ಐದು ದಿನದಲ್ಲಿ 3.20 ರೂ. ಏರಿಕೆ ಕಂಡ ಪೆಟ್ರೋಲ್​ - ಡೀಸೆಲ್​: ಇಂದೂ ಗ್ರಾಹಕನ ಜೇಬಿಗೆ ಕತ್ತರಿ

author img

By

Published : Mar 26, 2022, 8:01 AM IST

Petrol diesel prices hiked again

ನಾಲ್ಕೂವರೆ ತಿಂಗಳ ಬಳಿಕ ಅಂದರೆ ಮಾರ್ಚ್ 22 ರಂದು ಇಂಧನ ಕಂಪನಿಗಳು ಮೊದಲ ಬಾರಿಗೆ 80 ಪೈಸೆ ಏರಿಸುವ ಮೂಲಕ ದರ ಪರಿಷ್ಕರಣೆ ಮಾಡಿದ್ದವು. ಜೂನ್ 2017ರಿಂದ ದೈನಂದಿನ ಬೆಲೆ ಪರಿಷ್ಕರಣೆ ಪ್ರಾರಂಭವಾಗಿದೆ. ಒಟ್ಟಾರೆ ಐದು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 3.20 ರೂ. ಏರಿಕೆಯಾಗಿದೆ. ಉಕ್ರೇನ್​​​ - ರಷ್ಯಾ ನಡುವಣ ಯುದ್ಧದಿಂದಾಗಿ ಪೆಟ್ರೋಲ್​ - ಡೀಸೆಲ್​​ ಬೆಲೆ ಗಗನಕ್ಕೇರಿದೆ.

ನವದೆಹಲಿ: ಐದು ರಾಜ್ಯಗಳ ಎಲೆಕ್ಷನ್​ ಮುಗಿದ ತಕ್ಷಣವೇ ಪೆಟ್ರೋಲ್​ - ಡೀಸೆಲ್​ ಬೆಲೆ ಏರಿಕೆಯಾಗುತ್ತಿದೆ. ಸತತ ನಾಲ್ಕುದಿನಗಳಿಂದ ಈ ಏರಿಕೆ ಸಾಗಿದೆ. 100 ಆಸುಪಾಸಿನಲ್ಲಿದ್ದ ಬೆಲೆ 100ನ್ನೂ ದಾಟಿ ಮುನ್ನುಗ್ಗುತ್ತಿದ್ದು, ಗ್ರಾಹಕರ ಜೇಬನ್ನು ಖಾಲಿ ಮಾಡುವತ್ತ ಸಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.

ತೈಲ ಸಂಸ್ಥೆಗಳು ತಮ್ಮ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಐದು ದಿನಗಳಲ್ಲಿ ಇದು ನಾಲ್ಕನೇ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 97.81 ರೂ.ಗೆ ಹೋಲಿಸಿದರೆ ಈಗ 98.61 ರೂ. ಗೆ ಏರಿಕೆ ಕಂಡಿದೆ. ನಾಲ್ಕೂವರೆ ತಿಂಗಳ ಬಳಿಕ ಅಂದರೆ ಮಾರ್ಚ್ 22 ರಂದು ಇಂಧನ ಕಂಪನಿಗಳು ಮೊದಲ ಬಾರಿಗೆ 80 ಪೈಸೆ ಏರಿಸುವ ಮೂಲಕ ದರ ಪರಿಷ್ಕರಣೆ ಮಾಡಿದ್ದವು. ಜೂನ್ 2017ರಿಂದ ದೈನಂದಿನ ಬೆಲೆ ಪರಿಷ್ಕರಣೆ ಪ್ರಾರಂಭವಾಗಿದೆ. ಒಟ್ಟಾರೆ ಐದು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 3.20 ರೂ. ಏರಿಕೆಯಾಗಿದೆ. ಉಕ್ರೇನ್​​​ - ರಷ್ಯಾ ನಡುವಣ ಯುದ್ಧದಿಂದಾಗಿ ಪೆಟ್ರೋಲ್​ - ಡೀಸೆಲ್​​ ಬೆಲೆ ಗಗನಕ್ಕೇರಿದೆ.

ಮಾರ್ಚ್ 10 ರಂದು ವಿಧಾನಸಭೆ ಚುನಾವಣೆ ಮುಗಿದ ನಂತರ ದರ ಪರಿಷ್ಕರಣೆ ನಿರೀಕ್ಷಿಸಲಾಗಿತ್ತು. ಆದರೆ ಎಲ್ಲ ಕಡೆ ಇನ್ನೂ ಸರ್ಕಾರಗಳು ರಚನೆ ಆಗದೇ ಇರುವುದರಿಂದ ತಡೆ ಹಿಡಿಯಲಾಗಿತ್ತು. ನವೆಂಬರ್​ ಆರಂಭದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್​​ವೊಂದಕ್ಕೆ 82 ಡಾಲರ್​ ಇದ್ದದ್ದು ಈಗ 117 ಡಾಲರ್​​ಗೆ ಏರಿಕೆಯಾಗಿದೆ. ನಡುವೆ 140 ಡಾಲರ್​ವರೆಗೂ ಕಚ್ಚಾ ತೈಲ ಬೆಲೆ ಏರಿಕೆ ಕಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸುಮಾರು Rs 19,000 ಕೋಟಿ ಆದಾಯವನ್ನು ಕಳೆದುಕೊಂಡಿವೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ತಿಳಿಸಿದೆ.

ಇದನ್ನು ಓದಿ:ರಫ್ತು ಸನ್ನದ್ಧತೆ ಶ್ರೇಯಾಂಕ ಬಿಡುಗಡೆ: ಕರ್ನಾಟಕಕ್ಕೆ 3ನೇ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.