ಗುಂಡಿ ಬಿದ್ದ ರಸ್ತೆಯಲ್ಲಿ ನಡೆದ ಕೇರಳ ವಧು: ಇದು ವೆಡ್ಡಿಂಗ್ ಫೋಟೊಶೂಟ್

author img

By

Published : Sep 21, 2022, 12:38 PM IST

Updated : Sep 21, 2022, 12:56 PM IST

Kerala Bride Walks

ಕೇರಳದ ನವವಧುವೊಬ್ಬರು ಗುಂಡಿ ಬಿದ್ದ ರಸ್ತೆಯಲ್ಲಿ ವೆಡ್ಡಿಂಗ್ ಫೋಟೊಶೂಟ್ ಮಾಡಿ ಇಂಟರ್​ನೆಟ್​​ನಲ್ಲಿ ಸಖತ್ ವೈರಲ್ ಆಗಿದ್ದಾರೆ.

ವಿವಾಹ ಸಮಾರಂಭದ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ವೆಡ್ಡಿಂಗ್ ಫೋಟೊಶೂಟ್ ಮಾಡಲಾಗುತ್ತದೆ. ಆದರೆ ಈಗ ಕೇರಳದ ನವವಧುವೊಬ್ಬರು ವಿನೂತನ ಶೈಲಿಯಲ್ಲಿ ಫೋಟೊಶೂಟ್ ಮಾಡಿಸಿದ್ದು, ಈ ಚಿತ್ರಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಕೆಸರು, ರಾಡಿ ತುಂಬಿರುವ ಗುಂಡಿ ಬಿದ್ದ ನಗರದ ರಸ್ತೆಯೊಂದರಲ್ಲಿ ಕೆಂಪು ಸೀರೆಯುಟ್ಟು ನಸುನಾಚಿ ನಗುತ್ತ ಬರುತ್ತಿರುವ ವಧುವಿನ ಫೋಟೊ, ವಿಡಿಯೋ ನಿಜವಾಗಿಯೂ ಗಮನಸೆಳೆಯುವಂತಿವೆ. ಮದುವೆಯ ಸಮಯದಲ್ಲೂ ಸಾರ್ವಜನಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ ಈ ಕೇರಳ ವಧುವಿನ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದರ ಚಿತ್ರ ಮತ್ತು ವೀಡಿಯೊಗಳನ್ನು ಇನ್​ಸ್ಟಾಗ್ರಾಮ್ ಹ್ಯಾಂಡಲ್ Arrow_weddingcompany ಯಲ್ಲಿ ಪೋಸ್ಟ್ ಮಾಡಲಾಗಿದೆ. ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್ ಎಂಬ ಶೀರ್ಷಿಕೆಯನ್ನು ಇದಕ್ಕೆ ಬರೆಯಲಾಗಿದೆ. ವೀಡಿಯೊವನ್ನು ಸೆಪ್ಟೆಂಬರ್ 11 ರಂದು ಶೇರ್ ಮಾಡಲಾಗಿದ್ದು, ಇದುವರೆಗೆ 4.3 ಮಿಲಿಯನ್ ವೀಕ್ಷಣೆ ಹಾಗೂ 3,70,400 ಲೈಕ್‌ ಬಂದಿವೆ. ವಧುವಿನ ಈ ಸೃಜನಶೀಲ ಫೋಟೊಗ್ರಫಿಯು ಇಂಟರ್ನೆಟ್​ನಲ್ಲಿ ಸಾಕಷ್ಟು ಧೂಳೆಬ್ಬಿಸಿದೆ.

Last Updated :Sep 21, 2022, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.