ಅಪ್ಪನ ಮನೆಯಿಂದ ಹೊರಹಾಕಿದ ಮಗ..ಕೋರ್ಟ್​ ಎಚ್ಚರಿಕೆಗೆ ಮಣಿದು ಕಾಲ್ತೊಳೆದು ಕ್ಷಮೆ ಕೋರಿದ ಪುತ್ರ

author img

By

Published : May 14, 2022, 10:41 PM IST

jabalpur-son-washed

ಹೆತ್ತ ತಂದೆಯನ್ನೇ ಮನೆಯಿಂದ ಹೊರ ಹಾಕಿದ ಮಗನ ವಿರುದ್ಧ ಎಸ್​ಡಿಎಂಗೆ ದೂರು ನೀಡಿದ್ದ 80 ವರ್ಷದ ಹಿರಿಯ ವ್ಯಕ್ತಿಗೆ ಅಲ್ಲಿನ ಅಧಿಕಾರಿಗಳು ನ್ಯಾಯ ಒದಗಿಸಿದ್ದಾರೆ. ಮಗನಿಗೆ ಬುದ್ಧಿ ಹೇಳಿ ತಂದೆಯನ್ನು ಜೊತೆಗೆ ಕರೆದೊಯ್ಯಲು ಸೂಚಿಸಿದ್ದಾರೆ.

ಜಬಲ್ಪುರ(ಮಧ್ಯಪ್ರದೇಶ): ಮಕ್ಕಳು, ಸೊಸೆಗೆ ವೃದ್ಧ ತಂದೆ- ತಾಯಿ ಭಾರವಾಗಿ ಅವರನ್ನು ಮನೆಯಿಂದ ಆಚೆ ಹಾಕಿದ ಎಷ್ಟೋ ಘಟನೆಗಳು ಸಮಾಜದಲ್ಲಿ ನಡೆದಿವೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ, ಕೋರ್ಟ್​ನ ಮಧ್ಯಸ್ಥಿಕೆ ಮತ್ತು ಎಚ್ಚರಿಕೆಯಿಂದ ಮಗ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ತೊಳೆದು ಪೂಜಿಸಿ ಮನೆಗೆ ಕರೆದೊಯ್ದ ಘಟನೆ ನಡೆದಿದೆ.

ವಿವರ: ಮಧ್ಯಪ್ರದೇಶದ ಜಬಲ್​ಪುರದ 80 ವರ್ಷದ ಹಿರಿಯರಾದ ಆನಂದ್​ಗಿರಿ ಎಂಬುವವರನ್ನು ಅವರ ಮಗ ಮತ್ತು ಸೊಸೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ. ಇದರಿಂದ ನಿರಾಶ್ರಿತರಾದ ಆನಂದ್​ಗಿರಿ ಅವರು ತನಗಾದ ಅನ್ಯಾಯದ ವಿರುದ್ಧ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಕದ ತಟ್ಟಿದ್ದಾರೆ.

ತನ್ನನ್ನು ಮಗ ಮತ್ತು ಸೊಸೆ ಮನೆಯಿಂದ ಹೊರಹಾಕಿದ್ದಾರೆ. ತನಗೆ ನ್ಯಾಯ ಕೊಡಿಬೇಕು ಎಂದು ಆನಂದ್​ಗಿರಿ ಅವರು ದೂರು ಸಲ್ಲಿಸಿದ್ದಾರೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆದ ಆಶಿಶ್​ ಪಾಂಡೆ ಅವರು ತಕ್ಷಣವೇ ಆ ಹಿರಿಯ ಜೀವಿಯ ಮಗನನ್ನು ಸಂಪರ್ಕಿಸಿ ಆತನನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಘಟನೆಯ ವಿವರ ಪಡೆದು, ತಂದೆಯನ್ನು ಹೊರಹಾಕಿದ್ದಕ್ಕೆ ಛೀಮಾರಿ ಹಾಕಿದ್ದಾರೆ. ಅಲ್ಲದೇ, ಹೆತ್ತವರನ್ನು ಹೊರದಬ್ಬಿದ ಆರೋಪದ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಲ್ತೊಳೆದು ಕ್ಷಮೆ ಕೋರಿದ ಮಗ: ಇನ್ನು ತನ್ನ ಹೆತ್ತಪ್ಪನ ಜೊತೆ ಅಮಾನವೀಯವಾಗಿ ನಡೆದುಕೊಂಡ ಮಗ ಮ್ಯಾಜಿಸ್ಟ್ರೇಟರ್​ ಮಾತಿನಿಂದ ಬದಲಾಗಿ ತನ್ನ ತಂದೆಯನ್ನು ಜೊತೆಗೆ ಕರೆದೊಯ್ಯಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಎಸ್​ಡಿಎಂ ಆವರಣದಲ್ಲೇ ತಂದೆಯ ಕಾಲುಗಳನ್ನು ತೊಳೆದು ನಮಸ್ಕರಿಸಿ ಕ್ಷಮೆ ಕೋರಿದ್ದಾರೆ. ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಜನರೆಲ್ಲರೂ ಈ ದೃಶ್ಯವನ್ನು ನೋಡಿ ಎಸ್‌ಡಿಎಂ ಕಾರ್ಯವನ್ನು ಶ್ಲಾಘಿಸಿದರು. ಮಗ ಕ್ಷಮೆಯಾಚಿಸಿದ ನಂತರ ತಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು ಮಗನ ಜೊತೆ ಆತನ ಮನೆಗೆ ತೆರಳಿದ್ದಾರೆ. ಅಲ್ಲದೇ, ಮಗನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಕೋರಿದ್ದಾರೆ. ಇದಲ್ಲವೇ ಅಪ್ಪ ಅಂದ್ರೆ.

ಓದಿ: ಇದು ವಸಾಹತುಶಾಹಿ ಯುಗವೇ.. ವ್ಯಕ್ತಿಯ ಕೈಯಿಂದ ಕಾಲಿನ ಕವರ್​ ತೆಗೆಸಿದ ಯುಪಿ ಸಚಿವೆ ವಿರುದ್ಧ ಭಾರಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.