ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿಗಳಾದವರು ಯಾರ‍್ಯಾರು?

author img

By

Published : Jun 22, 2022, 10:24 AM IST

Updated : Jun 22, 2022, 10:55 AM IST

Presidential ELECTION 2022  DRAUPADI MURMU  DRAUPADI MURMU NDA presidential CANDIDATE  governors also become president of india  Countrys first tribal woman president  15th President of the country  ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಆಯ್ಕೆ  ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಎನ್​ಡಿಎ  15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು  ರಾಷ್ಟ್ರಪತಿ ಆಯ್ಕೆ ಸುದ್ದಿ

ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ದೇಶದಲ್ಲಿ ಮೊದಲು ರಾಜ್ಯಪಾಲರಾಗಿ ಆಮೇಲೆ ರಾಷ್ಟ್ರಪತಿಗಳಾಗಿ ಆಯ್ಕೆ ಆದವರು ಎಷ್ಟು ಎಂಬುದನ್ನು ನೋಡುವುದಾದರೆ,

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) 2022 ರ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಪರವಾಗಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು 2022 ರ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಎನ್‌ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕಿಳಿಯಲಿದ್ದಾರೆ.

ದ್ರೌಪದಿ ಮುರ್ಮು ಅವರ ಗೆಲುವು ಖಚಿತ ಎಂದು ನಂಬಲಾಗಿದೆ. ಅವರು ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆ ಮತ್ತು ದೇಶದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ದೇಶದಲ್ಲಿ ಈ ಹಿಂದೆ ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದ ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರು ಹಲವರಿದ್ದಾರೆ.

ವಿವಿ ಗಿರಿ (10 ಆಗಸ್ಟ್ 1894 - 24 ಜೂನ್ 1980) : ವಿವಿ ಗಿರಿ ಭಾರತದ ನಾಲ್ಕನೇ ರಾಷ್ಟ್ರಪತಿ. ಅವರು 10 ಆಗಸ್ಟ್ 1894 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಬ್ರಹ್ಮಪುರದಲ್ಲಿ ಜನಿಸಿದರು. ಇದೀಗ ಒಡಿಶಾದ ಭಾಗವಾಗಿದೆ. ಅವರ ತಂದೆಯ ಹೆಸರು ಶ್ರೀ ಜೋಗಿ ಪಂತುಲು ಮತ್ತು ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ವಿವಿ ಗಿರಿ ಅವರು 1937-39 ಮತ್ತು 1946-47 ರ ನಡುವೆ ಅವರು ಮದ್ರಾಸ್ ಸರ್ಕಾರದಲ್ಲಿ ಕಾರ್ಮಿಕ, ಕೈಗಾರಿಕೆ, ಸಹಕಾರ ಮತ್ತು ವಾಣಿಜ್ಯ ಇಲಾಖೆಗಳಲ್ಲಿ ಸಚಿವರಾಗಿದ್ದರು.

Presidential ELECTION 2022  DRAUPADI MURMU  DRAUPADI MURMU NDA presidential CANDIDATE  governors also become president of india  Countrys first tribal woman president  15th President of the country  ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಆಯ್ಕೆ  ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಎನ್​ಡಿಎ  15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು  ರಾಷ್ಟ್ರಪತಿ ಆಯ್ಕೆ ಸುದ್ದಿ
ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿಗಳಾದವರು ಎಷ್ಟು

ಗಿರಿ ಅವರು 1 ಜುಲೈ 1960 ರಂದು ಕೇರಳದ ಎರಡನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು (1960–1965) 5 ವರ್ಷಗಳ ಕಾಲ ಕೇರಳದ ರಾಜ್ಯಪಾಲರಾಗಿದ್ದರು. ಅದರ ನಂತರ ಭಾರತದ ಮೂರನೇ ಉಪರಾಷ್ಟ್ರಪತಿಯಾಗಿ, ಅವರು 13 ಮೇ 1967 ರಂದು ಪ್ರಮಾಣವಚನ ಸ್ವೀಕರಿಸಿದರು. ಅವರು 3 ಮೇ 1969 ರವರೆಗೆ ದೇಶದ ಉಪರಾಷ್ಟ್ರಪತಿಯಾಗಿದ್ದರು. 1969 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ಭಾರತದ ಮೊದಲ ಸ್ವತಂತ್ರ ಮತ್ತು ದೇಶದ ನಾಲ್ಕನೇ ರಾಷ್ಟ್ರಪತಿ ಆಯ್ಕೆ ಆಗಿದ್ದರು.

ಶಂಕರ್ ದಯಾಳ್ ಶರ್ಮಾ (19 ಆಗಸ್ಟ್ 1918 - 26 ಡಿಸೆಂಬರ್ 1999): ಶಂಕರ್ ದಯಾಳ್ ಶರ್ಮಾ ಅವರು ದೇಶದ 9 ನೇ ರಾಷ್ಟ್ರಪತಿಯಾಗಿದ್ದರು. ಅವರು 19 ಆಗಸ್ಟ್ 1918 ರಂದು ಜನಿಸಿದರು. ಅವರು 26 ಡಿಸೆಂಬರ್ 1999 ರಂದು ನಿಧನರಾದರು. ಅವರು ಭಾರತದ 8ನೇ ಉಪರಾಷ್ಟ್ರಪತಿಯಾಗಿದ್ದರು. ಅವರು ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ಬಳಿಯ ಅಮೋನ್ ಗ್ರಾಮದಲ್ಲಿ ಜನಿಸಿದರು. ಶರ್ಮಾ ಅವರು 29 ಆಗಸ್ಟ್ 1984 ರಿಂದ 26 ನವೆಂಬರ್ 1985 ರವರೆಗೆ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಇದಕ್ಕೂ ಮೊದಲು, ಅವರು 26 ನವೆಂಬರ್ 1985 ರಿಂದ 2 ಏಪ್ರಿಲ್ 1986 ರವರೆಗೆ ಪಂಜಾಬ್ ರಾಜ್ಯಪಾಲರಾಗಿದ್ದರು. ಅವರು 1952 ರಿಂದ 1956 ರವರೆಗೆ ಭೋಪಾಲ್ (ಈಗ ಮಧ್ಯಪ್ರದೇಶ) ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ, ಕಾನೂನು ಇತ್ಯಾದಿ ಇಲಾಖೆಗಳಲ್ಲಿ ಸಾಕಷ್ಟು ಕೆಲಸ ಮಾಡಿದರು. ಅವರು 1974 ರಿಂದ 1977 ರವರೆಗೆ ದೇಶದ ಕೇಂದ್ರ ಸಂವಹನ ಸಚಿವರಾಗಿದ್ದರು. 25 ಜುಲೈ 1992 ರಿಂದ 25 ಜುಲೈ 1997 ರವರೆಗೆ ದೇಶದ ರಾಷ್ಟ್ರಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು.

Presidential ELECTION 2022  DRAUPADI MURMU  DRAUPADI MURMU NDA presidential CANDIDATE  governors also become president of india  Countrys first tribal woman president  15th President of the country  ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಆಯ್ಕೆ  ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಎನ್​ಡಿಎ  15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು  ರಾಷ್ಟ್ರಪತಿ ಆಯ್ಕೆ ಸುದ್ದಿ
ರಾಷ್ಟ್ರಪತಿಗಳಾಗಿ ಪ್ರಮಾಣ ಸ್ವೀಕರಿಸುತ್ತಿರುವ ಶಂಕರ್​ ದಯಾಳ್​ ಶರ್ಮಾ

ಓದಿ: ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಎನ್​ಡಿಎ ಅಭ್ಯರ್ಥಿ

ಪ್ರತಿಭಾ ದೇವಿ ಸಿಂಗ್ ಪಾಟೀಲ್: ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ದೇಶದ 12 ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು. ಅವರು 19 ಡಿಸೆಂಬರ್ 1934 ರಂದು ಜನಿಸಿದ ಇವರು, 25 ಜುಲೈ 2007 ರಿಂದ ಜುಲೈ 2012 ರವರೆಗೆ ದೇಶದ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಭಾರತದ ರಾಷ್ಟ್ರಪತಿಯಾಗುವ ಮೊದಲು, ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ರಾಜಸ್ಥಾನದ 17 ನೇ ರಾಜ್ಯಪಾಲರಾಗಿದ್ದರು.

ಅವರು 8 ನವೆಂಬರ್ 2004 ರಿಂದ 23 ಜೂನ್ 2007 ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಭಾ ಸಿಂಗ್ ದೇವಿ ಪಾಟೀಲ್ ಅವರು 27 ನೇ ವಯಸ್ಸಿನಲ್ಲಿ ಜಲಗಾಂವ್ ವಿಧಾನಸಭಾ ಕ್ಷೇತ್ರದಿಂದ 1962 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1985ರಲ್ಲಿ ರಾಜ್ಯಸಭಾ ಸದಸ್ಯೆಯಾಗುವವರೆಗೂ ಶಾಸಕರಾಗಿದ್ದರು.

ಅವರು 1991 ರಿಂದ 1996 ರವರೆಗೆ ಅಮರಾವತಿಯಿಂದ ಲೋಕಸಭಾ ಸದಸ್ಯರಾಗಿದ್ದರು. ಎರಡು ದಶಕಗಳಿಗೂ ಹೆಚ್ಚು ಕಾಲದ ತನ್ನ ರಾಜಕೀಯ ಜೀವನದಲ್ಲಿ, ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ರಾಮ್ ನಾಥ್ ಕೋವಿಂದ್: ರಾಮ್ ನಾಥ್ ಕೋವಿಂದ್ ಅವರು ದೇಶದ 14 ನೇ ರಾಷ್ಟ್ರಪತಿಯಾಗಿದ್ದಾರೆ. ಅವರು 1ನೇ ಅಕ್ಟೋಬರ್ 1945 ರಂದು ಜನಿಸಿದರು. ಅವರು 25 ಜುಲೈ 2017 ರಂದು ದೇಶದ 14 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಅವಧಿಯು ಜುಲೈ 25, 2022 ರಂದು ಕೊನೆಗೊಳ್ಳುತ್ತದೆ. ಕೋವಿಂದ್​ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು.

Presidential ELECTION 2022  DRAUPADI MURMU  DRAUPADI MURMU NDA presidential CANDIDATE  governors also become president of india  Countrys first tribal woman president  15th President of the country  ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿ ಆಯ್ಕೆ  ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಎನ್​ಡಿಎ  15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ದ್ರೌಪದಿ ಮುರ್ಮು  ರಾಷ್ಟ್ರಪತಿ ಆಯ್ಕೆ ಸುದ್ದಿ
ರಾಜ್ಯಪಾಲರಾಗಿ ಕಾರ್ಯ ಸೇವೆ ಸಲ್ಲಿಸಿದ ಬಳಿಕ ರಾಷ್ಟ್ರಪತಿಗಳಾದವರೂ ಎಷ್ಟು

ಅವರು 16 ಆಗಸ್ಟ್ 2015 ರಿಂದ 20 ಜೂನ್ 2017 ರವರೆಗೆ ಬಿಹಾರದ 26 ನೇ ರಾಜ್ಯಪಾಲರಾಗಿದ್ದರು. ಉತ್ತರ ಪ್ರದೇಶದಿಂದ ಭಾರತದ ರಾಷ್ಟ್ರಪತಿಯಾದ ಮೊದಲ ವ್ಯಕ್ತಿ. ಇದಕ್ಕೂ ಮೊದಲು, 3 ಏಪ್ರಿಲ್ 1994 ರಿಂದ ಏಪ್ರಿಲ್ 2, 2006 ರವರೆಗೆ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. ರಾಜಕೀಯಕ್ಕೆ ಸೇರುವ ಮುನ್ನ ಅವರು ದೆಹಲಿ ಹೈಕೋರ್ಟ್ ಮತ್ತು ದೇಶದ ಸುಪ್ರೀಂ ಕೋರ್ಟ್‌ನಲ್ಲಿ 16 ವರ್ಷಗಳ ಕಾಲ ವಕೀಲಿ ವೃತ್ತಿ ಮಾಡಿದ್ದಾರೆ.

Last Updated :Jun 22, 2022, 10:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.