74ನೇ ಗಣರಾಜ್ಯೋತ್ಸವ ಪಥಸಂಚಲನ ಕವಾಯತ್​ಗೆ ಎನ್​​ಸಿಸಿ 148 ಮಹಿಳಾ ಕೆಡೆಟ್​ಗಳು....

author img

By

Published : Jan 24, 2023, 8:59 PM IST

NCC Women Cadets

ಭಾರತದ 74ನೇ ಗಣರಾಜ್ಯೋತ್ಸವ ಆಚರಣೆ- ಗಣರಾಜ್ಯೋತ್ಸವ ಕವಾಯತ್​​ಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ಯ 148 ಮಹಿಳಾ ಕೆಡೆಟ್ ಆಯ್ಕೆ- ಈ ಕುರಿತು ಹೆಮ್ಮೆಯ ಮಾತುಗಳನ್ನಾಡಿರುವ ಮಹಿಳಾ ಕೆಡೆಟ್​ಗಳು.

ನವದೆಹಲಿ: ಭಾರತದ 74ನೇ ಗಣರಾಜ್ಯೋತ್ಸವ ಆಚರಣೆಗೆ ಎರಡೇ ದಿನಗಳು ಉಳಿದಿದ್ದು, ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಗಣರಾಜ್ಯೋತ್ಸವ ಪರೇಡ್​ಗೆ ಸಿದ್ಧತೆ ಭರದಿಂದ ಸಾಗಿದೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ನ 148 ಮಹಿಳಾ ಕೆಡೆಟ್​ಗಳು ಕವಾಯತು ಮಾಡಲು ಆಯ್ಕೆಗೊಂಡಿದ್ದಾರೆ. ಕೆಡೆಟ್​ಗಳು ಹುರುಪು ಹಾಗೂ ಉತ್ಸಾಹದಿಂದ ಭಾಗವಹಿಸಲು ಸಜ್ಜಾಗಿದ್ದಾರೆ.

ದೇಶದ ಮೊದಲ ಪ್ರಜೆ ಮಹಿಳಾ ರಾಷ್ಟ್ರಪತಿ ಆಗಿರುವುದು ಹೆಮ್ಮೆ: ಜಮ್ಮು ಕಾಶ್ಮೀರ ಮತ್ತು ಲಡಾಖ್ ನಿರ್ದೇಶನಾಲಯದ 20 ವರ್ಷದ ಯುವತಿ ಈಟಿವಿ ಭಾರತದೊಂದಿಗೆ ಮಾತನಾಡಿ, ಈ ಅವಕಾಶಕ್ಕಾಗಿ ಕಾಯುತ್ತಿದ್ದೆ, ಈಗ ನನ್ನ ಕನಸು ನನಸಾಗಿದೆ. ಇದು ನನಗೆ ಹೆಮ್ಮೆಯ ಕ್ಷಣ. ಏಕೆಂದರೆ ನಾನು ಮೊದಲ ಬಾರಿಗೆ ಗಣರಾಜ್ಯೋತ್ಸವದ ತಂಡದೊಂದಿಗೆ ಕರ್ತವ್ಯ ಪಥದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದೇನೆ. ಇಂದು ಈ ಕನಸು ಈಡೇರಿದೆ. ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಮ್ಮ ದೇಶವನ್ನು ಮಹಿಳಾ ರಾಷ್ಟ್ರಪತಿಗಳು ಮುನ್ನೆಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.

ವಾಸ್ತವವಾಗಿ ಗಣರಾಜ್ಯೋತ್ಸವದ ಪರೇಡ್‌ನ ಬಹುತೇಕ ಎಲ್ಲ ಮೆರವಣಿಗೆಯ ಪಡೆಗಳು ಸಹ ಮಹಿಳಾ ನೇತೃತ್ವದಲ್ಲಿ ನಡೆಯುತ್ತಿವೆ. ಇದು ಮಹಿಳೆಯರಿಗೆ ಉತ್ತಮ ಪ್ರೇರಣೆ. ಸಮಾಜದ ಎಲ್ಲ ಸಂಕೋಲೆಗಳನ್ನು ಮೀರಿ, ಜಮ್ಮು ಕಾಶ್ಮೀರ ಪ್ರದೇಶದ ಹುಡುಗಿಯರು ಇಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಥಮ ಬಾರಿಗೆ ಪರೇಡ್ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ. ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಭಾರತದ ಉತ್ತಮ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.

ಸಿಆರ್‌ಪಿಎಫ್, ನೌಕಾಪಡೆ ಆರ್‌ಡಿಸಿಯಲ್ಲೂ ಮಹಿಳೆಯರಿಗೆ ಆದ್ಯತೆ: ದೆಹಲಿ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಎನ್‌ಸಿಸಿ ಕೆಡೆಟ್ ಇಶಿತಾ ಶುಕ್ಲಾ ಮಾತನಾಡಿ, ನಾನು ಆರ್‌ಡಿಸಿ 2023 ರ ಪಡೆಯಲ್ಲಿ ಭಾಗವಹಿಸಿದ್ದೇನೆ. ಸಿಆರ್‌ಪಿಎಫ್ ಮತ್ತು ಭಾರತೀಯ ನೌಕಾಪಡೆ ಆರ್‌ಡಿಸಿ ಮಹಿಳೆಯರು ಮುನ್ನಡೆಸುತ್ತಿದ್ದು, ಅವರಿಂದ ಸ್ಫೂರ್ತಿಗೊಂಡಿದ್ದೇನೆ. ಅವರು ನನಗೆ ಸಶಸ್ತ್ರ ಪಡೆಗಳಿಗೆ ಸೇರಿಕೊಳ್ಳಿ ಎಂದು ಪ್ರೋತ್ಸಾಹಿಸಿದ್ದಾರೆ. ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದಲ್ಲಿ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಂದಿಸುವ ತನ್ನ ತುಕಡಿಯ ಪಥಸಂಚಲನದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ಭಾರತವು ಸಾಕಷ್ಟು ಪ್ರಗತಿ ಸಾಧಿಸಿಸುತ್ತಿದೆ. ಎನ್‌ಡಿಎ ಮಹಿಳೆಯರ ಮೊದಲ ಬ್ಯಾಚ್ ಎಲ್ಲರಿಗೂ ಮುಕ್ತವಾಗಿದೆ. ಇದರಿಂದ ನಾವು ಸಾಕಷ್ಟು ಎತ್ತರಕ್ಕೆ ಬಂದಿದ್ದೇನೆ ಅನಿಸುತ್ತಿದೆ. ಭಾರತೀಯ ಕಮಾಂಡರ್‌ಗಳು ನೇತೃತ್ವದ ಪಡೆಗಳು ನಮ್ಮನ್ನು ಸಶಸ್ತ್ರ ಪಡೆಗಳಿಗೆ ಸೇರುವಂತೆ ಪ್ರೇರಣೆ ನೀಡುತ್ತಿವೆ. ನಾವು ಈ ವರ್ಷ ಮಹಿಳಾ ರಾಷ್ಟ್ರಪತಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸುತ್ತಿದ್ದು, ಇದು ನಮಗೆ ಸಿಕ್ಕ ಉತ್ತಮ ಅವಕಾಶ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈಶಾನ್ಯ ಭಾರತದ ಯುವತಿಯರು ಹೆಚ್ಚು ಭಾಗವಹಿಸಲಿ: ಇದಲ್ಲದೇ, ಸಿಕ್ಕೀಂ ಮತ್ತು ಪಶ್ಚಿಮ ಬಂಗಾಳ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿರುವ ಸಿಕ್ಕೀಂನ ಮಹಿಳಾ ಕೆಡೆಟ್ ಚೌರಿಂಗ್ ಭುಟಿಯಾ, ಈಶಾನ್ಯ ಭಾರತ ಹೆಚ್ಚಿನ ಮಹಿಳೆಯರು ಸೇರುವಂತೆ ಪ್ರೋತ್ಸಾಹಿಸುವಂತೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ಎನ್​​ಸಿಸಿ ಗಣರಾಜ್ಯೋತ್ಸವದ ಮಾರ್ಚಿಂಗ್ ಪಥಸಂಚಲನದಲ್ಲಿ ಭಾಗವಹಿಸಬೇಕೆಂದರೆ, ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯವಿದೆ. ಮುಂದಿನ ವರ್ಷಗಳಲ್ಲಿ, ನಾನು ಅಧಿಕಾರಿಯಾಗಲು ಬಯಸುತ್ತೇನೆ. ಅದರಲ್ಲಿ ಯುವಕರನ್ನು, ವಿಶೇಷವಾಗಿ ನನ್ನ ಪ್ರದೇಶದ ಮಹಿಳೆಯರು ಇಂಥ ಭವ್ಯ ಪಥಸಂಚಲನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತೇನೆ. ಎನ್‌ಸಿಸಿ ಅಷ್ಟೇ ಅಲ್ಲ, ಇತರ ತುಕಡಿಗಳ ಪಥಸಂಚಲನದ ಭಾಗವಾಗಿದೆ ಎಂದು ಭುಟಿಯಾ ಹೇಳಿದರು.

ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ 659 ಬಾಲಕಿಯರ ಪೈಕಿ 148 ಮಂದಿಯನ್ನು ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆ ಮಾಡಲಾಗಿದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC)ವೂ 1950 ರಲ್ಲಿ ಮಹಿಳಾ ಕೆಡೆಟ್​ಗಳನ್ನು ಸೇರಿಸಿಕೊಂಡಿರುವ ವಿಶ್ವದ ಮೊದಲ ಸಂಸ್ಥೆಯಾಗಿದೆ.

ಇದನ್ನೂಓದಿ:ಗಣರಾಜ್ಯೋತ್ಸವ ಪರೇಡ್​ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಮೂಲಕ ಸೇನಾ ಶಕ್ತಿ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.