ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸಿದ ಮದುರೈ ವ್ಯಕ್ತಿ: ನಿತ್ಯವೂ ಪೂಜೆ ಪುನಸ್ಕಾರ

author img

By

Published : Sep 21, 2022, 1:46 PM IST

ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸಿದ ಮದುರೈ ವ್ಯಕ್ತಿ: ನಿತ್ಯವೂ ಪೂಜೆ ಪುನಸ್ಕಾರ

ಅಗಲಿದ ತಂದೆ-ತಾಯಿಯ ನೆನಪಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ದೇವಸ್ಥಾನ ಕಟ್ಟಿಸಿದ್ದಾರೆ. ಮದುರೈನ ನಿವೃತ್ತ ಸಬ್ ಇನ್ಸಪೆಕ್ಟರ್ ರಮೇಶ ಬಾಬು ಕಟ್ಟಿಸಿರುವ ಈ ದೇವಸ್ಥಾನದ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೆನ್ನೈ: ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರು ಅಗಲಿದ ತಮ್ಮ ತಂದೆ-ತಾಯಿಯ ನೆನಪಿಗಾಗಿ ಮನೆಯಲ್ಲಿಯೇ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಮದುರೈನ ತಮ್ಮ ಮನೆಯಲ್ಲಿ ಕಟ್ಟಿಸಿರುವ ಈ ದೇವಸ್ಥಾನದಲ್ಲಿ ಪ್ರತಿದಿನವೂ ಅವರು ತಪ್ಪದೇ ಪೂಜೆ ಮಾಡುತ್ತಾರೆ.

  • TN | Man in Madurai builds a temple for his mother & father at his home

    I wanted to build a temple for them but work kept me busy. So I built it after retirement & worship them everyday. My parents died after I built this temple, but they're with me: Ramesh Babu, Retired SI pic.twitter.com/nkLhWeVEFO

    — ANI (@ANI) September 20, 2022 " class="align-text-top noRightClick twitterSection" data=" ">

ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸಿರುವ ನಿವೃತ್ತ ಎಸ್​ಐ ರಮೇಶ ಬಾಬು ಈ ಬಗ್ಗೆ ಮಾತನಾಡಿದ್ದು, ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸುವುದು ನನ್ನ ಆಸೆಯಾಗಿತ್ತು. ಆದರೆ ಕೆಲಸದ ಮಧ್ಯೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನಿವೃತ್ತನಾದ ನಂತರ ದೇವಸ್ಥಾನ ನಿರ್ಮಿಸಿದ್ದು, ಪ್ರತಿದಿನ ಅವರ ಮುಂದೆ ಪ್ರಾರ್ಥನೆ ಮಾಡುತ್ತೇನೆ. ನನ್ನ ಪಾಲಕರು ಈ ದೇವಸ್ಥಾನ ಕಟ್ಟಿಸಿದ ನಂತರ ದೈವಾಧೀನರಾದರು. ಆದರೆ ಅವರು ಯಾವಾಗಲೂ ನನ್ನ ಜೊತೆಗೇ ಇರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಗರ್ಭ ಶ್ರೀಮಂತ ಈ 'ತಿರುಪತಿ ತಿಮ್ಮಪ್ಪ'... ಎರಡು ವರ್ಷಗಳಲ್ಲಿ ₹1,500 ಕೋಟಿ ದೇಣಿಗೆ ಸಂಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.