ಬೆಂಗಳೂರು ಬಳಿ ರಸ್ತೆ ಅಪಘಾತ.. 3 ದಿನದ ಹಿಂದೆ ಮದುವೆ, ವರ ಸಾವು, ವಧು ಸ್ಥಿತಿ ಗಂಭೀರ!

author img

By

Published : Nov 25, 2021, 10:13 AM IST

Newly married groom died, Groom died in road accident, Bengaluru road accident, Horrific accident in Bangalore, ವರ ಸಾವು, ಭೀಕರ ರಸ್ತೆ ಅಪಘಾತದಲ್ಲಿ ವರ ಸಾವು, ಬೆಂಗಳೂರು ರಸ್ತೆ ಅಪಘಾತ, ಬೆಂಗಳೂರು ಭೀಕರ ರಸ್ತೆ ಅಪಘಾತ,

ಬೆಂಗಳೂರು ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ 3 ದಿನದ ಹಿಂದೆ ಮದುವೆಯಾಗಿದ್ದ ವರ ಸಾವನ್ನಪ್ಪಿದ್ದು, ವಧು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್​: ಅವರಿಬ್ಬರು ನೂರಾರು ಕನಸುಗಳನ್ನು ಕಟ್ಟಿಕೊಂಡು ಮೂರ್ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದರು. ಆದರೆ ವಿಧಿ ಬಯಸಿದ್ದೇ ಬೇರೆ ಅನ್ನಿಸುತ್ತೆ. ಮದುವೆಯಾಗಿ ಮೂರು ದಿನಗಳ ಬಳಿಕ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ವರ ಸಾವನ್ನಪ್ಪಿದ್ದು, ವಧು ಸ್ಥಿತಿ ಚಿಂತಾಜನಕವಾಗಿದೆ.

Newly married groom died, Groom died in road accident, Bengaluru road accident, Horrific accident in Bangalore, ವರ ಸಾವು, ಭೀಕರ ರಸ್ತೆ ಅಪಘಾತದಲ್ಲಿ ವರ ಸಾವು, ಬೆಂಗಳೂರು ರಸ್ತೆ ಅಪಘಾತ, ಬೆಂಗಳೂರು ಭೀಕರ ರಸ್ತೆ ಅಪಘಾತ,
ಬೆಂಗಳೂರು ಬಳಿ ರಸ್ತೆ ಅಪಘಾತ

ಪೊಲೀಸ್​ ಪ್ರಕಾರ: ಹೈದರಾಬಾದ್​ನ ಶೇರಿಲಿಂಗಂಪಲ್ಲಿ ಪಾಪಿರೆಡ್ಡಿ ನಿವಾಸಿ ಶ್ರೀನಿವಾಸ್​ ಮತ್ತು ತಮಿಳುನಾಡಿನ ಚೆನ್ನೈ ಯುವತಿ ಜೊತೆ ಇದೇ ತಿಂಗಳು 21 ರಂದು ತಿರುಪತಿಯಲ್ಲಿ ಮದುವೆಯಾಗಿತ್ತು. ಮದುವೆ ಮುಗಿಸಿಕೊಂಡು ವಧು - ವರ ಸೇರಿದಂತೆ ಕುಟುಂಬಸ್ಥರು, ಬಂಧು ಬಳಗದವರು ಹೈದರಾಬಾದ್​ಗೆ ಹಿಂದಿರುಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಓದಿ: ಗ್ರಾಹಕರ ಜೇಬಿಗೆ ಕತ್ತರಿ: ಇಂದೂ ಸಹ ಗಗನಕ್ಕೇರಿದ ತರಕಾರಿ ಬೆಲೆ

ಮದುವೆಯಾಗಿ ಮೂರು ದಿನಗಳು ಕಳೆದಿವೆ. ವರ ಶ್ರೀನಿವಾಸ್​ ತನ್ನ ಹೆಂಡ್ತಿಯನ್ನು ಕರೆದುಕೊಂಡು ಆಕೆಯ ಸ್ವಸ್ಥಳ ಚೆನ್ನೈಗೆ ಕಾರಿನ ಮೂಲಕ ತೆರಳಿದ್ದಾರೆ. ಬೆಂಗಳೂರು ಸಮೀಪ ಕಾರು ಅಪಘಾತಕ್ಕಿಡಾಗಿದ್ದು, ವರ ಶ್ರೀನಿವಾಸ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ವಧುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಧುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Newly married groom died, Groom died in road accident, Bengaluru road accident, Horrific accident in Bangalore, ವರ ಸಾವು, ಭೀಕರ ರಸ್ತೆ ಅಪಘಾತದಲ್ಲಿ ವರ ಸಾವು, ಬೆಂಗಳೂರು ರಸ್ತೆ ಅಪಘಾತ, ಬೆಂಗಳೂರು ಭೀಕರ ರಸ್ತೆ ಅಪಘಾತ,
ವರ ಶ್ರೀನಿವಾಸ್​

ಈ ಸುದ್ದಿ ತಿಳಿದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಶ್ರೀನಿವಾಸ್​ನ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: IND vs NZ: ಕಿವೀಸ್​ ವಿರುದ್ಧ ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.