'ಇದು ಸ್ಕೂಟರ್​ ಅಲ್ಲ ಕತ್ತೆ' ಓವರ್​ಲೋಡ್​ ವಸ್ತು ತುಂಬಿಕೊಂಡು ರೈಡ್​: ವಿಡಿಯೋ ನೋಡಿ

author img

By

Published : Jun 22, 2022, 7:50 PM IST

ಓವರ್​ಲೋಡ್​ ವಸ್ತು ತುಂಬಿಕೊಂಡು ರೈಡ್​: ವಿಡಿಯೋ

ವ್ಯಕ್ತಿಯೊಬ್ಬ ಸ್ಕೂಟರ್​ ಮೇಲೆ ಮಿತಿಮೀರಿ ವಸ್ತುಗಳನ್ನು ಹೇರಿಕೊಂಡು ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅಪಾಯಕಾರಿ ರೈಡ್​ಗೆ ಟೀಕೆ ವ್ಯಕ್ತವಾಗಿದೆ.

ಈ ವ್ಯಕ್ತಿ ಬೈಕನ್ನು ಕತ್ತೆ ಎಂದೇ ಭಾವಿಸಿದ್ದಾನೆ. ಕಾರಣ, ಇಬ್ಬರು ಕುಳಿತು ಹೋಗಬಹುದಾದ ಬೈಕ್​ನಲ್ಲಿ 10 ಜನರು ಹೊರುವಷ್ಟು ವಸ್ತುಗಳನ್ನು ಸಾಗಿಸಿದ್ದು ಕಂಡುಬಂದಿದೆ. ಈ ಆತಂಕಕಾರಿ ರೈಡಿಂಗ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೆಲಂಗಾಣ ಪೊಲೀಸರೂ ಕೂಡ ಇದನ್ನು ಟ್ವೀಟ್ ಮಾಡಿ​ ಎಚ್ಚರಿಸಿದ್ದಾರೆ.

ವೈರಲ್​ ಆದ ವಿಡಿಯೋದಲ್ಲಿರುವಂತೆ, ವ್ಯಕ್ತಿಯೋರ್ವ ತನ್ನ ಸ್ಕೂಟರ್‌ ತುಂಬಾ ವಸ್ತುಗಳನ್ನು ಹೇರಿಕೊಂಡು ಹ್ಯಾಂಡಲ್​ ಅನ್ನು ಹರಸಾಹಸಪಟ್ಟು ಹಿಡಿದು ಚಲಾಯಿಸುತ್ತಿದ್ದಾನೆ. ಹೆಲ್ಮೆಟ್​ ಧರಿಸಿರುವ ಈತ ಸೀಟಿನ ಕೊನೆಯ ಅಂಚಿನಲ್ಲಿ ಕೂತು ವಸ್ತುಗಳ ಮೇಲೆ ಒರಗಿ ಬಿದ್ದು ಅಪಾಯಕಾರಿಯಾಗಿ ಬೈಕ್​ ರೈಡ್​ ಮಾಡಿಕೊಂಡು ಹೋಗಿದ್ದಾನೆ.

ಸಾಗರ್​ ಎಂಬ ಬಳಕೆದಾರರು ಟ್ವೀಟ್​ ಮಾಡಿ '32 ಜಿಬಿ ಫೋನ್​ 31.9 ರಷ್ಟು ಸ್ಥಾನ ತುಂಬಿಕೊಂಡಿದೆ' ಎಂದು ವ್ಯಂಗ್ಯವಾಗಿ ಬರೆದುಕೊಂಡು ವಿಡಿಯೋ ಶೇರ್​ ಮಾಡಿದ್ದಾರೆ. ಇದಕ್ಕೆ ನಾನಾ ಬಳಕೆದಾರರು ತರಹೇವಾರಿ ಕಾಮೆಂಟ್​ ಮಾಡಿದ್ದು, 'ಹೆಲ್ಮೆಟ್ ಧರಿಸಿ ನಿಯಮಗಳನ್ನು ಅನುಸರಿಸುವ ಒಳ್ಳೆಯ ವ್ಯಕ್ತಿ ಈತ' ಎಂದು ಒಬ್ಬರು ನಗೆ ಚಟಾಕಿ ಹಾರಿಸಿದ್ದರೆ, ಮತ್ತೊಬ್ಬರು 'ಈತನಿಗೆ ದೊಡ್ಡ ದಂಡವನ್ನು ವಿಧಿಸಿ. ಆಗ ಮಾತ್ರ ಈ ಹುಚ್ಚು ಸಾಹಸ ಮಾಡಲಾರ. ಸಾಯುವವರೆಗೂ ಇದನ್ನು ಮರೆಯುವುದಿಲ್ಲ. ಕಾನೂನನ್ನು ಲಘುವಾಗಿ ತೆಗೆದುಕೊಂಡಿದ್ದಾರೆ' ಎಂದು ಟೀಕಿಸಿದ್ದಾರೆ.

ತೆಲಂಗಾಣ ಪೊಲೀಸರು ಟ್ವೀಟ್​ ಮಾಡಿ, 'ತುಂಬಿಕೊಂಡ ಮೊಬೈಲ್​ನ ಜಾಗವನ್ನು ಮರು ಸಂಪಾದಿಸಬಹುದು, ಆದರೆ, ಪ್ರಾಣ ಹೋದಲ್ಲಿ ವಾಪಸ್​ ಬರುವುದಿಲ್ಲ. ಹೀಗಾಗಿ ಜೀವ ಒತ್ತೆ ಇಟ್ಟು ಇಂತಹ ಸಾಹಸ ಮಾಡಬೇಡಿ. ಇದು ಇನ್ನೊಬ್ಬರ ಜೀವಕ್ಕೂ ಅಪಾಯಕಾರಿ' ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 11 ಪ್ರವಾಸಿಗರು, ಇಬ್ಬರು ಮಾರ್ಗದರ್ಶಿಗಳು ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.