ಎಡಕ್ಕರ ಮಾವೋವಾದಿ ಪ್ರಕರಣ: ಕರ್ನಾಟಕ, ಕೇರಳ, ತಮಿಳುನಾಡಿನ 20 ಸ್ಥಳಗಳಲ್ಲಿ NIA ಶೋಧ

author img

By

Published : Oct 12, 2021, 12:37 PM IST

NIA

ಮಾವೋವಾದಿ ದಿನಾಚರಣೆ ಆಚರಿಸಲು ಸಂಚು ರೂಪಿಸಿದ್ದ ಪ್ರಕರಣ ಸಂಬಂಧ ಎನ್​ಐಎ(NIA) ಕೇರಳ, ಕರ್ನಾಟಕ, ತಮಿಳುನಾಡು ಸೇರಿ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ನವದೆಹಲಿ: ಎಡಕ್ಕರ ಮಾವೋವಾದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ-NIA) ಕೇರಳ, ಕರ್ನಾಟಕ, ತಮಿಳುನಾಡಿನ 20 ಸ್ಥಳಗಳಲ್ಲಿ ಚುರುಕಿನ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

2016 ರ ಸೆಪ್ಟೆಂಬರ್​ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ) ಕೇರಳದ ನಿಲಂಬೂರು ಅರಣ್ಯ ಪ್ರದೇಶದಲ್ಲಿ ಮಾವೋವಾದಿ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸಿತ್ತು. ಅಲ್ಲದೇ, ನಕ್ಸಲರು ತರಬೇತಿ ಶಿಬಿರ, ಶಸ್ತ್ರಾಸ್ತ್ರ ತರಬೇತಿ, ಧ್ವಜಾರೋಹಣ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಇಂದು ಎನ್​ಐಎ ದಾಳಿ ನಡೆಸಿ ಶೋಧ ನಡೆಸುತ್ತಿದೆ.

ಎರಡು ವರ್ಷಗಳ ಹಿಂದೆ ಬಂಧಿಸಿದ್ದವರ ಮನೆ ಮೇಲೂ ಎನ್​ಐಎ ದಾಳಿ

ಎರಡು ವರ್ಷಗಳ ಹಿಂದೆ ಮಾವೋವಾದಿಗಳಿಗೆ ಬೆಂಬಲ ನೀಡಿದ ಆರೋಪದಡಿ ಕೊಯಮತ್ತೂರಿನ ಪುಲಿಯಕುಲಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಡಾಕ್ಟರ್​ ದಿನೇಶ್ ಹಾಗೂ ಡ್ಯಾನಿಶ್ ಎಂಬುವರನ್ನು ಕೇರಳ ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆ ಇಂದು ಎನ್​ಐಎ ಬಂಧಿತರ ನಿವಾಸದಲ್ಲಿ ಶೋಧ ನಡೆಸುತ್ತಿದೆ. ಜತೆಗೆ ಪೊಲ್ಲಾಚಿಯಲ್ಲಿರುವ ಸಂತೋಷ್​ ಎಂಬುವರ ನಿವಾಸದ ಮೇಲೂ ರಾಷ್ಟ್ರೀಯ ತನಿಖಾ ದಳ ಶೋಧ ನಡೆಸುತ್ತಿದೆ. ಆದರೆ, ಅವರನ್ನು ಇನ್ನೂ ಬಂಧಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.