ಫೇಸ್​ಬುಕ್, ಇನ್​ಸ್ಟಾನಲ್ಲಿ ಲಿಂಗಾಧಾರಿತ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಿದ ಮೆಟಾ

author img

By

Published : Jan 11, 2023, 6:00 PM IST

ಫೇಸ್​ಬುಕ್, ಇನ್​ಸ್ಟಾನಲ್ಲಿ ಲಿಂಗಾಧಾರಿತ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಿದ ಮೆಟಾ

ಫೇಸ್​​ಬುಕ್ ಮತ್ತು ಇನ್​ಸ್ಟಾಗ್ರಾಂ ಸಾಮಾಜಿಕ ಮಾಧ್ಯಮಗಳ ಒಡೆತನ ಹೊಂದಿರುವ ಮೆಟಾ ತನ್ನ ಜಾಹೀರಾತು ನೀತಿಗಳಲ್ಲಿ ಹಲವಾರು ಮುಖ್ಯ ಬದಲಾವಣೆಗಳನ್ನು ತಂದಿದೆ. ಲಿಂಗಾಧಾರಿತವಾಗಿ ಜಾಹೀರಾತು ತೋರಿಸುವ ಆಯ್ಕೆಗಳನ್ನು ಮೆಟಾ ರದ್ದುಗೊಳಿಸುತ್ತಿದೆ.

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ತನ್ನ ಜಾಹೀರಾತು ವ್ಯವಸ್ಥೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರುತ್ತಿರುವುದಾಗಿ ಮೆಟಾ ಘೋಷಿಸಿದೆ. ಫೇಸ್​ಬುಕ್ ಮತ್ತು ಇನ್​ ಸ್ಟಾಗ್ರಾಮ್ ನಲ್ಲಿ 18 ವರ್ಷಕ್ಕೂ ಕೆಳಗಿನ ಬಳಕೆದಾರರಿಗೆ ಜಾಹೀರಾತು ತೋರಿಸುವಾಗ ಅವರ ಜಾಹೀರಾತುದಾರರಿಗಿದ್ದ ಲಿಂಗದ ಆಧಾರದಲ್ಲಿ ಜಾಹೀರಾತು ತೋರಿಸುವ ಆಯ್ಕೆಯನ್ನು ಹೊಸ ಅಪ್ಡೇಟ್​​ನಲ್ಲಿ ಮೆಟಾ ತೆಗೆದುಹಾಕುತ್ತಿದೆ. ಫೆಬ್ರವರಿ ತಿಂಗಳಿನಿಂದ ಜಾಹೀರಾತುದಾರರು ಯುವ ಸಮೂಹದ ವಯಸ್ಸು ಮತ್ತು ಅವರ ವಾಸಸ್ಥಳ ಆಧರಿಸಿ ಜಾಹೀರಾತು ತೋರಿಸಲು ಸಾಧ್ಯವಾಗಲಿದೆ ಎಂದು ಮೆಟಾ ಬ್ಲಾಗ್​ಪೋಸ್ಟ್​ನಲ್ಲಿ ಮಂಗಳವಾರ ಹೇಳಿದೆ.

ಹದಿಹರೆಯದವರಿಗೆ ಜಾಹೀರಾತುಗಳನ್ನು ತೋರಿಸಲು ಕಂಪನಿಯು ಬಳಸುವ ಹದಿಹರೆಯದವರ ಕುರಿತಾದ ಏಕೈಕ ಮಾಹಿತಿ ಎಂದರೆ ವಯಸ್ಸು ಮತ್ತು ಸ್ಥಳವಾಗಲಿದೆ. ಇದು ಹದಿಹರೆಯದವರು ತಮ್ಮ ವಯಸ್ಸು ಮತ್ತು ವಾಸಿಸುವ ಸ್ಥಳದಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಉದ್ದೇಶಿಸಿರುವ ಜಾಹೀರಾತುಗಳನ್ನು ನೋಡುವುದನ್ನು ಖಚಿತಪಡಿಸುತ್ತದೆ. ಇದಲ್ಲದೆ, ಮಾರ್ಚ್‌ನಿಂದ ಪ್ರಾರಂಭಿಸಿ 18 ವರ್ಷದೊಳಗಿನ ಬಳಕೆದಾರರು ಜಾಹೀರಾತು ವಿಷಯ ನಿಯಂತ್ರಣಗಳೊಂದಿಗೆ ಫೇಸ್​​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಅವರು ನೋಡುವ ಜಾಹೀರಾತುಗಳ ಪ್ರಕಾರಗಳನ್ನು ನಿರ್ವಹಿಸಲು ಹೆಚ್ಚಿನ ಆಯ್ಕೆಗಳನ್ನು ಹೊಂದಲಿದ್ದಾರೆ.

ನಿರ್ದಿಷ್ಟ ಜಾಹೀರಾತುದಾರರಿಂದ ಯಾವುದೇ ಅಥವಾ ಎಲ್ಲ ಜಾಹೀರಾತುಗಳನ್ನು ಮರೆಮಾಡಲು ಹದಿಹರೆಯದವರು ಆಯ್ಕೆ ಮಾಡಬಹುದು. ನಮ್ಮ ನೀತಿಗಳಲ್ಲಿ ನಾವು ಈಗಾಗಲೇ ನಿರ್ಬಂಧಿಸಿರುವ ವಿಷಯಗಳನ್ನು ಕಡಿಮೆ ಕಾಣಿಸುವಂತೆ ಡೀಫಾಲ್ಟ್ ಮಾಡಲಾಗುತ್ತದೆ. ಆದ್ದರಿಂದ ಹದಿಹರೆಯದವರು ವಯಸ್ಸಿಗೆ ಸರಿಹೊಂದದ ವಿಷಯವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಮೆಟಾ ಹೇಳಿದೆ. ನಮ್ಮ ತಂತ್ರಜ್ಞಾನಗಳಾದ್ಯಂತ ಅವರು ಬಳಸಬಹುದಾದ ಪರಿಕರಗಳು ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳ ಕುರಿತು ಹದಿಹರೆಯದವರಿಗೆ ಹೆಚ್ಚಿನ ಮಾಹಿತಿಯೊಂದಿಗೆ ನಾವು ಹೊಸ ಗೌಪ್ಯತೆ ಪುಟವನ್ನು ಸೇರಿಸಿದ್ದೇವೆ ಎಂದು ಅದು ತಿಳಿಸಿದೆ.

ಪೂರ್ಣಾವಧಿ ಉದ್ಯೋಗದ ಆಫರ್ ಹಿಂಪಡೆಯುತ್ತಿರುವ ಫೇಸ್​​ಬುಕ್: ಹೊಸ ವರ್ಷದಲ್ಲಿ ಉದ್ಯೋಗಿಗಳನ್ನು ಕಡಿತ ಮಾಡುವಿಕೆಗಳು ಮುಂದುವರೆಯುತ್ತಿದ್ದಂತೆ ಮೆಟಾ (ಹಿಂದೆ ಫೇಸ್‌ಬುಕ್) ಕೆಲ ಜನರಿಗೆ ಪೂರ್ಣಾವಧಿಯ ಉದ್ಯೋಗದ ಆಫರ್​​ಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಫೇಸ್​​ಬುಕ್ ಈ ರೀತಿ ಮಾಡುತ್ತಿರುವುದು ಇದೇ ಮೊದಲನೆ ಬಾರಿಯಾಗಿದೆ. ಅದು ತನ್ನ ಇತಿಹಾಸದಲ್ಲಿ ಉದ್ಯೋಗದ ಆಫರ್​​ಗಳನ್ನು ಎಂದಿಗೂ ಈ ರೀತಿ ಹಿಂತೆಗೆದುಕೊಂಡಿರಲಿಲ್ಲ. ಟೆಕ್ ಬರಹಗಾರ ಜೆರ್ಗಲಿ ಓರೋಸ್ ಪ್ರಕಾರ, ಮೆಟಾ ಲಂಡನ್‌ನಲ್ಲಿನ ಉದ್ಯೋಗದ ಆಫರ್​​ಗಳನ್ನು ರದ್ದುಗೊಳಿಸಿದೆ.

ಈ ಬೆಳವಣಿಗೆಯಿಂದ ಪ್ರಭಾವಿತರಾಗಿರುವ ಡೆವಲಪರ್‌ಗಳನ್ನು ಮಾತನಾಡಿಸಿ ತಿಳಿದ ಪ್ರಕಾರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿರುವ ಹೊಸ ಗ್ರ್ಯಾಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಂಪಡೆಯಲಾಗಿದೆ. ಈ ರೀತಿ ಆಗಿರುವ ಸುಮಾರು 20 ಜನರ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿದ್ದಾರೆ. ಮೆಟಾ ತಾನು ಸಹಿ ಮಾಡಿದ ಎಫ್‌ಟಿಇ (ಪೂರ್ಣ-ಸಮಯದ ಉದ್ಯೋಗ) ಆಫರ್​ಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ನನಗೆ ಮೊದಲ ಬಾರಿಗೆ ತಿಳಿದಿದೆ ಎಂದು ಓರೋಸ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಎಫ್‌ಟಿಇ ಆಫರ್​ಗಳಿಗೆ ಒಂದು ವಾರದ ಹಿಂದಿನವರೆಗೂ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಓರೋಸ್ ತಿಳಿಸಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ನೇಮಕಾತಿದಾರರು ತಮ್ಮ ಮೆಟಾ ಆಫರ್‌ಗಳ ಬಗ್ಗೆ ಚಿಂತಿತರಾಗಿದ್ದ ಅಭ್ಯರ್ಥಿಗಳಿಗೆ ಈ ಆಫರ್​​ಗಳು ಸುರಕ್ಷಿತವಾಗಿವೆ ಎಂದು ಓರೋಸ್ ಸ್ಪಷ್ಟಪಡಿಸಿದರು. ಫೇಸ್​​ಬುಕ್ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಿದ್ದು, ವಿಶ್ವಾದ್ಯಂತ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ.

ಇದನ್ನೂ ಓದಿ: ಪ್ರೀತಿಸಿದ್ದ ಯುವತಿಗೆ ಮದುವೆ ನಿಶ್ಚಯ: ಫೇಸ್​ಬುಕ್​ ಲೈವ್​ನಲ್ಲಿ ಕಟ್ಟರ್ ಯಂತ್ರದಿಂದ ಕತ್ತು ಕೊಯ್ದುಕೊಂಡ ಪ್ರಿಯಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.