ಅಕ್ರಮ ಪೈಪ್​ ಗೋಡೌನ್​​ನಲ್ಲಿ ಬೆಂಕಿ.. ಧಗಧಗನೇ ಹೊತ್ತಿ ಉರಿದ ಗೋದಾಮು

author img

By

Published : Oct 14, 2021, 4:42 PM IST

Updated : Oct 14, 2021, 5:26 PM IST

Massive fire in warehouse

ಅಕ್ರಮವಾಗಿ ನಿರ್ಮಾಣ ಮಾಡಿದ್ದ ಗೋಡೌನ್​​ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿರುವ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಪೈಪ್​ ಬೆಂಕಿಗಾಹುತಿಯಾಗಿವೆ.

ರತ್ಲಂ(ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಂ ಪ್ರದೇಶದಲ್ಲಿರುವ ಪೈಪ್​ ಫ್ಯಾಕ್ಟರಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮಿನಲ್ಲಿನ ಪೈಪ್​​ ಸೇರಿದಂತೆ ಅನೇಕ ವಸ್ತು ಧಗಧಗನೇ ಹೊತ್ತಿ ಉರಿದಿವೆ.

ಮೋಹನ್​ ನಗರದ ಗೋಡೌನ್​​ನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿರುವ ಕಾರಣ ಹೊತ್ತಿ ಉರಿದಿದ್ದು, ಯಾವುದೇ ರೀತಿಯ ಅನಾಹುತ ನಡೆಯಬಾರದು ಎಂಬ ಉದ್ದೇಶದಿಂದ ಪಕ್ಕದ ಮನೆಗಳಲ್ಲಿ ವಾಸವಾಗಿದ್ದ ಜನರನ್ನ ಸ್ಥಳಾಂತರ ಮಾಡಲಾಗಿದೆ.

ಅಕ್ರಮ ಪೈಪ್​ ಗೋಡೌನ್​​ನಲ್ಲಿ ಬೆಂಕಿ

ಕಾನೂನು ಬಾಹಿರವಾಗಿ ಈ ಗೋಡೌನ್​ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನ ದೌಡಾಯಿಸಿ, ಬೆಂಕಿ ನಂದಿಸಿವೆ. ಯಾವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ ಪೈಪ್​ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಇದನ್ನೂ ಓದಿರಿ: T-20 ವಿಶ್ವಕಪ್: ಭಾರತ ರಾಹುಲ್​ನನ್ನು ಬ್ಯಾಟಿಂಗ್​ನ ಪ್ರಮುಖ ಅಸ್ತ್ರವನ್ನಾಗಿಸಲಿ: ಕೊಹ್ಲಿಗೆ ಬ್ರೇಟ್​ ಲೀ ಸಲಹೆ

ಈ ಗೋದಾಮು ಅಕ್ರಮವಾಗಿ ನಿರ್ಮಾಣಗೊಂಡಿರುವ ಕಾರಣ ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಬಂಧನ ಮಾಡಲಾಗುವುದು ಎಂದು ಪುರಸಭೆ ಆಯುಕ್ತರು ತಿಳಿಸಿದ್ದಾರೆ.

Last Updated :Oct 14, 2021, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.