ಎರಡು ತಿಂಗಳ ಹಿಂದೆ ಕಾಣೆಯಾದ ಮಹಿಳೆ ಪಾಕ್​ ಜೈಲಿನಲ್ಲಿ ಪತ್ತೆ: ತಾಯಿಗೆ ಬಂತು ವಾಟ್ಸಾಪ್​ ಕಾಲ್​

author img

By

Published : Jan 5, 2023, 8:08 PM IST

Updated : Jan 5, 2023, 8:45 PM IST

missing-assam-woman-found-in-pak-prison

ಅಸ್ಸೋಂನ ಮಹಿಳೆ ಪಾಕಿಸ್ತಾನದ ಜೈಲಿನಲ್ಲಿ ಪತ್ತೆ - ನವೆಂಬರ್ 10ರಿಂದ ನಾಪತ್ತೆಯಾಗಿದ್ದ ಮಹಿಳೆ - ತಾಯಿಗೆ ವಾಟ್ಸಾಪ್​ ಕರೆ ಮೂಲಕ ದೊರೆತ ಮಾಹಿತಿ

ಗುವಾಹಟಿ (ಅಸ್ಸೋಂ): ಸುಮಾರು ಎರಡು ತಿಂಗಳಿಂದ ನಾಪತ್ತೆಯಾಗಿರುವ ಅಸ್ಸೋಂದ ಮಹಿಳೆಯೊಬ್ಬರು ಪಾಕಿಸ್ತಾನದ ಜೈಲು ಸೇರಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾಕಿಸ್ತಾನದ ಅಪರಿಚಿತ ಸಂಖ್ಯೆಯಿಂದ ಮಹಿಳೆಯ ತಾಯಿಗೆ ವಾಟ್ಸಾಪ್​ ಕರೆ ಬಂದಿದೆ. ಇದರ ಆಧಾರದ ಮೇಲೆ ಸಂತ್ರಸ್ತೆಯ ತಾಯಿ ನ್ಯಾಯ ಕೋರಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆಯು ನಾಳೆ (ಶುಕ್ರವಾರ) ನಡೆಯಲಿದೆ.

ಪಾಕಿಸ್ತಾನದ ಜೈಲು ಸೇರಿರುವ ಮಹಿಳೆಯನ್ನು ವಹೀದಾ ಬೇಗಂ ಎಂದು ಗುರುತಿಸಲಾಗಿದೆ. 2022ರ ನವೆಂಬರ್ 10ರಿಂದ ವಹೀದಾ ಕಾಣೆಯಾಗಿದ್ದರು. ಇದರ ನಡುವೆ ಎಂದರೆ ನವೆಂಬರ್​ 30ರಂದು ತಾಯಿ ಆರಿಫಾ ಖಾತುನ್ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಈ ವೇಳೆ ವಹೀದಾ ಬೇಗಂ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ ಎಂಬುದಾಗಿ ಈ ಅಪರಿಚಿತ ಕರೆ ಮಾಡಿದವರು ಆರಿಫಾ ಅವರಿಗೆ ತಿಳಿಸಿದ್ದಾರೆ. ಪಾಕಿಸ್ತಾನಿ ವಕೀಲರೊಬ್ಬರು ಈ ಕರೆ ಮಾಡಿದ್ದರು ಎಂದು ನಂತರ ತಿಳಿದು ಬಂದಿದೆ.

ಆಸ್ತಿ ಮಾರಾಟ ಮಾಡಿದ್ದ ವಾಹೀದಾ: ಅಸ್ಸೋಂದ ನಾಗಾಂವ್‌ ನಿವಾಸಿದ ವಹೀದಾ ಬೇಗಂ ತನ್ನ ಪತಿ ಮೊಹಮ್ಮದ್ ಮೊಹ್ಸಿನ್ ಖಾನ್ ಸಾವಿನ ನಂತರ ಆಸ್ತಿಯನ್ನು ಮಾರಾಟ ಮಾಡಿದ್ದರು. ಇದರಿಂದ 1.60 ಕೋಟಿ ರೂಪಾಯಿ ಹಣ ಬಂದಿತ್ತು. ಆದರೆ, ಇದಾದ ನಂತರದಿಂದ ವಹೀದಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂತ್ರಸ್ತೆಯ ಕುಟುಂಬದವರು ನಾಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಹೀದಾ ಬೇಗಂ
ವಹೀದಾ ಬೇಗಂ

ಪಾಕ್​ನಲ್ಲಿ ನ.25ರಂದು ವಾಹೀದ್ ಬಂಧನ: ನಾಗಾಂವ್​ನಿಂದ ಕಾಣೆಯಾದ 15 ದಿನಗಳಲ್ಲೇ ವಾಹೀದಾ ಬೇಗಂ ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಪಾಕಿಸ್ತಾನಿ ವಕೀಲರೊಬ್ಬರು ವಾಟ್ಸಾಪ್ ಮೂಲಕ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನ.25ರಂದು ವಹೀದಾ ಬೇಗಂ ಅವರನ್ನು ಪಾಕಿಸ್ತಾನದಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ. ಈ ಬಗ್ಗೆ ಲೀಗಲ್ ನೋಟಿಸ್ ಕೂಡ ಕಳುಹಿಸಲಾಗಿದ್ದು, ಅದರ ಪ್ರತಿಯನ್ನು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಕಳುಹಿಸಲಾಗಿದೆ ಎಂದು ಪಾಕ್​ ವಕೀಲರು ತಿಳಿಸಿದ್ದಾರೆ.

ಪೊಲೀಸ್​ ಮೊರೆ ಹೋದ ತಾಯಿ: ವಾಹೀದ್​ ಬಂಧನದ ಬಗ್ಗೆ ಪಾಕಿಸ್ತಾನದಿಂದ ಸುದ್ದಿ ಬಂದ ಬಳಿಕ ವಹೀದಾ ತಾಯಿ ಆರಿಫಾ ಖಾತುನ್ ಅಸ್ಸೋಂ ಪೊಲೀಸರ ಸಹಾಯವನ್ನು ಕೋರಿದ್ದಾರೆ. ಆದರೆ, ಪೊಲೀಸರಿಂದ ಯಾವುದೇ ನೆರವಾಗಲಿ ಮತ್ತು ಸ್ಪಂದನೆಯಾಗಲಿ ದೊರೆತಿಲ್ಲ ಎನ್ನಲಾಗಿದೆ. ಆದ್ದರಿಂದ ದೆಹಲಿ ವಕೀಲ ಸಂತೋಷ್ ಸುಮನ್ ಅವರನ್ನು ಆರಿಫಾ ಸಂಪರ್ಕಿಸಿದ್ದಾರೆ. ಬಳಿಕ ವಕೀಲ ಸಂತೋಷ್ ಸುಮನ್ ಮೂಲಕವೇ ಭಾರತದ ವಿದೇಶಾಂಗ ಸಚಿವಾಲಯ ಮತ್ತು ಭಾರತದಲ್ಲಿನ ಪಾಕಿಸ್ತಾನಿ ರಾಯಭಾರ ಕಚೇರಿಯನ್ನೂ ಆರಿಫಾ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ, ವಿದೇಶಾಂಗ ಇಲಾಖೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವಕೀಲರು ವಹೀದಾ ಬೇಗಂ ವಿಷಯದ ಬಗ್ಗೆ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಈ ಇದರ ವಿಚಾರಣೆಯು ಹೈಕೋರ್ಟ್ ನಡೆಸಲಿದೆ. ಈ ವಿಚಾರಣೆಯ ನಂತರವಷ್ಟೇ ವಹೀದಾ ಬೇಗಂ ಅವರನ್ನು ಭಾರತಕ್ಕೆ ಹೇಗೆ ಹಸ್ತಾಂತರಿಸಬೇಕು ಎಂಬುದನ್ನು ಹೈಕೋರ್ಟ್ ನಿರ್ಧರಿಸಲಿದೆ. ಆದರೆ, ಪಾಕಿಸ್ತಾನಕ್ಕೆ ವಹೀದಾ ಬೇಗಂ ಹೋಗಿದ್ದು ಹೇಗೆ, ಯಾಕೆ ಹೋಗಿದ್ದರು ಎಂಬುದು ಇನ್ನೂ ನಿಗೂಢವಾಗಿದೆ.

ವಾಹೀದ್​ ಬೇಗಂ ಬಳಿ ಪಾಸ್​ಪೋರ್ಟ್ ಇಲ್ಲ: 56 ವರ್ಷದ ವಿಧವೆಯಾದ ಆರಿಫಾ ಖಾತುನ್ ನಮ್ಮನ್ನು ಭೇಟಿ ಮಾಡಿ, ತನ್ನ ಮಗಳು ವಹೀದಾ ಬೇಗಂ ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು. ಈ ಕುರಿತ ದಾಖಲೆಗಳು ಮತ್ತು ಐಎಫ್ಆರ್​ ಪ್ರತಿಯನ್ನು ನಾವು ಪರಿಶೀಲನೆ ನಡೆಸಿದವು. ಇದಾದ ನಂತರದ ಪ್ರಾಥಮಿಕ ಮಾಹಿತಿ ಪ್ರಕಾರ, ವಾಹೀದ್​ ಬೇಗಂ ಬಳಿ ಪಾಸ್​ಪೋರ್ಟ್​ ಸೇರಿ ಯಾವುದೇ ಮಾನ್ಯವಾದ ದಾಖಲೆಗಳು ಇಲ್ಲ. ಹೀಗಾಗಿ ಬಂಧನ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ ಎಂದು ವಕೀಲ ಸಂತೋಷ್ ಸುಮನ್ ವಿವರಿಸಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಕೇಸ್​.. ಮಹಿಳೆಯ ಹೊದಿಕೆ ಮೇಲೆ ಕುಡಿದ ನಶೆಯಲ್ಲಿ ಯೂರಿನ್

Last Updated :Jan 5, 2023, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.