ಪ್ಲಂಬರ್​ಗೆ ಒಲಿದ ಅದೃಷ್ಟ ಲಕ್ಷ್ಮಿ​​.. ಡ್ರೀಮ್​ 11ನಿಂದ 1 ಕೋಟಿ ರೂ. ಗೆದ್ದ!

author img

By

Published : Oct 13, 2021, 8:44 PM IST

dream XI team

ಪ್ಲಂಬರ್​ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಡ್ರೀಮ್​ 11 ಆಡುವ ಮೂಲಕ 1 ಕೋಟಿ ರೂ. ಗೆದ್ದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಕತಿಹಾರ್​(ಬಿಹಾರ): ಕರ್ನಾಟಕ, ತಮಿಳುನಾಡು ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಆನ್​ಲೈನ್​ ಜೂಜಾಟ ಸಂಪೂರ್ಣವಾಗಿ ನಿಷೇಧಗೊಂಡಿರುವ ಕಾರಣ ಜನಪ್ರೀಯ ಗೇಮಿಂಗ್​ ಆ್ಯಪ್​ ಡ್ರೀಮ್​​ 11 ಕೂಡ ಸ್ಥಗಿತಗೊಂಡಿದೆ. ಆದರೆ ಬಿಹಾರ, ಉತ್ತರ ಪ್ರದೇಶದ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಈಗಲೂ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅನೇಕರು ಈ ಆ್ಯಪ್​ ಮೂಲಕ ಡ್ರೀಮ್​ 11 ಆಡುತ್ತಿದ್ದಾರೆ.

ಮ್​ 11ನಿಂದ 1 ಕೋಟಿ ರೂ. ಗೆದ್ದ!

ಸದ್ಯ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​​ನ ಡ್ರೀಮ್​ 11 ಆಡುವ ಮೂಲಕ ಬಿಹಾರದ ಕತಿಹಾರ್​​ ಜಿಲ್ಲೆಯ ಪ್ಲಂಬರ್​ವೋರ್ವ ಬರೋಬ್ಬರಿ 1 ಕೋಟಿ ರೂ. ಗೆದ್ದಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ನಡುವೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಕನಸಿನ ತಂಡ ಕಣಕ್ಕಿಳಿಸುವ ಮೂಲಕ ಪ್ಲಂಬರ್​ 1 ಕೋಟಿ ರೂ. ಗೆದ್ದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಡ್ರೀಮ್​ 11 ಕಡೆಯಿಂದ ಆತನಿಗೆ ಸಂದೇಶ ಕೂಡ ಬಂದಿದೆ.

ಇದನ್ನೂ ಓದಿರಿ: ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್​ ಇಲೆವೆನ್​​​'ನಿಂದ ಹಣ ಗೆದ್ದು ಬೀಗಿದ..

ಪ್ಲಂಬರ್​​ ಆಗಿ ಕೆಲಸ ಮಾಡುತ್ತಿದ್ದ ಬಬ್ಲು ಮಂಡಲ್​ ಮೊಬೈಲ್​​ನಲ್ಲಿ ಆತನ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿವೋರ್ವ ಡ್ರೀಮ್​ 11 ಆ್ಯಪ್​ ಡೌನ್​​ ಲೋಡ್ ಮಾಡಿದ್ದಾನೆ. ಕಳೆದ 10 ದಿನಗಳಿಂದ ಈತ ಈ ಗೇಮ್​ ಆಡುತ್ತಿದ್ದು, ಚೆನ್ನೈ-ಡೆಲ್ಲಿ ತಂಡಗಳ ನಡುವಿನ ಪಂದ್ಯದ ವೇಳೆ ಸಹ ಕನಸಿನ ತಂಡ ಕಣಕ್ಕಿಳಿಸಿದ್ದನು.

ಈ ವೇಳೆ 1 ಕೋಟಿ ರೂ. ಗೆದ್ದಿದ್ದಾನೆ. ಈಗಾಗಲೇ ಆತನ ಅಕೌಂಟ್​​ಗೆ 70 ಲಕ್ಷ ರೂ. ಜಮಾವಣೆ ಸಹ ಮಾಡಲಾಗಿದೆಯಂತೆ. ಇಷ್ಟೊಂದು ಹಣ ಪಡೆದುಕೊಳ್ಳುತ್ತಿದ್ದಂತೆ ಆತನ ಕುಟುಂಬದಲ್ಲಿ ಸಂತೋಷ ದ್ವಿಗುಣಗೊಂಡಿದ್ದು, ಈ ಹಣದಿಂದ ಹೊಸದಾಗಿ ಮನೆ ಕಟ್ಟಿಸುವುದಾಗಿ ಹೇಳಿದ್ದಾನೆ. ಜೊತೆಗೆ ದೇವಸ್ಥಾನಕ್ಕೆ ಸ್ವಲ್ಪ ಹಣ ದೇಣಿಗೆ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದಾನೆ. ಈ ಹಿಂದೆ ಕೂಡ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕನೋರ್ವ ಡ್ರೀಮ್​ 11 ಆಡುವ ಮೂಲಕ 1 ಕೋಟಿ ರೂ. ಗೆದ್ದಿದ್ದನು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.