​ ರಾವುತ್​: ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಅಲ್ಲಿನ ವಿಧಾನಸಭೆಯನ್ನು ವಿಸರ್ಜನೆ ಮಾಡುವ ಬಗ್ಗೆ ಶಿವಸೇನೆಯ ಸಂಜಯ್ ರಾವುತ್​​ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತ್ತ ಏಕನಾಥ ಶಿಂದೆ ಅವರ ಬಂಡಾಯ ಯಶಸ್ವಿಯಾಗಲು 37 ಶಿವಸೇನೆ ಶಾಸಕರ ಅಗತ್ಯವಿದೆ. ಸೂರತ್‌ನಿಂದ ಬಂದ ವರದಿಗಳ ಪ್ರಕಾರ, 34 ಶಾಸಕರು ಶಿಂದೆ ಬಳಿ ಇದ್ದಾರೆ. ಈ ಪೈಕಿ 32 ಶಾಸಕರು ಶಿವಸೇನೆಯವರಾಗಿದ್ದಾರೆ. ಬಂಡಾಯ ಯಶಸ್ವಿಯಾಗಬೇಕಾದರೆ ಇನ್ನೂ ಐವರು ಶಾಸಕರು ಬೇಕು. ಆದರೆ ಶಿಂದೆ ಬಣ ತಮ್ಮ ಬಳಿ 40 ಶಾಸಕರಿದ್ದಾರೆ ಎಂದು ಹೇಳಿಕೊಂಡಿದೆ.

ಸೂರತ್‌ನ ಫೋಟೋ ಲೆಕ್ಕಾಚಾರ: ಸೂರತ್‌ನ ಫೋಟೋವನ್ನು ಆಧರಿಸಿ ಹೇಳುವುದಾದರೆ ರಾಜ್ಯ ಸರ್ಕಾರ ಬಿಕ್ಕಟ್ಟಿನಲ್ಲಿರುವುದು ದೃಢವಾಗಿದೆ. ಫೋಟೋ ಪ್ರಕಾರ, ಶಿಂಧೆ ಅವರ ಆಪ್ತ ಶಾಸಕರು ಹೊಸ ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆ. ಆದರೆ, ಆ ಫೋಟೋದಲ್ಲಿ ಶಿವಸೇನೆಯ 32 ಶಾಸಕರು ಮಾತ್ರ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಹೊರಬರಬೇಕಾದರೆ ಇನ್ನೂ 5 ಶಿವಸೇನೆ ಶಾಸಕರು ಬೇಕು. ಇನ್ನೊಂದು ಕಡೆ ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ ಎನ್ನಲಾಗಿದೆ.

ಕೋವಿಡ್​ನಿಂದ ಆಸ್ಪತ್ರೆ ಸೇರಿದ ಮಹಾ ರಾಜ್ಯಪಾಲರು: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೋವಿಡ್​ ದೃಢಪಟ್ಟಿದೆ.

80 ವರ್ಷದ ಗವರ್ನರ್ ಅವರನ್ನು ಚಿಕಿತ್ಸೆಗಾಗಿ ದಕ್ಷಿಣ ಮುಂಬೈನ ಸರ್ ಹೆಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.

  • I have been tested positive for COVID -19 with mild symptoms. However I have been admitted to a hospital as a precautionary measure.

    — Bhagat Singh Koshyari (@BSKoshyari) June 22, 2022 " class="align-text-top noRightClick twitterSection" data=" ">

ಟ್ವೀಟ್​ ಮಾಡಿದ ರಾಜ್ಯಪಾಲರು: ತಮಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕೇವಲ ಸೌಮ್ಯ ರೋಗಲಕ್ಷಣಗಳಿವೆ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಶ್ಯಾರಿ ಟ್ವೀಟ್‌ನಲ್ಲಿ ದೃಢಪಡಿಸಿದ್ದಾರೆ.

ಮಧ್ಯಾಹ್ನ ಸಚಿವ ಸಂಪುಟ ಸಭೆ: ಶಿವಸೇನೆಯಲ್ಲಿ ಭಿನ್ನಮತ ಉಂಟಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜಿಸುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಆದರೆ, ಸಂಪುಟ ಸಭೆಯ ಅಜೆಂಡಾ ಇನ್ನೂ ನಿರ್ಧಾರವಾಗಿಲ್ಲ.

ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆಗೂ ಕೋವಿಡ್​ ಪಾಸಿಟಿವ್​: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ಕೋವಿಡ್ ಪಾಸಿಟಿವ್​ ದೃಢಪಟ್ಟಿದೆ ಎಂದು ಕಾಂಗ್ರೆಸ್​​ನ ಹೊಸ ವೀಕ್ಷಕರಾಗಿ ನೇಮಕಗೊಂಡಿರುವ ಕಮಲ್​ನಾಥ ಹೇಳಿದ್ದಾರೆ. ಮೂಲಗಳ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹತ್ವದ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾ ಬಿಕ್ಕಟ್ಟು: ಸೂರತ್‌ ಹೋಟೆಲ್‌ನಿಂದ ಗುವಾಹಟಿಗೆ ಸ್ಥಳಾಂತರಗೊಂಡ ಶಿವಸೇನಾ ಶಾಸಕರು

Last Updated :Jun 22, 2022, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.