ಬೆಂಗಳೂರು, ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

author img

By

Published : Jun 24, 2022, 10:20 AM IST

Updated : Jun 24, 2022, 10:27 AM IST

fuel price today

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ...

ಬೆಂಗಳೂರು/ನವದೆಹಲಿ: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ತೈಲ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

ಇಂದಿನ ದರಗಳ ಬಗ್ಗೆ ತಿಳಿಯೋದಾದರೆ: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ.ಗೆ ಇದ್ದು, ಡೀಸೆಲ್ ಬೆಲೆ 89.62 ಆಗಿದೆ. ಮುಂಬೈನಲ್ಲಿ ಇತ್ತೀಚಿನ ಅಬಕಾರಿ ಸುಂಕ ಕಡಿತದ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 111.35 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 97.28 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 106.03 ರೂ. ಆಗಿದ್ದರೆ, ಡೀಸೆಲ್ ಬೆಲೆ 92.76 ರೂ. ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 102.63 ರೂ. ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು101.69 ರೂ.87.91 ರೂ.
ಹುಬ್ಬಳ್ಳಿ101.65 ರೂ.87.65 ರೂ
ಶಿವಮೊಗ್ಗ102.26 ರೂ.88.45 ರೂ.
ದಾವಣಗೆರೆ103.60 ರೂ.89.50 ರೂ.
ಮೈಸೂರು101.44 ರೂ.87.43 ರೂ.
ಮಂಗಳೂರು101.77 ರೂ.87.70 ರೂ.

ಇದನ್ನೂ ಓದಿ: ರಾಜ್ಯದಲ್ಲಿ ಇವತ್ತು ಪೆಟ್ರೋಲ್, ಡೀಸೆಲ್ ದರ ಇಷ್ಟಿದೆ!

Last Updated :Jun 24, 2022, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.