ಗಣಿತ ಪರೀಕ್ಷೆಗೆ ಹೆದರಿದ ವಿದ್ಯಾರ್ಥಿ.. ಶಾಲೆಗೆ ಬಾಂಬ್​ ಇಟ್ಟು ಉಡಾಯಿಸುವ ಬೆದರಿಕೆ ಹಾಕಿದ!

author img

By

Published : Sep 13, 2022, 7:13 PM IST

bomb-hoax-at-amritsar-school

ಗಣಿತ ಪರೀಕ್ಷೆಗೆ ಹೆದರಿದ ವಿದ್ಯಾರ್ಥಿಯೊಬ್ಬ ನಪಾಸಾಗುವ ಭಯದಲ್ಲಿ ಪರೀಕ್ಷೆಯನ್ನೇ ಮುಂದೂಡಿಸಲು ಪ್ಲಾನ್​ ಮಾಡಿ ಶಾಲೆಗೆ ಬಾಂಬ್​ ಬೆದರಿಕೆ ಹಾಕಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಚಂಡೀಗಢ: ಗಣಿತ ವಿಷಯ ಕೆಲ ಮಕ್ಕಳಿಗೆ ಕಬ್ಬಿಣದ ಕಡಲೆಯೇ ಸರಿ. ಲೆಕ್ಕದಲ್ಲಿ ವೀಕ್​ ಇರುವ ವಿದ್ಯಾರ್ಥಿಗಳು ಆ ವಿಷಯದಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಸರ್ಕಸ್​ ಮಾಡ್ತಾರೆ. ಅದೇ ರೀತಿ ಪಂಜಾಬ್​ ವಿದ್ಯಾರ್ಥಿಯೊಬ್ಬ ಗಣಿತ ಪರೀಕ್ಷೆಯನ್ನು ಮುಂದೂಡಿಸುವ ಸಲುವಾಗಿ ಶಾಲೆಯನ್ನು ಪರೀಕ್ಷೆ ದಿನ ಬಾಂಬ್​ ಇಟ್ಟು ಉಡಾಯಿಸುವುದಾಗಿ ಹುಸಿ ಕರೆ ಮಾಡಿ ಬೆದರಿಸಿದ ಘಟನೆ ನಡೆದಿದೆ.

ಅಮೃತಸರದ ಖಾಸಗಿ ಶಾಲೆಯಲ್ಲಿ ಸೆಪ್ಟೆಂಬರ್​ 16ಕ್ಕೆ ಗಣಿತ ಪರೀಕ್ಷೆ ನಿಗದಿ ಮಾಡಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳಿಬ್ಬರು ತಮ್ಮ ಅರಿವಿಗೂ ಮೀರಿದ ಯೋಜನೆಯನ್ನು ರೂಪಿಸಿದ್ದಾರೆ. ಅದೇನೆಂದರೆ, ಅಂದು ನಡೆಯುವ ಪರೀಕ್ಷೆಯನ್ನು ಮುಂದೂಡಬೇಕು. ಇಲ್ಲವಾದಲ್ಲಿ ಶಾಲೆಯನ್ನು ಬಾಂಬ್​ ಇಟ್ಟು ಉಡಾಯಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಕರೆ ಬಂದ ಸ್ಥಳವನ್ನು ಆಧರಿಸಿ ವಿಚಾರಿಸಿದಾಗ ಅದು ಆ ಶಾಲೆಯ ವಿದ್ಯಾರ್ಥಿಗಳಿಂದಲೇ ಬಂದ ಕರೆ ಎಂಬುದು ಗೊತ್ತಾಗಿದೆ. ವಿದ್ಯಾರ್ಥಿಗಳು ತಂದೆಯ ಮೊಬೈಲ್ ಫೋನ್‌ನಿಂದ ಬಾಂಬ್ ಬೆದರಿಕೆ ಕರೆ ಹಾಕಿದ್ದಾರೆ. ಗಣಿತ ಪರೀಕ್ಷೆಯನ್ನು ಮುಂದೂಡಿಸುವ ಸಲುವಾಗಿ ಈ ತಂತ್ರವನ್ನು ಹೆಣೆದಿದ್ದಾರೆ. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರವೂ ಇದೇ ರೀತಿಯ ಬಾಂಬ್​ ಬೆದರಿಕೆ ಕರೆ ಮಾಡಿದ ಕಾರಣಕ್ಕಾಗಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ವಾರದೊಳಗೆ ಎರಡನೇ ಸಲ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹುಸಿ ಬಾಂಬ್​ ಕರೆ ಮಾಡಿ ಬೆದರಿಸಿದ್ದಾರೆ.

ಓದಿ: ಹೈಕೋರ್ಟ್​ ಅಂಗಳಕ್ಕೆ ಜ್ಞಾನವಾಪಿ ಕೇಸ್: ಹಿಂದೂ, ಮುಸ್ಲಿಂ ಪಕ್ಷಗಾರರಿಂದ ಅರ್ಜಿ ಸಲ್ಲಿಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.