ಗುಜರಾತ್​ ಗಲಭೆಯ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ: 'ಅಪಪ್ರಚಾರದ ಉದ್ದೇಶ'- ಭಾರತ ಖಂಡನೆ

author img

By

Published : Jan 19, 2023, 10:38 PM IST

Updated : Jan 20, 2023, 6:47 AM IST

bbcs-docu

ಗುಜರಾತ್​ ಗಲಭೆ ಬಗ್ಗೆ ಬಿಬಿಸಿ ಡಾಕ್ಯುಮೆಂಟರಿ- ತಪ್ಪು ಮಾಹಿತಿಯ ಸಾಕ್ಷ್ಯಚಿತ್ರಕ್ಕೆ ಭಾರತ ಖಂಡನೆ

ನವದೆಹಲಿ: 2002 ರಲ್ಲಿ ನಡೆದ ಗುಜರಾತ್‌ನಲ್ಲಿ ನಡೆದ​ ಗೋಧ್ರೋತ್ತರ ಗಲಭೆಯ ಕುರಿತಾಗಿ ವಿದೇಶಿ ಮಾಧ್ಯಮ ಬಿಬಿಸಿ ಭಿತ್ತರಿಸಿದ ಸಾಕ್ಷ್ಯಚಿತ್ರ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪೂರ್ವಗ್ರಹಪೀಡಿತ ವಿಷಯಗಳನ್ನು ವಿಡಿಯೋ ಸರಣಿಯಲ್ಲಿ ಹಂಚಿಕೊಳ್ಳಲಾಗಿದೆ. 'ಇದೊಂದು ಅಪಪ್ರಚಾರ ಹಬ್ಬಿಸುವ ಸರಣಿ' ಎಂದು ಭಾರತ ಖಂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ, ಬಿಬಿಸಿ ಪ್ರಸಾರ ಮಾಡಿದ ಈ ಸಾಕ್ಷ್ಯಚಿತ್ರ "ಪೂರ್ವಗ್ರಹಪೀಡಿತ ಮತ್ತು ಅಪಖ್ಯಾತಿ ಉಂಟು ಮಾಡಲು ಬಯಸಿದ ಪ್ರಚಾರದ ತುಣುಕು" ಎಂದು ಹೇಳಿದರು. ವಿಡಿಯೋ ದೋಷಪೂರಿತ ನಿರೂಪಣೆಯಿಂದ ಕೂಡಿದೆ. ಇದನ್ನು ಭಾರತದಲ್ಲಿ ಭಿತ್ತರಿಸಲಾಗಿಲ್ಲ. ಸಾಕ್ಷ್ಯಚಿತ್ರದಲ್ಲಿ ಉದ್ದೇಶಿತ ಚಿಂತನೆಗಳು ಭಿತ್ತರವಾಗಿವೆ. ಅದರ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ. ಪಕ್ಷಪಾತ, ವಸ್ತುನಿಷ್ಠತೆಯ ಕೊರತೆ ವಿಡಿಯೋದ ಸಾರ ಎಂದು ಅವರು ಟೀಕಿಸಿದರು.

ಸಾಕ್ಷ್ಯಚಿತ್ರದ ಉದ್ದೇಶ ಮತ್ತು ಅದರ ಹಿಂದಿನ ಕಾರ್ಯಸೂಚಿ ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಂತಹ ಯಾವುದೇ ಪ್ರಯತ್ನಗಳನ್ನು ನಾವು ಸ್ವೀಕರಿಸುವುದಿಲ್ಲ. 20 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಈಗ ನಿರೂಪಿಸುವ ಉದ್ದೇಶವೇ ಸರಿ ಇಲ್ಲ. ಬ್ರಿಟನ್​ ಸರ್ಕಾರದ ಮಾಜಿ ಕಾರ್ಯದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿದ ಬಾಗ್ಚಿ, ಅಂದಿನ ಬಾಲಿಶ ಹೇಳಿಕೆಗಳನ್ನು ವಿಡಿಯೋದಲ್ಲಿ ಪ್ರಸಾರ ಮಾಡಲಾಗಿದೆ. ಅದನ್ನು ಹೇಗೆ ಕಾನೂನು ಬದ್ಧಗೊಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರದಲ್ಲೇನಿದೆ?: ದಿ ಮೋದಿ ಕ್ವೆಶ್ಶನ್ ಎಂಬ ಸಾಕ್ಷ್ಯಚಿತ್ರ ಸರಣಿಯನ್ನು ಬಿಬಿಸಿ ಬಿಡುಗಡೆ ಮಾಡಿದೆ. ಮೊದಲ ಸಂಚಿಕೆ ಮಂಗಳವಾರ ಪ್ರಸಾರವಾಗಿತ್ತು. ಸರಣಿಯ ಎರಡನೇ ಭಾಗವನ್ನು ಜನವರಿ 24 ರಂದು ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಮೊದಲ ವಿಡಿಯೋ ಪ್ರಸಾರದ ಬಳಿಕ ತಕ್ಷಣವೇ ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಈ ವಿಡಿಯೋ ಸರಣಿಯು 2002 ರಲ್ಲಿ ನಡೆದ ಗುಜರಾತ್ ಗೋಧ್ರೋತ್ತರ ಹಿಂಸಾಚಾರದ ಬಗೆಗಿನ ಕಥಾನಕ ಹೊಂದಿದೆ.

ಬ್ರಿಟನ್​ ಪ್ರಧಾನಿ ಸುನಕ್ ಪ್ರತಿಕ್ರಿಯೆ: ಬಿಬಿಸಿ ಸಾಕ್ಷ್ಯಚಿತ್ರ ಸರಣಿಯಲ್ಲಿ ಭಿತ್ತರವಾದ ಘಟನೆಯಲ್ಲಿ ಒಬ್ಬ ವ್ಯಕ್ತಿಯ ಪಾತ್ರವನ್ನು ಒಪ್ಪುವ ಕುರಿತು ನಮ್ಮಲ್ಲಿ ನಿಖರತೆ ಇಲ್ಲ. ಅದೇ ರೀತಿ ಧರ್ಮಕ್ಕೆ ಸಂಬಂಧಿಸಿದ ಶೋಷಣೆಯನ್ನೂ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ ಮೂಲದ ಬ್ರಿಟನ್ ಸಂಸದ ಇಮ್ರಾನ್ ಹುಸೇನ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ಇದನ್ನೂ ಓದಿ: ಅವಿವಾಹಿತ ಯುವತಿ 29 ವಾರಗಳ ಗರ್ಭಪಾತ ಸುರಕ್ಷಿತವಾಗಿ ನಡೆಸಬಹುದೇ?: ವರದಿ ನೀಡುವಂತೆ ಏಮ್ಸ್​ಗೆ ಸುಪ್ರೀಂ ನಿರ್ದೇಶನ

Last Updated :Jan 20, 2023, 6:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.